ಸೋಮವಾರಪೇಟೆ, ಆ. ೩೦ : ಕೊಡಗು ಜಿಲ್ಲಾ ವೀರಶೈವ ಲಿಂಗಾಯತ ಜಂಗಮ ಅರ್ಚಕರು ಹಾಗೂ ಪುರೋ ಹಿತರ ಸಂಘದ ಅಧ್ಯಕ್ಷರಾಗಿ ಮಡಿಕೇರಿ ಬಸವೇಶ್ವರ ದೇವಾಲಯದ ಅರ್ಚಕರಾದ ವೇದಮೂರ್ತಿ ಎಫ್.ಸಿ. ಹಿರೇಮಠ್ ಶಾಸ್ತಿçಗಳು ಆಯ್ಕೆಯಾಗಿದ್ದಾರೆ.

ಇತ್ತೀಚೆಗೆ ಸಂಘದ ಆವರಣದಲ್ಲಿ ಕೀರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ ಸಾನ್ನಿಧ್ಯ ಹಾಗೂ ಮೋಹನಮೂರ್ತಿ ಶಾಸ್ತಿçಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಂದಿನ ಮೂರು ವರ್ಷಗಳ ಅವಧಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಗಿದೆ.

ಪ್ರÀಧಾನ ಕಾರ್ಯದರ್ಶಿಯಾಗಿ ಸೋಮವಾರಪೇಟೆಯ ಯೋಗೇಶ್ ಶಾಸ್ತಿç ಉಪಾಧ್ಯಕ್ಷರಾಗಿ, ಅಮ್ಮತ್ತಿಯ ಮಹೇಶ ಶಾಸ್ತಿç ಖಜಾಂಚಿಯಾಗಿ ಮನುಕುಮಾರ್, ನಿರ್ದೇಶಕರುಗಳಾಗಿ ಅಭಿಮಠ ಮಹೇಶ್, ಪುಷ್ಪಗಿರಿ ನಂದೀಶ್, ಕೊಡ್ಲಿಪೇಟೆ ಸೋಮಶೇಖರ್, ಕೋಗೇಕೊಡಿ ನಂಜುAಡಪ್ಪ, ಸೋಮವಾರಪೇಟೆಯ ಮೋಹನ್ ಮೂರ್ತಿ, ಚಂದ್ರಶೇಖರ್, ತೊರೇನೂರು ಸೋಮಶೇಖರ್, ಗುಮ್ಮನಕೊಲ್ಲಿ ಚಂದ್ರಶೇಖರ್ ಆಯ್ಕೆಯಾಗಿದ್ದಾರೆ.