ಸಿದ್ದಾಪುರ, ಆ. ೩೧: ಪ್ರವಾಹ ಪೀಡಿತ ಪ್ರದೇಶದ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಜಾಗ ಗುರುತಿಸಲಾಗಿದೆ ಎಂದು ಶಾಸಕ ಹಾಗೂ ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ತಿಳಿಸಿದರು.
ಸಿದ್ದಾಪುರ ಪಂಚಾಯಿತಿಯ ಸಭಾಂಗಣದಲ್ಲಿ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದರು. ನದಿ ತೀರದ ನಿವಾಸಿಗಳಿಗೆ ಈವರೆಗೂ ಪುನರ್ವಸತಿಗೆ ಜಾಗ ಗುರುತಿಸಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಶಾಸಕರು ಮಾಲ್ದಾರೆಯ ಬಳಿ ೧೦ ಎಕರೆ ಜಾಗವನ್ನು ಗುರುತಿಸಲಾಗಿದ್ದು, ನದಿ ತೀರದ ಸಂತ್ರಸ್ತರಿಗೆ ಶಾಶ್ವತ ಸೂರು ಕಲ್ಪಿಸುವ ಯೋಜನೆಯನ್ನು ರೂಪಿಸಲಾಗಿದೆ ಎಂದರು.
ಸಾಮಾಜಿಕ ಕಾರ್ಯಕರ್ತ ಸಮ್ಮದ್ ಮಾತನಾಡಿ, ಸಿದ್ದಾಪುರ ವ್ಯಾಪ್ತಿಯ ಸುತ್ತಮುತ್ತಲ ಪ್ರದೇಶಗಳಲ್ಲಿ ಕಾಫಿ ತೋಟಗಳಲ್ಲಿ ಕಾಡಾನೆಗಳು ಬೀಡು ಬಿಟ್ಟಿವೆ. ಅಲ್ಲದೇ ಮಾನವನ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿವೆ. ಸರ್ಕಾರದ ವತಿಯಿಂದ ಶಾಶ್ವತ ಯೋಜನೆಯನ್ನು ರೂಪಿಸುವಂತೆ ಶಾಸ ಕರ ಬಳಿ ಮನವಿ ಮಾಡಿಕೊಂಡರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಪೊನ್ನಣ್ಣ ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಇತ್ತೀಚೆಗೆ ತಾನು ಮುಖ್ಯಮಂತ್ರಿಗಳ ಹಾಗೂ ಅರಣ್ಯ ಸಚಿವರ ಗಮನ ಸೆಳೆದಿದ್ದೇನೆ. ಈ ಹಿನ್ನೆಲೆಯಲ್ಲಿ ಜಿಲ್ಲೆಗೆ ಅರಣ್ಯ ಸಚಿವರು ಭೇಟಿ ನೀಡಿ ಕಾಡಾನೆಗಳ ಹಾವಳಿಗಳನ್ನು ನಿಯಂ ತ್ರಣಕ್ಕೆ ತರಲು ರೈಲ್ವೆ ಬ್ಯಾರಿಕೇಡ್, ಸೋಲಾರ್‌ಬೇಲಿ, ಕಂದಕ ನಿರ್ಮಾಣ ಗಳ ಯೋಜನೆಯನ್ನು ತ್ವರಿತಗತಿ ಯಲ್ಲಿ ಮಾಡಲು ಅಧಿಕಾರಿಗಳಿಗೆ ಸೂಚ ನೆಯನ್ನು ನೀಡಿರುವುದಾಗಿ ತಿಳಿಸಿದರು.
ಅಲ್ಲದೇ ವೀರಾಜಪೇಟೆ ವಲ ಯದ ವ್ಯಾಪ್ತಿಯಲ್ಲಿ ಉಪಟಳ ನೀಡುತ್ತಿರುವ ೫೦ ಕಾಡಾನೆಗಳನ್ನು ಸೆರೆಹಿಡಿಯಲು ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಲಾಗಿದೆ ಎಂದು ಮಾಹಿತಿ ನೀಡಿದರು. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಆನೆಗಳ ಹಾವಳಿ ತಡೆಗಟ್ಟುವುದಾಗಿ ಹೇಳಿದರು.
