ಮಡಿಕೇರಿ, ಸೆ. ೨೯: ಮಲಯಾಳಿ ಬಾಂಧವರ ಸಂಭ್ರಮದ ಹಬ್ಬವಾದ ತಿರುಓಣಂ ಅನ್ನು ಜಿಲ್ಲೆಯಾದ್ಯಂತ ಮಲಯಾಳಿ ಸಮುದಾಯದವರು ಸಡಗರದಿಂದ ಆಚರಿಸಿದರು. ಹೂವಿನಿಂದ ರಂಗೋಲಿ (ಪೂಕಳಂ) ರಚಿಸಿ, ಮನೆ ಹಾಗೂ ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರಿಸಿ ಓಣಂ ಹಬ್ಬದ ವಿಶೇಷ ಖಾದ್ಯಗಳನ್ನು ಮಾಡಿ ಸವಿದು ಹಬ್ಬಾಚರಣೆ ಮಾಡಿದರು.

ಶನಿವಾರಸಂತೆ ವ್ಯಾಪ್ತಿ

ಶನಿವಾರಸಂತೆ ಪಟ್ಟಣ ಸೇರಿದಂತೆ ಹೋಬಳಿ ವ್ಯಾಪ್ತಿಯ ಗೋಪಾಲಪುರ, ಒಡೆಯನಪುರ, ಮುಳ್ಳೂರು, ಜಾಗೇನಹಳ್ಳಿ, ನಿಡ್ತ, ಮಾಲಂಬಿ, ಕಣಿವೆಬಸವನಹಳ್ಳಿ, ಆಲೂರುಸಿದ್ದಾಪುರ, ಹೊಸಗುತ್ತಿ ಮುಂತಾದ ಗ್ರಾಮಗಳಲ್ಲಿ ಓಣಂ ಹಬ್ಬವನ್ನು ಆಚರಿಸಲಾಯಿತು.

ಪುಟಾಣಿಗಳಿಂದ ಓಣಂ ಆಚರಣೆ.

ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರು ಗ್ರಾಮದಲ್ಲಿರುವ ಕೂಡ್ಲೂರಿನ ಟೈನಿಟಾಟ್ಸ್ ಪ್ರಿಕೆಜಿ ಶಾಲೆಯಲ್ಲಿ ಓಣಂ ಹಬ್ಬದ ಆಚರಣೆಯಲ್ಲಿ ಪುಟಾಣಿಗಳು ಭಾಗವಹಿಸಿ ಸಂಭ್ರಮಿಸಿದರು.

ಕೂಡಿಗೆ: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಓಣಂ ಹಬ್ಬಾಚರಣೆ ನಡೆಯಿತು. ೩ಐದನೇ ಪುಟಕ್ಕೆ

ಗೋಣಿಕೊಪ್ಪ, ಅರುವತ್ತೊಕ್ಕಲುವಿನಲ್ಲಿರುವ ಕಾಫಿ ಮಂಡಳಿ ಕಚೇರಿಯ ತಾಂತ್ರಿಕ ಮೌಲ್ಯಮಾಪನ ಕೇಂದ್ರ (ಟಿ.ಇ.ಸಿ)ಯಲ್ಲಿ ಓಣಂ ಸಂಭ್ರಮದಲ್ಲಿ ಸಿಬ್ಬಂದಿಗಳು ಭಾಗಿಯಾಗಿದ್ದರು. ಉಪ ನಿರ್ದೇಶಕಿ ಡಾ. ಶ್ರೀದೇವಿ ಹಾಗೂ ಇತರರು ಪಾಲ್ಗೊಂಡಿದ್ದರು. (ಮೊದಲ ಪುಟದಿಂದ) ಕರಿಕೆ: ಇಲ್ಲಿಗೆ ಸಮೀಪದ ಎಳ್ಳುಕೊಚ್ಚಿ ತೋಟಂ ಶ್ರೀ ಕಾಟೂರು ನಾರಾಯಣ ನಂಬಿಯಾರ್ ಸ್ಮಾರಕ ಶಾಲೆಯಲ್ಲಿ ಓಣಂ ಹಬ್ಬದ ