ವೀರಾಜಪೇಟೆ, ಸೆ. ೧: ಅಂತರ ರಾಜ್ಯಗಳ ಲಾಟರಿ ಮೂಲಕ ಮಟ್ಕ ದಂಧೆೆ ನಡೆಸುತ್ತಿದ್ದ ಈರ್ವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ವೀರಾಜಪೇಟೆ ತಾಲೂಕಿನ ಕೊಮ್ಮೇತೋಡು ಗ್ರಾಮದ ನಿವಾಸಿ ವೃತ್ತಿಯಲ್ಲಿ ಆಟೋ ಚಾಲಕ ಆಗಿರುವ ಕಿರಣ್ ಲೋಬೊ (೩೪) ಮತ್ತು ಚೋಕಂಡಳ್ಳಿ ನಿವಾಸಿ ಅಜೀಜ್ (೩೪) ಬಂಧಿತ ಆರೋಪಿಗಳು.

ವೀರಾಜಪೇಟೆ ಚೋಕಂಡಳ್ಳಿ ಗ್ರಾಮದಲ್ಲಿ ಕೆಲವು ವ್ಯಕ್ತಿಗಳು ಮೊಬೈಲ್ ಮೂಲಕ ಮಟ್ಕ ದಂಧೆ ಮಾಡುತ್ತಿರುವುದಾಗಿ ಖಚಿತ ಮಾಹಿತಿಯನ್ನು ಅಧರಿಸಿ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿಗಳು ದಾಳಿ ನಡೆಸಿ ಆರೋಪಿ ಸಹಿತ ೨೧೪೦ ರೂ. ಮತ್ತು ಕೃತ್ಯಕ್ಕೆ ಬಳಸಿದ ಮೊಬೈಲ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತರ ಮೇಲೆ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

ವೀರಾಜಪೇಟೆ ಉಪ ವಿಭಾಗ ಡಿ.ವೈಎಸ್ಪಿ ಮೋಹನ್ ಮತ್ತು ವೃತ್ತ ನಿರೀಕ್ಷಕ ಶಿವರುದ್ರ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಗ್ರಾಮಾಂತರ ಠಾಣೆಯ ಠಾಣಾಧಿಕಾರಿ ಸಿ. ಮಂಜುನಾಥ್ ಮತ್ತು ಸಿಬ್ಬಂದಿಗಳಾದ ಗಿರೀಶ್, ನಂಜುAಡ, ಮನು, ಮಹೇಶ್, ಸಣ್ಣಸ್ವಾಮಿ ಹಾಗೂ ಶ್ರೀಕಾಂತ್ ಭಾಗವಹಿಸಿದ್ದರು.

-ಕಿಶೋರ್ ಕುಮಾರ್ ಶೆಟ್ಟಿ