ಪೊನ್ನಣ್ಣ ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಇತ್ತೀಚೆಗೆ ತಾನು ಮುಖ್ಯಮಂತ್ರಿಗಳ ಹಾಗೂ ಅರಣ್ಯ ಸಚಿವರ ಗಮನ ಸೆಳೆದಿದ್ದೇನೆ. ಈ ಹಿನ್ನೆಲೆಯಲ್ಲಿ ಜಿಲ್ಲೆಗೆ ಅರಣ್ಯ ಸಚಿವರು ಭೇಟಿ ನೀಡಿ ಕಾಡಾನೆಗಳ ಹಾವಳಿಗಳನ್ನು ನಿಯಂ ತ್ರಣಕ್ಕೆ ತರಲು ರೈಲ್ವೆ ಬ್ಯಾರಿಕೇಡ್, ಸೋಲಾರ್‌ಬೇಲಿ, ಕಂದಕ ನಿರ್ಮಾಣ ಗಳ ಯೋಜನೆಯನ್ನು ತ್ವರಿತಗತಿ ಯಲ್ಲಿ ಮಾಡಲು ಅಧಿಕಾರಿಗಳಿಗೆ ಸೂಚ ನೆಯನ್ನು ನೀಡಿರುವುದಾಗಿ ತಿಳಿಸಿದರು.
ಅಲ್ಲದೇ ವೀರಾಜಪೇಟೆ ವಲ ಯದ ವ್ಯಾಪ್ತಿಯಲ್ಲಿ ಉಪಟಳ ನೀಡುತ್ತಿರುವ ೫೦ ಕಾಡಾನೆಗಳನ್ನು ಸೆರೆಹಿಡಿಯಲು ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಲಾಗಿದೆ ಎಂದು ಮಾಹಿತಿ ನೀಡಿದರು. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಆನೆಗಳ ಹಾವಳಿ ತಡೆಗಟ್ಟುವುದಾಗಿ ಹೇಳಿದರು. ಗಳಿಗೆ ಸಮಸ್ಯೆಯಾಗುತ್ತಿದೆ. ಯುವ ಕರು ದುಶ್ಚಟಕ್ಕೆ ಬಲಿಯಾಗುತ್ತಿದ್ದಾರೆ. ಮೈದಾನಕ್ಕೆ ಜಾಗ ಒದಗಿಸುವಂತೆ ಗಮನ ಸೆಳೆದರು.
ದುಬಾರೆಯ ಹಾಡಿಯ ನಿವಾಸಿ ಡೋಬಿ ಮಾತನಾಡಿ, ಸಿದ್ದಾಪುರ ಗ್ರಾಮ ಪಂಚಾಯಿತಿಯ ವ್ಯಾಪ್ತಿಗೆ ಒಳಪಡುವ ದುಬಾರೆಯ ಹಾಡಿಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇದೆ. ವಿದ್ಯುತ್, ರಸ್ತೆ ಹಾಗೂ ಶಾಲೆಯ ಸುತ್ತಲು ಸಮಸ್ಯೆಗಳಿದ್ದು, ಸಮಸ್ಯೆಗಳನ್ನು ಬಗೆಹರಿಸಿ ಕೊಡುವಂತೆ ಮನವಿ ಮಾಡಿದರು.
ವಿ.ಕೆ. ಬಷೀರ್ ಮಾತನಾಡಿ, ಸಿದ್ದಾಪುರದ ಭಾಗದಲ್ಲಿ ಚುನಾವಣೆ ಮುಂಚಿತ ತರಾತುರಿಯಲ್ಲಿ ರಸ್ತೆ ಕಾಮಗಾರಿ ಮಾಡಲಾಗಿದ್ದು, ಅದು ಹೊಂಡ ಗುಂಡಿಗಳಿAದ ಕೂಡಿದೆ. ಕಳಪೆ ಗುಣಮಟ್ಟದಿಂದ ಕೂಡಿರುವ ರಸ್ತೆಯ ಬಗ್ಗೆ ಲೋಕೋಪಯೋಗಿ ಇಲಾಖಾಧಿಕಾರಿಗಳ ವಿರುದ್ಧ ಆರೋಪಿಸಿದರು. ಅಲ್ಲದೇ ಲೋಕೋ ಪಯೋಗಿ ಇಲಾಖೆಗೆ ಸೇರಿದ ಸಿದ್ದಾಪುರದ ಮೈಸೂರು ರಸ್ತೆಯ ಲ್ಲಿರುವ ವಸತಿಗೃಹದ ಕಾಮಗಾರಿ ಸಂಪೂರ್ಣ ಮುಕ್ತಾಯಗೊಳಿಸದೇ ಕಾಡು ಪಾಲಾಗಿದೆ ಎಂದು ಪ್ರಸ್ತಾಪಿ ಸಿದರು. ಕೂಡಲೇ ಈ ಬಗ್ಗೆ ಗಮನ ಹರಿಸಲು ಶಾಸಕರು ಸೂಚಿಸಿದರು.
