ಬೆಂಗಳೂರು, ಆ. ೩೦: ತಾ.೨೩ ರಂದು ಚಂದ್ರನ ದಕ್ಷಿಣ ಧ್ರುವಕ್ಕೆ ಇಳಿದು ಇತಿಹಾಸ ಸೃಷ್ಟಿಸಿದ ವಿಕ್ರಂ ಲ್ಯಾಂಡರ್‌ನ ಬಹು ನಿರೀಕ್ಷಿತ ಚಿತ್ರವನ್ನು ಇಸ್ರೋ ಇಂದು ಬಿಡುಗಡೆ ಮಾಡಿದೆ. ಲ್ಯಾಂಡರ್ ಮೂಲಕ ಹೊರಗಿಳಿದು ಚಂದ್ರನಲ್ಲಿನ ಅಂಶಗಳನ್ನು ಪತ್ತೆಹಚ್ಚುತ್ತಿರುವ ಪ್ರಗ್ಯಾನ್ ರೋವರ್, ತನ್ನನ್ನು ಸುರಕ್ಷಿತವಾಗಿ ಚಂದ್ರನೆಡೆಗೆ ತಲುಪಿಸಿದ ವಿಕ್ರಂ ಲ್ಯಾಂಡರ್‌ನ ಚಿತ್ರವನ್ನು ಸೆರೆಹಿಡಿದಿದೆ. ವಿಕ್ರಂ ತನ್ನ ಪರಿಕರಗಳಾದ IಐSಂ (ಚಂದ್ರ ಪದರ, ಒಳಪದರದ ವಿನ್ಯಾಸದ ಬಗ್ಗೆ ತಿಳಿದುಕೊಳ್ಳುವ ಯಂತ್ರ) ಹಾಗೂ ಅಊಚಿSಖಿಇ (ತಾಪಮಾನ ಕಂಡುಹಿಡಿಯುತ್ತಿರುವ ಯಂತ್ರಗಳು) ಈ ಚಿತ್ರದಲ್ಲಿ ಗಮನಿಸಬಹುದಾಗಿದೆ.