ಗೋಣಿಕೊಪ್ಪಲು, ಆ. ೩೦: ಕನ್ನಡ ಸಾಹಿತ್ಯ ಪರಂಪರೆ ಆರಂಭ ವಾಗಿದ್ದು ಮಹಾಕಾವ್ಯದ ಮೂಲಕ, ಪ್ರಪಂಚದ ಬೇರೆ, ಬೇರೆ ಸಾಹಿತ್ಯವನ್ನು ಅವಲೋಕಿಸಿದಾಗ ಕಾವ್ಯ ಪರಂಪರೆಯ ಮೂಲಕ ಸಾಹಿತ್ಯ ಪರಂಪರೆ ಪ್ರಾರಂಭವಾಗಿರುವುದು ಅತಿ ವಿರಳ. ಆದರೆ ಕನ್ನಡ ಸಾಹಿತ್ಯದ ಪರಂಪರೆ ೨,೫೦೦ ವರ್ಷದ ಭವ್ಯ ಇತಿಹಾಸ ಹೊಂದಿದೆ ಎಂದು ಮಂಡ್ಯ ಜಿಲ್ಲೆಯ ಖ್ಯಾತ ಸಾಹಿತಿ ಟಿ.ಸತೀಶ್ ಜವರೇಗೌಡ ಬಣ್ಣಿಸಿದರು.

ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ, ಪೊನ್ನಂಪೇಟೆ ತಾಲೂಕು ಕಾರ್ಯ ನಿರತ ಪತ್ರಕರ್ತರ ಸಂಘ ಸಹಯೋಗ ದೊಂದಿಗೆ ಪಟ್ಟಣದ ಕಾವೇರಿ ಕಾಲೇಜು ಸಭಾಂಗಣದಲ್ಲಿ ಕವಿ, ಪತ್ರಕರ್ತ ಕೆ.ಬಿ.ಜಗದೀಶ್ ಜೋಡು ಬೀಟಿ ರಚಿಸಿದ ೨ನೇ ಕೃತಿ ‘ಅಪ್ಪನ ಗೋರಿಯಲ್ಲಿ ಕನಸುಗಳ ಬಿಕ್ಕಳಿಕೆ' ಕವನ ಸಂಕಲನ ಬಿಡುಗಡೆ ಮಾಡಿ ಮಾತನಾಡಿದರು.

ಕನ್ನಡದ ಕಾವ್ಯ ಪರಂಪರೆ ಎಂದಿಗೂ ಬತ್ತುವುದಿಲ್ಲ. ಚೈತನ್ಯ ಶೀಲತೆ ಕಳೆದುಕೊಳ್ಳುವುದಿಲ್ಲ. ಕನ್ನಡ ಕಾವ್ಯ ಪರಂಪರೆಯ ಮಹಾಸಾಗರಕ್ಕೆ ಕೆ.ಬಿ.ಜಗದೀಶ್ ಕವನ ಸಂಕಲನ ಸಣ್ಣ ತೊರೆಯಾಗಿ ಸಾಗರವನ್ನು ಸೇರಿಕೊಂಡಿದೆ. ಕಾವ್ಯ ಎನ್ನುವುದು ಭಾವನೆಗಳ ಕಲಾತ್ಮಕ ಅಭಿವ್ಯಕ್ತಿ. ನಾಟಕ, ಕಾದಂಬರಿ, ಹಾಗೂ ಕಥೆಯ ಪ್ರಕಾರಕ್ಕಿಂತಲೂ ಅತ್ಯಂತ ಜನಪ್ರಿಯ ವಾಗಿರುವುದು ಕಾವ್ಯ ಪ್ರಕಾರ ಎಂದು ವಿಶ್ಲೇಷಿಸಿದರು.

ಬಹುತೇಕ ಕವಿಗಳು ಸಾಹಿತ್ಯ ಲೋಕವನ್ನು ಪ್ರವೇಶ ಮಾಡು ವಂತದ್ದು ಕಾವ್ಯದ ಹೆಬ್ಬಾಗಿಲಿನ ಮೂಲಕ ಎನ್ನುವುದು ಗಮನಾರ್ಹ. ಕನ್ನಡ ಕಾವ್ಯ ಪರಂಪರೆಯನ್ನು ಗಮನಿಸಿದಾಗ ಕವಿತೆ ಎನ್ನುವುದು ಕವಿಯ ಲೋಕಾನುಭವಗಳನ್ನು ತೆರೆ ದಿಡುವ ಮಾಧ್ಯಮವಾಗಿ ಹೆಮ್ಮರ ವಾಗಿ ಬೆಳೆದು ನಿಂತಿದೆ. ಕವಿತೆಗಳ ಮೂಲಕ ನಮ್ಮ ಮನಸ್ಸಿನ ಭಾವನೆ ಗಳನ್ನು ಅತ್ಯಂತ ಸಮರ್ಥವಾಗಿ, ಕಲಾತ್ಮಕವಾಗಿ ಹಾಗೂ ಅರ್ಥ ವಾಗುವ ರೀತಿಯಲ್ಲಿ ದಾಟಿಸುವ ಅವಕಾಶ ಹೆಚ್ಚಿದೆ ಎಂದರು.