ಎನ್.ಕೆ. ಅನಿಲ್ ಮಾತನಾಡಿ, ಸಿದ್ದಾಪುರ ವ್ಯಾಪ್ತಿಯಲ್ಲಿ ಕಾರ್ಮಿಕರು ಅಧಿಕವಾಗಿದ್ದು, ಸರ್ಕಾರಿ ಆಸ್ಪತ್ರೆಯನ್ನೇ ಅವಲಂಬಿಸಿ ಕೊಂಡಿದ್ದಾರೆ. ಇಲ್ಲಿಗೆ ಮಹಿಳೆ ಪ್ರಸೂತಿ ವೈದ್ಯರನ್ನು ನೇಮಕ ಮಾಡುವಂತೆ ಕೋರಿದರು. ಮೂಸಾ ಮಾತನಾಡಿ, ಸಿದ್ದಾಪುರ ವ್ಯಾಪ್ತಿಯ ಶಾಲೆಗಳು ವೀರಾಜಪೇಟೆ ತಾಲೂಕಿಗೆ ಸೇರುತ್ತಿದೆ. ಆದರೆ ಶೈಕ್ಷಣಿಕ ಗಳಿಗೆ ಸಮಸ್ಯೆಯಾಗುತ್ತಿದೆ. ಯುವ ಕರು ದುಶ್ಚಟಕ್ಕೆ ಬಲಿಯಾಗುತ್ತಿದ್ದಾರೆ. ಮೈದಾನಕ್ಕೆ ಜಾಗ ಒದಗಿಸುವಂತೆ ಗಮನ ಸೆಳೆದರು.
ದುಬಾರೆಯ ಹಾಡಿಯ ನಿವಾಸಿ ಡೋಬಿ ಮಾತನಾಡಿ, ಸಿದ್ದಾಪುರ ಗ್ರಾಮ ಪಂಚಾಯಿತಿಯ ವ್ಯಾಪ್ತಿಗೆ ಒಳಪಡುವ ದುಬಾರೆಯ ಹಾಡಿಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇದೆ. ವಿದ್ಯುತ್, ರಸ್ತೆ ಹಾಗೂ ಶಾಲೆಯ ಸುತ್ತಲು ಸಮಸ್ಯೆಗಳಿದ್ದು, ಸಮಸ್ಯೆಗಳನ್ನು ಬಗೆಹರಿಸಿ ಕೊಡುವಂತೆ ಮನವಿ ಮಾಡಿದರು.
ವಿ.ಕೆ. ಬಷೀರ್ ಮಾತನಾಡಿ, ಸಿದ್ದಾಪುರದ ಭಾಗದಲ್ಲಿ ಚುನಾವಣೆ ಮುಂಚಿತ ತರಾತುರಿಯಲ್ಲಿ ರಸ್ತೆ ಕಾಮಗಾರಿ ಮಾಡಲಾಗಿದ್ದು, ಅದು ಹೊಂಡ ಗುಂಡಿಗಳಿAದ ಕೂಡಿದೆ. ಕಳಪೆ ಗುಣಮಟ್ಟದಿಂದ ಕೂಡಿರುವ ರಸ್ತೆಯ ಬಗ್ಗೆ ಲೋಕೋಪಯೋಗಿ ಇಲಾಖಾಧಿಕಾರಿಗಳ ವಿರುದ್ಧ ಆರೋಪಿಸಿದರು. ಅಲ್ಲದೇ ಲೋಕೋ ಪಯೋಗಿ ಇಲಾಖೆಗೆ ಸೇರಿದ ಸಿದ್ದಾಪುರದ ಮೈಸೂರು ರಸ್ತೆಯ ಲ್ಲಿರುವ ವಸತಿಗೃಹದ ಕಾಮಗಾರಿ ಸಂಪೂರ್ಣ ಮುಕ್ತಾಯಗೊಳಿಸದೇ ಕಾಡು ಪಾಲಾಗಿದೆ ಎಂದು ಪ್ರಸ್ತಾಪಿ ಸಿದರು. ಕೂಡಲೇ ಈ ಬಗ್ಗೆ ಗಮನ ಹರಿಸಲು ಶಾಸಕರು ಸೂಚಿಸಿದರು.
