ಸೋಮವಾರಪೇಟೆ, ಆ. ೩೦: ಕೊಡಗಿನ ಬೆಳೆಗಾರರ ಬಹು ಕಾಲದ ಬೇಡಿಕೆಯಾಗಿರುವ ೧೦ ಹೆಚ್.ಪಿ. ಮೋಟಾರ್ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡುವ ಸಂಬAಧ ಶೀಘ್ರದಲ್ಲೇ ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸುತ್ತೇವೆ. ವಾಡಿಕೆಗಿಂತಲೂ ಕಡಿಮೆ ಪ್ರಮಾಣದ ಮಳೆಯಾಗಿರುವ ಹಿನ್ನೆಲೆ ಬರಪೀಡಿತ ತಾಲೂಕುಗಳ ಘೋಷಣೆ ಸಂಬAಧ ವರದಿ ನೀಡಲು ಜಿಲ್ಲಾಧಿಕಾರಿಗಳಿಗೆ ಸರ್ಕಾರ ನಿರ್ದೇಶನ ನೀಡಿದೆ. ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯ ಅಭಿವೃದ್ಧಿಗೂ ಕಾಳಜಿ ವಹಿಸುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೋಸರಾಜು ಭರವಸೆ ನೀಡಿದ್ದಾರೆ.

ತಾಲೂಕಿನ ಆಡಿನಾಡೂರು ಗ್ರಾಮದಲ್ಲಿ ಕಾಡಾನೆ ಧಾಳಿಗೆ ಸಿಲುಕಿ ಸಾವನ್ನಪ್ಪಿದ ಕೃಷಿಕ ಈರಪ್ಪ ಅವರ ಮನೆಗೆ ಭೇಟಿ ನೀಡಿ, ಕುಟುಂಬದವರಿಗೆ ಪರಿಹಾರ ಧನದ ಚೆಕ್ ವಿತರಿಸಿದ ನಂತರ ಅಬ್ಬೂರುಕಟ್ಟೆಯಲ್ಲಿರುವ ತಾ.ಪಂ. ಮಾಜಿ ಅಧ್ಯಕ್ಷ ಎಸ್.ಎಂ. ಡಿಸಿಲ್ವಾ ಅವರ ಮನೆಗೆ ಭೇಟಿ ನೀಡಿದ ಸಂದರ್ಭ ಮಾಧ್ಯಮದವರ ಪ್ರಶ್ನೆಗಳಿಗೆ ಸಚಿವರು ಉತ್ತರಿಸಿದರು.

ರಾಜ್ಯದ ಇತರ ಜಿಲ್ಲೆಗಳಲ್ಲಿ ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡಲಾಗುತ್ತಿದ್ದು, ಕೊಡಗಿನ ಬೆಳೆಗಾರರ ಬಹುಕಾಲದ ಬೇಡಿಕೆ ಇನ್ನೂ ಈಡೇರಿಲ್ಲ. ಕಾಫಿಯನ್ನು ವಾಣಿಜ್ಯ ಬೆಳೆ ಎಂದು ಗುರುತಿಸಿರುವ ಹಿನ್ನೆಲೆ ಉಚಿತ ವಿದ್ಯುತ್ ಲಭಿಸುತ್ತಿಲ್ಲ. ಇದರಿಂದ ಸಣ್ಣ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿರುವ ಬಗ್ಗೆ ಮಾಧ್ಯಮದವರು ಸಚಿವರ ಗಮನ ಸೆಳೆದರು.

ಇದರೊಂದಿಗೆ ಹಿಂದಿನ ಸರ್ಕಾರ ಡಿಬಿಟಿ ಯೋಜನೆಯ ಮೂಲಕ ವಿದ್ಯುತ್ ಒದಗಿಸಲು ಹಲವಷ್ಟು ಮಾನದಂಡಗಳನ್ನು ನಿಗದಿಪಡಿಸಿದ್ದು, ಇದು ಬೆಳೆಗಾರರಿಗೆ ಪ್ರಯೋಜನ ಆಗುವುದಿಲ್ಲ ಎಂದು ಗಮನಕ್ಕೆ ತರಲಾಯಿತು. ಇದಕ್ಕೆ ಪೂರಕವಾಗಿ ಶಾಸಕ ಡಾ. ಮಂಥರ್ ಗೌಡ ಅವರೂ ಸಹ ದನಿಗೂಡಿಸಿದರು.

