ಮಡಿಕೇರಿ, ಆ. ೩೦: ಹೊದ್ದೂರು-ಕಬಡಕೇರಿ ಯುವಕ ಸಂಘದ ಆಶ್ರಯದಲ್ಲಿ ೪೮ನೇ ವರ್ಷದ ಕೈಲ್ಪೊಳ್ದ್ ಕ್ರೀಡಾಕೂಟ ಸೆ. ೩ರಂದು, ಭಾನುವಾರ ಬೆಳಿಗ್ಗೆ ೧೦ ಗಂಟೆಗೆ ಸಂಘದ ಮೈದಾನದಲ್ಲಿ ನಡೆಯಲಿದೆ. ಕ್ರೀಡಾಕೂಟದ ಉದ್ಘಾಟನೆಯನ್ನು ಮೈಸೂರು ಎಲ್.ಐ.ಸಿ. ಪ್ರತಿನಿಧಿ ಮೇಕಂಡ ಗಪ್ಪು ಸೋಮಯ್ಯ ನೆರವೇರಿಸಲಿದ್ದಾರೆ.
ಸಾರ್ವಜನಿಕ ಪುರುಷ ಹಾಗೂ ಮಹಿಳೆಯರಿಗೆ ಹಗ್ಗಜಗ್ಗಾಟ, ಭಾರದ ಗುಂಡು ಎಸೆತ, ತೆಂಗಿನಕಾಯಿಗೆ ಗುಂಡು ಹೊಡೆಯುವುದು, ಸಾಂಪ್ರದಾಯಿಕ ವಾಲಗ ಕುಣಿತ ಸೇರಿದಂತೆ ವಿವಿಧ ವಿಭಾಗದ ಓಟದ ಸ್ಪರ್ಧೆ ನಡೆಯಲಿದೆ.
ಯುವಕ ಸಂಘದ ಅಧ್ಯಕ್ಷ ಚೆಟ್ಟಿಮಾಡ ಜಿ. ಬಾಲಕೃಷ್ಣ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಅತಿಥಿಗಳಾಗಿ ಹೊದ್ದೂರು ಗ್ರಾ.ಪಂ. ಅಧ್ಯಕ್ಷ ಹೆಚ್.ಎ. ಹಂಸ, ಉಪಾಧ್ಯಕ್ಷೆ ಅನುರಾಧ, ಸದಸ್ಯ ಎಂ.ಬಿ. ಹಮೀದ್, ಸೋಮವಾರಪೇಟೆ ತಾಲೂಕು ಹೋಂ ಸ್ಟೇ ಮಾಲೀಕರ ಸಂಘದ ಅಧ್ಯಕ್ಷ ಚೆಟ್ಟಿಮಾಡ ಕೆ. ರೋಹಿತ್, ಕಬಡಕೇರಿ ದವಸ ಭಂಡಾರ ಅಧ್ಯಕ್ಷೆ ತೆಕ್ಕಡೆ ಎಲ್. ರಾಜೇಶ್ವರಿ, ನಿರ್ದೇಶಕಿ ಎ.ಪಿ. ಭಾಗ್ಯಶ್ರೀ, ಅಮ್ಮಣಂಡ ಪಟ್ಟು ಸೋಮಣ್ಣ, ಹೊಸೊಕ್ಲು ರಾಜು ಭಾಗವಹಿಸಲಿದ್ದಾರೆ ಎಂದು ಕಾರ್ಯದರ್ಶಿ ಮೇಕಂಡ ದೊರೆ ತಮ್ಮಯ್ಯ ತಿಳಿಸಿದ್ದಾರೆ.