ಗೋಣಿಕೊಪ್ಪಲು, ಆ. ೩೦: ಕೊಡಗಿನ ಅಮ್ಮತ್ತಿ, ನಾಪೋಕ್ಲು, ಮಾದಾಪುರ, ಆರ್ಜಿ, ಹೆಗ್ಗಳ, ಸೇರಿದಂತೆ ವಿವಿಧ ಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಚರ್ಚ್ನ ಫಾದರ್‌ಗಳು ಸಿದ್ದಾಪುರ ಸಮೀಪದ ಆರೇಂಜ್ ಕೌಂಟಿಯ ಸಭಾಂಗಣದಲ್ಲಿ ಶಾಸಕ ಪೊನ್ನಣ್ಣ ಅವರನ್ನು ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಹಲವು ಭಾಗದ ಗುರುಗಳನ್ನು ಉದ್ದೇಶಿಸಿ ಮಾತನಾಡಿದ ಪೊನ್ನಣ್ಣ ಕ್ಷೇತ್ರದಲ್ಲಿ ಅನೇಕ ಸಮಸ್ಯೆಗಳು ಕಾಡುತ್ತಿವೆ, ವಿಶೇಷವಾಗಿ ಆನೆ-ಮಾನವ ಸಂಘರ್ಷ ದೊಡ್ಡ ಸಮಸ್ಯೆಯಾಗಿ ನಮ್ಮ ಮುಂದಿದೆ. ಇದರಿಂದಾಗಿ ಹಲವು ಅಮೂಲ್ಯ ಜೀವಗಳನ್ನು ನಾವು ಕಳೆದುಕೊಂಡಿದ್ದೇವೆ. ಅರಣ್ಯ ಇಲಾಖೆಯ ಕೆಲವು ಅಧಿಕಾರಿಗಳ ನಿರ್ಲಕ್ಷö್ಯತೆ ಗಮನಿಸಿದ್ದೇನೆ. ಸಮಸ್ಯೆಗಳನ್ನು ಹಂತಹAತವಾಗಿ ಬಗೆ ಹರಿಸಲು ಪ್ರಯತ್ನಗಳನ್ನು ಮಾಡಲಿದ್ದೇನೆ. ಕಂದಾಯ ಹಾಗೂ ಬೆಳೆಗಾರರ ಸಮಸ್ಯೆಗಳ ಬಗ್ಗೆ ಅರಿತಿದ್ದೇನೆ. ಇವೆಲ್ಲವೂ ಮುಂದಿರುವ ಸವಾಲುಗಳಾಗಿವೆ ಎಂದರು. ಕಾರ್ಯಕ್ರಮದಲ್ಲಿ ಎ.ಎಸ್. ಪೊನ್ನಣ್ಣ ಅವರನ್ನು ಕೊಡಗಿನ ಚರ್ಚ್ನ ಗುರುಗಳು ಒಟ್ಟಾಗಿ ಸೇರಿ ಸನ್ಮಾನಿಸಿ, ಮೈಸೂರು ಪೇಟ ಧರಿಸಿ ಗೌರವಿಸಿದರು. ಪ್ರಾಸ್ತಾವಿಕವಾಗಿ ಅಮ್ಮತ್ತಿಯ ರೆ.ಫಾ. ರೆಹಮಂಡ್ ಮಾತನಾಡಿ, ಕ್ಷೇತ್ರಕ್ಕೆ ಹಾಗೂ ಕೊಡಗಿಗೆ ಉತ್ತಮ ಜನಪ್ರತಿನಿಧಿ ಲಭಿಸಿದ್ದಾರೆ.

ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ ಚರ್ಚ್ಗಳಲ್ಲಿಯೂ ಹಾಗೂ ಮೈಸೂರಿನಲ್ಲಿ ಬೃಹತ್ ಪ್ರಮಾಣದ ಸಭೆಯಲ್ಲಿ ಗೌರವಿಸುವ ಕಾರ್ಯ ಕ್ರಮ ನಡೆಯಲಿದೆ ಎಂದರು. ಕಾರ್ಯಕ್ರಮ ದಲ್ಲಿ ಕೆಪಿಸಿಸಿ ರಾಜ್ಯ ವಕ್ತಾರರಾದ ಮೇರಿಯಂಡ ಸಂಕೇತ್ ಪೂವಯ್ಯ, ಅಮ್ಮತ್ತಿಯ ಡಾಮಿ ರೆಜೋರಿಯೊ, ಆರೇಂಜ್ ಕೌಂಟಿಯ ಚರ‍್ಮನ್ ಇಮಾ ನ್ಯುವಲ್ ಥೋಮಸ್ ರಾಮ ಪುರಮ್ ಜೋ ಶ್ಯಾಂ ನಿರೂಪಿಸಿ, ಫಾ. ಜ್ಞಾನ ಪ್ರಕಾಶ್ ವಂದಿಸಿದರು. ಫಾ. ರೆಹೆಮಂಡ್, ಜ್ಞಾನ ಪ್ರಕಾಶ್, ರೋನಿ ರವಿಕುಮಾರ್, ರಾಜೇಶ್, ಪಾಸ್ಕಲ್ ಆನಂದ್ ಸೇರಿದಂತೆ ಅಮ್ಮತ್ತಿಯ ಗುಡ್ ಶಫರ್ಡ್ನ ಕನ್ಯಾಶ್ರೀಗಳು, ಆರೇಂಜ್ ಕೌಂಟಿಯ ಸಿಬ್ಬಂದಿಗಳು ಭಾಗವಹಿಸಿದ್ದರು.