ಮುಳ್ಳೂರು, ಆ. ೩೦ : ಸಮೀಪದ ಶನಿವಾರಸಂತೆ ಸುಪ್ರಜ ಗುರುಕುಲ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬುಧವಾರ ಸಡಗರ ಸಂಭ್ರಮದಿAದ ರಕ್ಷಾ ಬಂಧನ ಕಾರ್ಯಕ್ರಮವನ್ನು ಆಚರಿಸಲಾಯಿತು.
ಭ್ರಾತೃತ್ವದ ಸಹೋದರ-ಸಹೋದರಿ ಸಂಕೇತವನ್ನು ಸಾರುವ ರಕ್ಷಾ ಬಂಧನದ ಹಬ್ಬದಲ್ಲಿ ವಿದ್ಯಾರ್ಥಿಗಳಿಗೆ ಪರಸ್ಪರ ರಕ್ಷಾ ಬಂಧನವನ್ನು ಕಟ್ಟಿಸಲಾಯಿತು. ವಿದ್ಯಾರ್ಥಿಗಳು ರಕ್ಷಾ ಬಂಧನ ದಿನವನ್ನು ಸಡಗರ ಸಂಭ್ರಮದಿAದ ಹಬ್ಬದ ವಾತಾವರಣ ಸೃಷ್ಟಿಸುವ ಮೂಲಕ ಆಚರಿಸಿದರು. ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಕ ಯೋಗೇಶ್ ರಕ್ಷಾ ಬಂಧನದ ಮಹತ್ವವನ್ನು ವಿವರಿಸಿದರು. ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆ ಶಿಕ್ಷಕರ ವರ್ಗ ಮತ್ತು ಸಿಬ್ಬಂದಿ ಹಾಜರಿದ್ದರು.ವೀರಾಜಪೇಟೆ: ರಕ್ಷಾ ಬಂಧನ ಅಂಗವಾಗಿ ಬಿಜೆಪಿ ಓ.ಬಿ.ಸಿ. ಘಟಕದ ವತಿಯಿಂದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಣ್ಣು ಹಂಪಲು ವಿತರಣೆ ಮಾಡಲಾಯಿತು.
ತಾಲೂಕು ಓ.ಬಿ.ಸಿ. ಘಟಕದ ಅಧ್ಯಕ್ಷ ಸಾಯಿನಾಥ್ ನಾಯಕ್, ನಗರ ಓ.ಬಿ.ಸಿ. ಘಟಕದ ಕಾರ್ಯದರ್ಶಿ ದರ್ಶನ್, ಸಹ ಕಾರ್ಯದರ್ಶಿ ಸುಭಾಷ್ ಬಿ.ಅರ್., ಅನಿಲ್ ಕುಮಾರ್, ಲೋಕೇಶ್ ಆಚಾರ್ಯ, ಮಂಜು, ಈಶ್ವರ್, ಆಶೋಕ್, ಸೂರಪ್ಪ, ವಿವೇಕ್ ರೈ, ಕುಶಾಲಪ್ಪ ಹಾಗೂ ಕಾರ್ಯಕರ್ತರು ಹಾಜರಿದ್ದರು.
ಪೊನ್ನಂಪೇಟೆ ಶಂಕರÀ ವಿದ್ಯಾಸಂಸ್ಥೆಯಲ್ಲಿ ರಕ್ಷಾ ಬಂಧನ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಕುಟುಂಬ ಪ್ರಭುದನ್ ಸಂಯೋಜಕ ಟಿ.ಸಿ. ಚಂದ್ರನ್ ರಕ್ಷಾ ಬಂಧನ ಮಹತ್ವದ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ರಾಖಿಯನ್ನು ಕಟ್ಟಿ ಸೋದರ-ಸೋದರಿ ಭಾವನೆಯನ್ನು ಹಂಚಿಕೊAಡರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಸಂಸ್ಥೆಯ ಸಿಬ್ಬಂದಿವರ್ಗದವರು ಭಾಗವಹಿದ್ದರು.
ಐಗೂರು ರಾಷ್ಟಿçÃಯ ಸ್ವಯಂ ಸೇವಕ ಸಂಘದ ವತಿಯಿಂದ ‘ರಕ್ಷಾ ಬಂಧನ’ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಸಂಘದ ಸ್ವಯಂ ಸೇವಕರಾದ ಕೆ.ಆರ್. ರದೀಶ್, ಕೀರ್ತನ್, ರೋಷನ್, ಯೋಗೇಶ ಮತ್ತು ಪುನೀತ್ ಇವರು ಮನೆ ಮನೆಗೆ ತೆರಳಿ ಸಾರ್ವಜನಿಕರಿಗೆ ರಕ್ಷೆಗಳನ್ನು ಕಟ್ಟಿದರು.