ನಾಪೋಕ್ಲು, ಆ. ೩೦: ಕಕ್ಕಬ್ಬೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಳದಲ್ಲಿ ಮಾಜಿ ಸಂಸದ ಡಿ.ಕುಪೇಂದ್ರ ರೆಡ್ಡಿ ತನ್ನ ಸ್ವಂತ ಹಣ ೮೫ ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಪೌಳಿ ಮತ್ತು ಅವರ ಸಂಸದರ ಅನುದಾನ ೨೦ ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಸಮುದಾಯ ಭವನವನ್ನು ರಾಜ್ಯದ ಸಾರಿಗೆ ಮತ್ತು ಧಾರ್ಮಿಕ ದತ್ತಿ ಇಲಾಖೆ ಸಚಿವ ರಾಮಲಿಂಗ ರೆಡ್ಡಿ ಉದ್ಘಾಟಿಸಿದರು.
ನಂತರ ಮಾತನಾಡಿದ ನಾಪೋಕ್ಲು, ಆ. ೩೦: ಕಕ್ಕಬ್ಬೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಳದಲ್ಲಿ ಮಾಜಿ ಸಂಸದ ಡಿ.ಕುಪೇಂದ್ರ ರೆಡ್ಡಿ ತನ್ನ ಸ್ವಂತ ಹಣ ೮೫ ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಪೌಳಿ ಮತ್ತು ಅವರ ಸಂಸದರ ಅನುದಾನ ೨೦ ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಸಮುದಾಯ ಭವನವನ್ನು ರಾಜ್ಯದ ಸಾರಿಗೆ ಮತ್ತು ಧಾರ್ಮಿಕ ದತ್ತಿ ಇಲಾಖೆ ಸಚಿವ ರಾಮಲಿಂಗ ರೆಡ್ಡಿ ಉದ್ಘಾಟಿಸಿದರು.
ನಂತರ ಮಾತನಾಡಿದ ಸಚಿವರ ಗಮನಕ್ಕೆ ತಂದು ದುರಸ್ತಿ ಪಡಿಸಿ ದೇವಳದ ಆಡಳಿತಕ್ಕೆ ವಹಿಸಲಾಗುವುದು. ದೇವಾಲಯಕ್ಕೆ ಬಸ್ ವ್ಯವಸ್ಥೆ ಕಲ್ಪಿಸುವ ಬಗ್ಗೆ ಕೋರಲಾಗಿದೆ. ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭ ದಾನಿಗಳಾದ ಕುಪೇಂದ್ರ ರೆಡ್ಡಿ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ದೇವಳಕ್ಕೆ ಸಂಬAಧಿಸಿದ ಎಲ್ಲಾ ತಕ್ಕಮುಖ್ಯಸ್ಥರು, ಭಕ್ತ ಜನಸಂಘದ ಅಧ್ಯಕ್ಷ ಕಾಂಡAಡ ಜೋಯಪ್ಪ, ಉಪಾಧ್ಯಕ್ಷ ಪರದಂಡ ಡಾಲಿ, ಕಾರ್ಯದರ್ಶಿ ಬೊಳಂದAಡ ಲಲಿತಾ ನಂದಕುಮಾರ್, ಖಜಾಂಚಿ ನಂಬಡಮAಡ ಸುಬ್ರಮಣಿ, ಭಕ್ತ ಸಂಘದ ನಿರ್ದೇಶಕರುಗಳಾದ ಬಾಚಮಂಡ ಲವ ಚಿಣ್ಣಪ್ಪ, ಕಲಿಯಂಡ ಹ್ಯಾರಿ ಮಂದಣ್ಣ, ಪಾಂಡAಡ ನರೇಶ್, ಡಾ|| ಸಣ್ಣುವಂಡ ಕಾವೇರಪ್ಪ, ಉದಿಯಂಡ ಸುರ ನಾಣಯ್ಯ, ಕೋಡಿಮಣಿಯಂಡ ಸುರೇಶ್, ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಮನ್ ಸುಬ್ರಮಣಿ, ಸಂಘದ ಮಾಜಿ ಅಧ್ಯಕ್ಷ ಕಲ್ಯಾಟಂಡ ಮುತ್ತಪ್ಪ, ನಾಪೋಕ್ಲು ಹೋಬಳಿ
(ಮೊದಲ ಪುಟದಿಂದ) ಕಂದಾಯ ಪರಿವೀಕ್ಷಕ ರವಿಕುಮಾರ್, ಗ್ರಾಮ ಲೆಕ್ಕಿಗ ಜನಾರ್ಧನ, ದೇವಳದ ಪಾರುಪತ್ತೆಗಾರ ಪರದಂಡ ಪ್ರಿನ್ಸ್ ತಮ್ಮಪ್ಪ ಸೇರಿದಂತೆ ಭಕ್ತಾದಿಗಳು ಇದ್ದರು.
ಕಾರ್ಯಕ್ರಮದ ಅಂಗವಾಗಿ ಮಂಗಳವಾರ ಸಂಜೆ ೫ ಗಂಟೆಯಿAದ ರಾತ್ರಿ ೮.೩೦ರ ವರೆಗೆ ಪುಣ್ಯಾಹ ವಾಚನ, ಆಶ್ಲೇಷ ಬಲಿ, ವಾಸ್ತು ಹೋಮ, ಸುದರ್ಶನ ಹೋಮ, ವಾಸ್ತು ಬಲಿ ನಡೆಯಿತು. ಬುಧವಾರ ಬೆಳಿಗ್ಗೆ ೫ ಗಂಟೆಗೆ ಲಕ್ಷಿö್ಮÃ ಗಣಪತಿ ಹೋಮ ರುದ್ರಾಭೀಷೇಕ ಶತ ರುದ್ರಾಭಿಷೇಕ, ರುದ್ರಹೋಮ, ಸುಬ್ರಮಣ್ಯ ಹೋಮ ನಡೆಸಲಾಯಿತು.
ದೇವಳದಲ್ಲಿ ಭಕ್ತಾದಿಗಳಿಂದ ತುಲಾಭಾರ ಸೇವೆ ಸೇರಿದಂತೆ ಪೂಜೆ, ದೇವರ ಬಲಿ, ನೃತ್ಯ ಬಲಿ ನಡೆಯಿತು. ದೇವಳದ ಧಾರ್ಮಿಕ ಕಾರ್ಯಕ್ರಮಗಳು ದೇವಳದ ಪ್ರಧಾನ ಅರ್ಚಕ ಕುಶಾ ಭಟ್ ನೇತೃತ್ವದಲ್ಲಿ ನಡೆದರೆ, ಹೋಮ, ಹವನಾದಿಗಳನ್ನು ತೀರ್ಥಹಳ್ಳಿಯ ರಾಘವೇಂದ್ರ ಉಪಾಧ್ಯಯರ ತಂಡದಿAದ ನಡೆಸಲಾಯಿತು.