ಕೋವರ್ ಕೊಲ್ಲಿ ಇಂದ್ರೇಶ್
ಬೆAಗಳೂರು, ಆ. ೩೦: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಸೀಮಿತ ಉಚಿತ ವಿದ್ಯುತ್, ಉಚಿತ ಆಹಾರ ಧಾನ್ಯಗಳು, ಉಚಿತ ಬಸ್ ಪ್ರಯಾಣ ಮತ್ತು ಗೃಹಿಣಿಯರಿಗೆ, ನಿರುದ್ಯೋಗಿಗಳಿಗೆ ಮಾಸಿಕ ಭತ್ಯವನ್ನು ನೀಡುವ ತನ್ನ ಐದು ಚುನಾವಣಾ ಪೂರ್ವ ಭರವಸೆಗಳನ್ನು ಅನುಷ್ಠಾನಗೊಳಿಸು ತ್ತಿರುವುದರಿಂದ ಹೆಚ್ಚಿನ ವೇತನ ಮತ್ತು ವಿಸ್ತೃತ ಕಲ್ಯಾಣಕ್ಕಾಗಿ ಬೇಡಿಕೆಗಳ ನಡುವೆ ಕೃಷಿ ಉದ್ಯಮವು ನುರಿತ ಕಾರ್ಮಿಕರ ಕೊರತೆಯನ್ನು ಎದುರಿಸುತ್ತಿದೆ ಎಂದು ಉದ್ಯಮ ಮೂಲಗಳು ತಿಳಿಸಿವೆ.
ರಾಜ್ಯದಲ್ಲಿ ಕೃಷಿ ಉದ್ಯಮದಲ್ಲಿ ೩೦ ಲಕ್ಷ ಕಾರ್ಮಿಕರು ಜೀವನ ಸಾಗಿಸುತ್ತಿದ್ದು ಇದರಲ್ಲಿ ಕಾಫಿ ಉದ್ಯಮವು ೫ ಲಕ್ಷಕ್ಕೂ ಹೆಚ್ಚು ಕಾರ್ಮಿಕರನ್ನು ಹೊಂದಿದೆ ಎಂದು ಮೂಲಗಳು ತಿಳಿಸಿವೆ. ೮ ಗಂಟೆಗಳ ಕೆಲಸಕ್ಕೆ ಕನಿಷ್ಠ ದಿನಗೂಲಿ ೩೬೦ ರೂ.ನಿಂದ ೪೬೦ ರೂ.ಗೆ ಹೆಚ್ಚಳ ಮಾಡಬೇಕು, ಬೋನಸ್ ಮತ್ತು ಪಿಎಫ್‌ನಂತಹ ಪ್ರಯೋಜನಗಳನ್ನು ಕಾರ್ಮಿಕರಿಗೆ ನೀಡಬೇಕೆಂದು ಕಾರ್ಮಿಕ ಸಂಘಟನೆಗಳು ಒತ್ತಾಯಿಸುತ್ತಿವೆ.
ಕಾಫಿ ಕಾರ್ಮಿಕರ ಈ ಬೇಡಿಕೆಗಳು ಈಗಾಗಲೇ ಕಾರ್ಮಿಕರ ಕೊರತೆ, ಬೆಲೆ ಕುಸಿತ, ಹವಾಮಾನ ವೈಪರೀತ್ಯ ಮತ್ತು ರೋಗ ಬಾದೆಗಳಿಂದ ತತ್ತರಿಸುತ್ತಿರುವ ಕಾಫಿ ಬೆಳೆಗಾರರಿಗೆ ಮತ್ತಷ್ಟು ಹೊರೆ ಆಗಲಿದೆ. ಈ ಕುರಿತು ಪತ್ರಕರ್ತರೊಂದಿಗೆ ಮಾತನಾಡಿದ ಕಾಫಿ ಬೆಳೆಗಾರ ಮತ್ತು ಕಾಫಿ ಬೋರ್ಡ್ ಮಾಜಿ ಉಪಾಧ್ಯಕ್ಷ ಎನ್ ಬೋಸ್ ಮಂದಣ್ಣ ಸರ್ಕಾರವು ಸಾಕಷ್ಟು ಉಚಿತ ನೀಡುತ್ತಿರುವುದರಿಂದ ಕಾರ್ಮಿಕರ ಕೊರತೆ ಹೆಚ್ಚಾಗುತ್ತಿದೆ. "ಇದು ಎಸ್ಟೇಟ್‌ಗಳ ಮೇಲೆ ಪರಿಣಾಮ ಬೀರಿದೆ. ಇದು ಮುಂದುವರಿದರೆ, ತೋಟಗಳನ್ನು ನಡೆಸುವುದು ಕಷ್ಟಕರವಾಗಲಿದೆ ಎಂದು ಹೇಳಿದರು.
ಚಿಕ್ಕಮಗಳೂರಿನ ಕಾಫಿ ಬೆಳೆಗಾರ ಶ್ರೀ ಗೌರ, ಉದ್ಯಮವು ಕಾರ್ಮಿಕರ