ಕಾರ್ಯಕ್ರಮವನ್ನು ಜಾಗಟೆ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕ ಕೆ.ಜಿ.ಬೋಪಯ್ಯ, ಪತ್ರಕರ್ತರು ಕೇವಲ ಪತ್ರಕರ್ತರಾಗಿ ಉಳಿದಿಲ್ಲ, ಸಾಹಿತಿಗಳಾಗಿಯೂ ಸಮಾಜದಲ್ಲಿ ತಮ್ಮ ಗುರುತಿಸಿಕೊಂಡಿದ್ದಾರೆ. ಆ ಸಾಲಿನಲ್ಲಿ ಕೆ.ಬಿ.ಜಗದೀಶ್ ಕೂಡ ಇರುವುದು ಶ್ಲಾಘನೀಯ. ಕವನಗಳು ಹಾಗೂ ಇತರೆ ಪುಸ್ತಕಗಳು ಬರೆದಾಗ ಸಮಾಜ ಸುಧಾರಣೆಗೆ ಪೂರಕವಾಗಿ ರಬೇಕು ಎಂದು ಅಭಿಮತ ವ್ಯಕ್ತಪಡಿಸಿದರು.

ಬೆಳ್ಳಿ ಮಹೋತ್ಸವದ ಆಚರಣೆ ಸಮಿತಿಯ ಮಹಾ ಪೋಷಕ, ಶಕ್ತಿ ಪತ್ರಿಕೆಯ ಪ್ರಧಾನ ಸಂಪಾದಕ ಜಿ.ರಾಜೇಂದ್ರ ಅಧ್ಯಕ್ಷತೆ ವಹಿಸಿ ಮಾತ ನಾಡಿ, ಕವನಗಳಲ್ಲಿ ಸಂವೇದನಾತ್ಮಕ ಭಾವನೆಗಳು, ಕನಿಷ್ಟ ಪ್ರಾಸಗಳಿರಬೇಕು ಹಾಗೂ ಅನುಭವದ ವಿಚಾರಗಳನ್ನು ಹಂಚಿಕೊಳ್ಳುವ ಅಭಿಪ್ರಾಯ ಇರ ಬೇಕು. ಕೆಲವೊಂದು ಸಂದರ್ಭಗಳಲ್ಲಿ ಕವನಗಳನ್ನು ಬರೆಯಬೇಕು, ಅದನ್ನು ಪ್ರಕಟ ಆಗಬೇಕು ಎಂದು ಬರೆದರೆ ಅದು ಕವನ ಆಗುವುದಿಲ್ಲ. ಪರಿಸರ ದಲ್ಲಿ, ನಮ್ಮ ಅನುಭವದ ಹಿನ್ನೆಲೆಯಲ್ಲಿ ಜನಗಳೊಂದಿಗೆ ಮಿಳಿತವಾದ ಸಂದರ್ಭ ಉಂಟಾಗುವ ಭಾವನೆಗಳಲ್ಲಿ, ರಾಜ ಕೀಯ ವ್ಯವಸ್ಥೆಯಲ್ಲಿ, ಶೋಷಣೆಯ ಸಂದರ್ಭದಲ್ಲಿ ಏನು ಭಾವನೆಗಳು ಮೂಡುತ್ತವೋ ಅದು ಕವನವಾಗಿ ಮೂಡಿ ಬರುತ್ತವೆ ಎಂದು ಹೇಳಿದ ಅವರು, ಕೆ.ಬಿ.ಜಗದೀಶ್ ಕವನ ಸಂಕಲನ ಗಮನ ಸೆಳೆಯುತ್ತದೆ ಎಂದು ಹೇಳಿದರು. ಲೇಖಕಿ ಸೋಮೆಯಂಡ ಕೌಶಲ್ಯ ಸತೀಶ್ ಪುಸ್ತಕ ವಿಮರ್ಶೆ ಮಾಡಿದರು.

ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷೆ ಸವಿತಾ ರೈ, ಕೊಡಗು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ರೆಜಿತ್ ಕುಮಾರ್ ಗುಹ್ಯ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಕವಿ ಕೆ.ಬಿ.ಜಗದೀಶ್ ಪುಸ್ತಕದ ಕುರಿತು ಮಾತನಾಡಿ ತಮ್ಮ ಅಭಿ ಪ್ರಾಯಗಳನ್ನು ವ್ಯಕ್ತಪಡಿಸಿದರು. ವೇದಿ ಕೆಯಲ್ಲಿ ಕಾವೇರಿ ವಿದ್ಯಾಸಂಸ್ಥೆಯ ಕಾರ್ಯ ದರ್ಶಿ ಕುಲ್ಲಚಂಡ ಬೋಪಣ್ಣ, ಪೊನ್ನಂಪೇಟೆ ತಾಲೂಕು ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ ಉಪಸ್ಥಿ ತರಿದ್ದರು. ಕಾರ್ಯಕ್ರಮದಲ್ಲಿ ಪತ್ರಕರ್ತ ಸಂಘದ ರಾಜ್ಯ ಉಪಾಧ್ಯಕ್ಷ ಅಜ್ಜ ಮಾಡ ರಮೇಶ್ ಕುಟ್ಟಪ್ಪ, ಗ್ರಾ.ಪಂ ಅಧ್ಯಕ್ಷೆ ಮನ್ನಕ್ಕಮನೆ ಸೌಮ್ಯಬಾಲು, ದಸಂಸ ಜಿಲ್ಲಾ ಸಂಚಾಲಕ ಪರಶು ರಾಮ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಿಶೋರ್ ರೈ ಕತ್ತಲೆಕಾಡು ನಿರೂಪಿಸಿ, ಚನ್ನನಾಯಕ್,ಅಶೋಕ್, ಆದರ್ಶ್ ಅತಿಥಿಗಳ ವ್ಯಕ್ತಿ ಪರಿಚಯ ಮಾಡಿದರು. ಪುತ್ತಾಮನೆ ವಿದ್ಯಾ ಜಗದೀಶ್ ಪ್ರಾರ್ಥಿಸಿ, ಸತೀಶ್ ಸಿಂಗಿ ವಂದಿಸಿದರು. - ಹೆಚ್.ಕೆ.ಜಗದೀಶ್