ಎನ್.ಕೆ. ಅನಿಲ್ ಮಾತನಾಡಿ, ಸಿದ್ದಾಪುರ ವ್ಯಾಪ್ತಿಯಲ್ಲಿ ಕಾರ್ಮಿಕರು ಅಧಿಕವಾಗಿದ್ದು, ಸರ್ಕಾರಿ ಆಸ್ಪತ್ರೆಯನ್ನೇ ಅವಲಂಬಿಸಿ ಕೊಂಡಿದ್ದಾರೆ. ಇಲ್ಲಿಗೆ ಮಹಿಳೆ ಪ್ರಸೂತಿ ವೈದ್ಯರನ್ನು ನೇಮಕ ಮಾಡುವಂತೆ ಕೋರಿದರು. ಮೂಸಾ ಮಾತನಾಡಿ, ಸಿದ್ದಾಪುರ ವ್ಯಾಪ್ತಿಯ ಶಾಲೆಗಳು ವೀರಾಜಪೇಟೆ ತಾಲೂಕಿಗೆ ಸೇರುತ್ತಿದೆ. ಆದರೆ ಶೈಕ್ಷಣಿಕ ಮುಕ್ತಾಯವಾದ ಕೂಡಲೇ ಗ್ರಾಮ ಪಂಚಾಯಿತಿ ಸದಸ್ಯರುಗಳನ್ನು ಹಾಗೂ ತಾಲೂಕು ಕಾರ್ಯ ನಿರ್ವಾಹಣಾಧಿಕಾರಿಗಳನ್ನು ಕರೆದು ಕೊಂಡು ಸಂತೆ ಮಾರುಕಟ್ಟೆಗೆ ತೆರಳಿದರು. ರಸ್ತೆ ಬದಿಯಲ್ಲಿ ಕಸಗಳನ್ನು ಶುಚಿತ್ವಗೊಳಿಸಲು ತಿಳಿಸಿದರು.
ಸಭೆಯಲ್ಲಿ ಸಿದ್ದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮ ಗೋಪಾಲ್, ಉಪಾಧ್ಯಕ್ಷ ಹೆಚ್.ಎಸ್. ಪಳನಿಸ್ವಾಮಿ, ವೀರಾಜಪೇಟೆ ತಾಲೂಕು ತಹಶೀಲ್ದಾರ್ ಎನ್.ಎನ್. ರಾಮಚಂದ್ರ, ತಾಲೂಕು ಕಾರ್ಯನಿರ್ವಹಣಾಧಿಕಾರಿ ಅಪ್ಪಣ್ಣ, ಗ್ರಾ.ಪಂ. ಪಿಡಿಓ ಮನಮೋಹನ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು, ತಾಲೂಕು ವೈದ್ಯಾಧಿಕಾರಿ ಡಾ. ಯತಿರಾಜ್, ಗ್ರಾ.ಪಂ. ಸದಸ್ಯರುಗಳು ಹಾಜರಿದ್ದರು. ಇದೇ ಸಂದರ್ಭ ಸಿದ್ದಾಪುರ ಗ್ರಾ.ಪಂ. ವತಿಯಿಂದ ಶಾಸಕ ಪೊನ್ನಣ್ಣ ಅವರನ್ನು ಸನ್ಮಾನಿಸಲಾಯಿತು.
- ವಾಸು ಎ.ಎನ್.