ಮಡಿಕೇರಿ, ಸೆ. ೧: ಮಡಿಕೇರಿಯಲ್ಲಿ ಕಳೆದ ಹಲವು ಸಮಯದಿಂದ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಜಿಲ್ಲೆಯ ಮೂಲದವರೇ ಆಗಿದ್ದ ಅಧಿಕಾರಿ ಚೆಕ್ಕೇರ ಎಂ. ಪ್ರಮೋದ್ ಇದೀಗ ವರ್ಗಾವಣೆಗೊಂಡಿದ್ದಾರೆ. ಇವರನ್ನು ಉಡುಪಿ ಜಿಲ್ಲೆಯ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರನ್ನಾಗಿ ನಿಯೋಜಿಸಲಾಗಿದ್ದು, ಈಗಾಗಲೇ ಜಿಲ್ಲೆಯಿಂದ ತೆರಳಿದ್ದಾರೆ.