ಗೋಣಿಕೊಪ್ಪಲು, ಆ. ೩೧: ಸ್ಥಳೀಯ ಮಟ್ಟದ ಅಧಿಕಾರಿಗಳಿಗೆ ತೊಂದರೆ ನೀಡುವ ಉದ್ದೇಶವನ್ನು ಪ್ರಾಧಿಕಾರ ಹೊಂದಿಲ್ಲವೆAದು ಸಾರ್ವಜನಿಕ ಕುಂದುಕೊರತೆ ನಿವಾರಣಾ ಪ್ರಾಧಿಕಾರದ ಅಧ್ಯಕ್ಷ ಕೆ.ಕರಿಯಪ್ಪ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿಸಿದರು.
ಪೊನ್ನಂಪೇಟೆ ತಾಲೂಕು ಪಂಚಾಯಿತಿಯ ಸಾಮರ್ಥ್ಯ ಸೌಧದ ಸಭಾಂಗಣದಲ್ಲಿ ವೀರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಸಾರ್ವಜನಿಕರ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ಗ್ರಾ.ಪಂ.ಅಧಿಕಾರಿಗಳು, ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಬೇಕು. ನಾಗರಿಕರಿಗೆ ಮೂಲಭೂತ ಸೌಕರ್ಯವನ್ನು ಒದಗಿಸುವುದು ಪಂಚಾಯಿತಿಯ ಜವಾಬ್ದಾರಿಯಾ ಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ತಮ್ಮ ದಿನನಿತ್ಯದ ಒತ್ತಡದ ನಡುವೆ ಸಾರ್ವಜನಿಕರ ಕೆಲಸಗಳನ್ನು ನಿರ್ವಹಿಸಬೇಕು. ಒಂದು ವೇಳೆ ಕೆಲಸ ನಿರ್ವಹಿಸಲು ಸಾಧ್ಯವಿಲ್ಲದ ಸಂದರ್ಭ ಸಂಬAಧಿಸಿದ ಅರ್ಜಿದಾರನಿಗೆೆ ಸಕಾರಣ ನೀಡಿ ಹಿಂಬರಹ ನೀಡಬೇಕು. ಇದರಿಂದ ಸಮಸ್ಯೆಗಳು ಕಡಿಮೆಯಾಗಲಿದೆ ಎಂದು ಸಲಹೆ ನೀಡಿದರು.
ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಪ್ರಾಧಿಕಾರದ ನಾಮಫಲಕವನ್ನು ಪ್ರದರ್ಶನ ಮಾಡಬೇಕು. ಇದರಲ್ಲಿ ಪ್ರಾಧಿಕಾರ ಪ್ರಮುಖರ ದೂರವಾಣಿಯನ್ನು ನಮೂದಿಸಬೇಕು. ಗ್ರಾ.ಪಂ.ನಲ್ಲಿ ನಾಗರಿಕರ ಅಗತ್ಯ ಸೇವೆಗಳಾದ ಕುಡಿಯುವ ನೀರು ಸರಬರಾಜು, ರಸ್ತೆÀ, ಆರೋಗ್ಯ, ಬೀದಿ ದೀಪ, ನೈರ್ಮಲ್ಯಕರಣ, ವಿವಿಧ ಯೋಜನೆಯಡಿ ಫಲಾನುಭವಿಗಳ ಆಯ್ಕೆಯಲ್ಲಿನ ಲೋಪದೋಷ ಅಲ್ಲದೆ ಯಾವುದೇ ದಸ್ತಾವೇಜುಗಳ ಅಥವಾ ಪ್ರಮಾಣ ಪತ್ರ ಮಂಜೂರು ಮಾಡುವುದು ಅಥವಾ ಹೊರಡಿಸುವುದು ಇಂತಹ ವಿಷಯಗಳಲ್ಲಿ ನಾಗರಿಕರಿಗೆ ತೊಂದರೆ ಆಗಬಾರದು. ಒಂದು ವೇಳೆ ಸಮಸ್ಯೆ ಇದ್ದಲ್ಲಿ ದಾಖಲೆ ಸಹಿತ ನಾಗರಿಕರಿಗೆ ಮಾಹಿತಿ ಒದಗಿಸುವುದು ಕಡ್ಡಾಯವಾಗಿದೆ ಎಂದು ಸೂಚಿಸಿದರು.
