ಮಡಿಕೇರಿ, ಆ. ೩೧ : ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ವತಿಯಿಂದ ಸಂಘದ ಸದಸ್ಯತ್ವ ಹೊಂದಿರುವ ಮಕ್ಕಳಿಗೆ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ೧೦ನೇ ತರಗತಿ ಹಾಗೂ ದ್ವಿತೀಯ ಪಿಯುಸಿ ಯಲ್ಲಿ ಶೇ. ೯೦ ಕ್ಕಿಂತ ಅಧಿಕ ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳು ಅರ್ಜಿ ಸಲ್ಲಿಸಬಹುದಾಗಿದೆ. ಅಂಕಪಟ್ಟಿ ನಕಲು ಪ್ರತಿ ಮತ್ತು ಪೋಷಕರ ಸದಸ್ಯತ್ವ ದಾಖಲಾತಿಗಳೊಂದಿಗೆ ಸೆ. ೯ ರ ಒಳಗೆ ತಮ್ಮ ಹತ್ತಿರದ ಶಾಖೆಗಳಿಗೆ ಅರ್ಜಿ ಸಲ್ಲಿಸುವಂತೆ ಪ್ರಕಟಣೆ ತಿಳಿಸಿದೆ.