ಮಡಿಕೇರಿ, ಆ. ೩೦: ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ, ಮುಖ್ಯಮಂತ್ರಿ ಕಾನೂನು ಸಲಹೆಗಾರರೂ ಆಗಿರುವ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಅವರ ಕಚೇರಿ ಸೆ.೧ರಂದು ಬೆಂಗಳೂರಿನ ವಿಧಾನ ಸೌಧದಲ್ಲಿ ಉದ್ಘಾಟನೆಯಾಗಲಿದೆ.
ವಿಧಾನಸೌಧದ ೨ನೇ ಮಹಡಿ ೨೩೭-೨೩೮ ಸಂಖ್ಯೆಯ ಕೊಠಡಿ ಯಲ್ಲಿರುವ ಕಚೇರಿ ಅಂದು ಬೆಳಿಗ್ಗೆ ೧೦ ಗಂಟೆಗೆ ಅಧಿಕೃತವಾಗಿ ಕಾರ್ಯಾರಂಭ ಮಾಡಲಿದೆ ಎಂದು ಪ್ರಕಟಣೆ ತಿಳಿಸಿದೆ.