ಸರಕುಗಳು ಹಾಗೂ ಸೇವೆಗಳನ್ನು ಒದಗಿಸಲು ಹಾಗೂ ನೀಡಲು ನಿರ್ಲಕ್ಷಿಸುವ ವ್ಯಕ್ತಿ ಅಥವಾ ಗ್ರಾಮ ಅಧಿಕಾರಿಯ ಮೇಲೆ ನಾಗರಿಕರು ದೂರು ನೀಡಿದ ಸಂದರ್ಭ ಪ್ರಾಧಿಕಾರವು ಇದನ್ನು ಗಂಭೀರವಾಗಿ ಪರಿಗಣಿಸಿ ಅಧಿಕಾರಿಗಳಿಗೆ ದಂಡ ವಿಧಿಸುವ ಅಧಿಕಾರವಿದೆ. ಅಲ್ಲದೆ ಅಧಿಕಾರಿಗಳು ಗಂಭೀರ ಪ್ರಕರಣಗಳಲ್ಲಿ ತಪ್ಪು ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಲ್ಲಿ ಅದನ್ನು ಪ್ರಾಧಿಕಾರವು ಪರಿಶೀಲಿಸಿ ಅಗತ್ಯ ಶಿಸ್ತು ಕ್ರಮ ಕೈಗೊಳ್ಳಲು ಸಂಬAಧಿಸಿದ ಜಿಲ್ಲಾ ಪಂಚಾಯಿತಿ ವಿಷಯಗಳಲ್ಲಿ ನಾಗರಿಕರಿಗೆ ತೊಂದರೆ ಆಗಬಾರದು. ಒಂದು ವೇಳೆ ಸಮಸ್ಯೆ ಇದ್ದಲ್ಲಿ ದಾಖಲೆ ಸಹಿತ ನಾಗರಿಕರಿಗೆ ಮಾಹಿತಿ ಒದಗಿಸುವುದು ಕಡ್ಡಾಯವಾಗಿದೆ ಎಂದು ಸೂಚಿಸಿದರು.
ಸರಕುಗಳು ಹಾಗೂ ಸೇವೆಗಳನ್ನು ಒದಗಿಸಲು ಹಾಗೂ ನೀಡಲು ನಿರ್ಲಕ್ಷಿಸುವ ವ್ಯಕ್ತಿ ಅಥವಾ ಗ್ರಾಮ ಅಧಿಕಾರಿಯ ಮೇಲೆ ನಾಗರಿಕರು ದೂರು ನೀಡಿದ ಸಂದರ್ಭ ಪ್ರಾಧಿಕಾರವು ಇದನ್ನು ಗಂಭೀರವಾಗಿ ಪರಿಗಣಿಸಿ ಅಧಿಕಾರಿಗಳಿಗೆ ದಂಡ ವಿಧಿಸುವ ಅಧಿಕಾರವಿದೆ. ಅಲ್ಲದೆ ಅಧಿಕಾರಿಗಳು ಗಂಭೀರ ಪ್ರಕರಣಗಳಲ್ಲಿ ತಪ್ಪು ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಲ್ಲಿ ಅದನ್ನು ಪ್ರಾಧಿಕಾರವು ಪರಿಶೀಲಿಸಿ ಅಗತ್ಯ ಶಿಸ್ತು ಕ್ರಮ ಕೈಗೊಳ್ಳಲು ಸಂಬAಧಿಸಿದ ಜಿಲ್ಲಾ ಪಂಚಾಯಿತಿ ಕಡತಗಳನ್ನು ಆದಷ್ಟು ಬೇಗನೇ ಇತ್ಯರ್ಥಗೊಳಿಸಿ ಅಗತ್ಯ ದಾಖಲೆಗಳನ್ನು ಇಡುವಂತೆ ತಿಳಿಸಿದರು. ಗ್ರಾಮೀಣ ಉದ್ಯೋಗದ ಸಹಾಯಕ ನಿರ್ದೇಶಕ ಪಿ.ವಿ.ಶ್ರೀನಿವಾಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪೊನ್ನಂಪೇಟೆ ನಿವಾಸಿ ಪಿ.ಬಿ.ಸುನೀತ ತಮ್ಮ ದೂರಿನಲ್ಲಿ ಕಸ ವಿಲೇವಾರಿ, ಕುಡಿಯುವ ನೀರು, ಬೀದಿ ದೀಪ, ಸಿಸಿ ಕ್ಯಾಮೆರಾ, ಒಳಚರಂಡಿ, ನೀರಿಗೆ ಮೀಟರ್ ಅಳವಡಿಸದೆ ಇರುವ ಬಗ್ಗೆ ಇವರು ಕುಂದುಕೊರತೆ ನಿವಾರಣಾ ಪ್ರಾಧಿಕಾರಿಯ ಮುಂದೆ ಖುದ್ದು ತೆರಳಿ ಲಿಖಿತ ದೂರು ಸಲ್ಲಿಸಿದ್ದರು. ಈ ಹಿನ್ನಲೆಯಲ್ಲಿ ಪ್ರಾಧಿಕಾರದ ಅಧ್ಯಕ್ಷರು ಖುದ್ದು ಹಾಜರಾಗಿ ಸ್ಥಳ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.