ಇದಕ್ಕೆ ಉತ್ತರಿಸಿದ ಬೋಸರಾಜು ಅವರು, ಉಚಿತ ವಿದ್ಯುತ್ ಒದಗಿಸುವ ಸಂಬAಧ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಸಲಾಗುವುದು. ಜಿಲ್ಲೆಯ ಈರ್ವರು ಶಾಸಕರ ಉಪಸ್ಥಿತಿಯ ನಿಯೋಗದೊಂದಿಗೆ ಸೆಸ್ಕ್ನ ಹಿರಿಯ ಅಧಿಕಾರಿಗಳು ಹಾಗೂ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರುಗಳ ಸಹಿತ ಶೀಘ್ರದಲ್ಲೇ ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಿ ಚರ್ಚೆ ನಡೆಸಲಾಗುವುದು ಎಂದು ಭರವಸೆ ನೀಡಿದರು.

ಈಗಾಗಲೇ ರಾಜ್ಯದಲ್ಲಿ ೧೨೦ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲು ಚಿಂತನೆ ಹರಿಸಲಾಗಿದೆ. ಇದರಲ್ಲಿ ಕೊಡಗಿನ ೫ ತಾಲೂಕುಗಳನ್ನೂ ಒಳಪಡಿಸಬೇಕಾದ ಅನಿವಾರ್ಯತೆಯಿದೆ ಎಂದು ಸಚಿವರ ಗಮನ ಸೆಳೆದ ಸಂದರ್ಭ ಮಾತನಾಡಿದ ಅವರು, ಬರಪೀಡಿತ ತಾಲೂಕು ಘೋಷಣೆ ಸಂಬAಧ ಈಗಾಗಲೇ ಜಿಲ್ಲಾಧಿಕಾರಿಗಳಿಂದ ವರದಿ ಕೇಳಲಾಗಿದೆ. ಅದರ ಆಧಾರದ ಮೇಲೆ ಸರ್ಕಾರ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದರು.

ರಾಜ್ಯದ ವರದಿ ನಂತರ ಕೇಂದ್ರದಿAದಲೇ ಅಧ್ಯಯನ ತಂಡ ಆಗಮಿಸಲಿದೆ. ಕೃಷಿ ಮತ್ತು ನೀರಿನ ಕೊರತೆ ಬಗ್ಗೆ ಪ್ರತ್ಯೇಕ ಸಮೀಕ್ಷೆ ನಡೆಸಿ ಅಂತಿಮ ಘೋಷಣೆ ಮಾಡಲಿದೆ. ಕೊಡಗಿನ ೫ ತಾಲೂಕುಗಳನ್ನೂ ಸಹ ಬರಪೀಡಿತ ಎಂದು ಘೋಷಿಸಲು ತಾವೂ ಕೂಡ ಪ್ರಯತ್ನ ನಡೆಸುವುದಾಗಿ ಉಸ್ತುವಾರಿ ಸಚಿವರು ಹೇಳಿದರು.

ಸೋಮವಾರಪೇಟೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇರುವ ಬಗ್ಗೆ ಗಮನ ಸೆಳೆದ ಸಂದರ್ಭ, ಮುಂದಿನ ತಿಂಗಳು ಕೊಡಗಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಆಹ್ವಾನಿಸಿ, ಆಸ್ಪತ್ರೆಗಳ ಸುಸ್ಥಿತಿಗೆ ಸಂಬAಧಿಸಿದAತೆ ಸಭೆ ನಡೆಸಲಾಗುವುದು. ವೈದ್ಯರು, ಉಪಕರಣಗಳು, ಕಟ್ಟಡಗಳ ಕೊರತೆ ಬಗ್ಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲಾಗುವುದು ಎಂದರು.

-ವಿಜಯ್ ಹಾನಗಲ್