ಬಾಳೆಲೆ, ಆ. ೩೦: ಕರ್ನಾಟಕ ಸರ್ಕಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವೀರಾಜಪೇಟೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಾಳೆಲೆ, ವಿಜಯಲಕ್ಷಿö್ಮ ಸಂಯುಕ್ತ ಪದವಿಪೂರ್ವ ಕಾಲೇಜು ಬಾಳೆಲೆ, ಇವರ ಸಂಯುಕ್ತ ಆಶ್ರಯದಲ್ಲಿ ಬಾಳೆಲೆ ವಿಜಯಲಕ್ಷಿö್ಮ ಸಂಯುಕ್ತ ಪದವಿಪೂರ್ವ ಕಾಲೇಜು ಮೈದಾನದಲ್ಲಿ ನಡೆದ ಪ್ರೌಢ ಮತ್ತು ಪ್ರಾಥಮಿಕ ಶಾಲಾ ಬಾಲಕ ಮತ್ತು ಬಾಲಕಿಯರ ವಾಲಿಬಾಲ್ ಪಂದ್ಯಾವಳಿಯನ್ನು ವಿಜಯಲಕ್ಷಿö್ಮ ವಿದ್ಯಾಸಂಸ್ಥೆಯ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ ಉದ್ಘಾಟಸಿದರು.
ಕ್ರೀಡಾ ಕ್ಷೇತ್ರದಲ್ಲಿ ಕ್ರಿಕೆಟ್ ಆಟಗಾರಿಗೆ ಮಾತ್ರ ಹೆಚ್ಚು ಮನ್ನಣೆ ಮತ್ತು ಜನಪ್ರಿಯತೆ ಸಿಗುತ್ತಿತ್ತು. ಅದರೆ ಇತ್ತೀಚಿನ ದಿನಗಳಲ್ಲಿ ಕಬಡ್ಡಿ, ಖೋ-ಖೋ, ವಾಲಿಬಾಲ್, ಹಾಕಿ ಪಂದ್ಯಾವಳಿಗಳು ಹೆಚ್ಚು ಜನಪ್ರಿಯತೆ ಪಡೆದುಕೊಳ್ಳುತ್ತಿದ್ದು ವಿದ್ಯಾರ್ಥಿಗಳು ಈ ಕ್ರೀಡೆಗಳತ್ತ ಗಮನ ಹರಿಸಿ ಭವಿಷ್ಯ ರೂಪಿಸಿಕೊಳ್ಳಲು ಕರೆ ನೀಡಿದರು.
ನಂತರ ಅರು ವಲಯಗಳ ಬಾಲಕ ಬಾಲಕಿಯರ ೨೮ ತಂಡಗಳಿಗೆ ಎರಡು ಅಂಕಣದಲ್ಲಿ ಸಂಜೆಯವರೆಗೂ ಪಂದ್ಯಗಳು ನಡೆದವು. ಪ್ರೌಢ ಶಾಲಾ ಬಾಲಕರ ವಿಭಾಗದ ವಾಲಿಬಾಲ್ ಪಂದ್ಯದಲ್ಲಿ ಬಾಳೆಲೆ ಹೋಬಳಿಯ ವಿಜಯಲಕ್ಷಿö್ಮ ಪ್ರೌಢ ಶಾಲೆ ಪ್ರಥಮ, ಶ್ರೀಮಂಗಲ ಹೋಬಳಿಯ ಜೆ.ಸಿ ಪ್ರೌಢಶಾಲೆ ದ್ವಿತೀಯ, ಬಾಲಕಿಯರ ವಿಭಾಗದಲ್ಲಿ ಅಮ್ಮತ್ತಿ ವಲಯದ ಸರ್ಕಾರಿ ಪ್ರೌಢಶಾಲೆ, ಚನ್ನಯನಕೋಟೆ, ಪ್ರಥಮ. ಪೊನ್ನಂಪೇಟೆ ವಲಯದ ಸರ್ವದೈವತಾ ಪ್ರೌಢಶಾಲೆ ದ್ವಿತೀಯ, ಪ್ರಾಥಮಿಕ ಶಾಲಾ ಬಾಲಕರಲ್ಲಿ ಪೊನ್ನಂಪೇಟೆ ವಲಯದ ಸರ್ವದೈವತಾ ಪ್ರಾಥಮಿಕ ಶಾಲೆ ಪ್ರಥಮ, ವಿರಾಜಪೇಟೆ ಹೋಬಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬೆಟೋಳಿ ದ್ವಿತೀಯ. ಬಾಲಕಿಯರಲ್ಲಿ ಪೊನ್ನಂಪೇಟೆ ವಲಯದ ಸರ್ವದೈವತಾ ಪ್ರಾಥಮಿಕ ಶಾಲೆ ಪ್ರಥಮ, ಬಾಳೆಲೆ ಹೋಬಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾನೂರು ದ್ವಿತೀಯ ಸ್ಥಾನ ಪಡೆದುಕೊಂಡರು. ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷರಾದ ಗಾಯತ್ರಿ, ವಿಜಯಲಕ್ಷಿö್ಮ ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಚಂದ್ರಶೇಖರ್, ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ಕೆ.ಆರ್. ಸುಬ್ಬಯ್ಯ, ಉಪಾಧ್ಯಕ್ಷರಾದ ಯಂ.ಟಿ. ತಮ್ಮಯ್ಯ ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ಪಿ.ಎ. ಪ್ರವೀಣ್, ಕಾರ್ಯದರ್ಶಿ ಪ್ರಭು ಕುಮಾರ್, ದೈಹಿಕ ಶಿಕ್ಷಣ ಶಿಕ್ಷಕರಾದ ಸತ್ಯ, ಕವಿತಾ ಕಾವೇರಮ್ಮ, ಸಿ. ಸುಬ್ಬಯ್ಯ ಚೌವ್ಹಾಣ್, ಮಹೇಶ್ ಹಾಜರಿದ್ದರು. ಪಂದ್ಯಾಟದ ವೀಕ್ಷಕ ವಿವರಣೆಯನ್ನು. ಶಿಕ್ಷಕರಾದ ರಾಘವೇಂದ್ರ ಮತ್ತು ತಿಮ್ಮರಾಜು ನೀಡಿದರು.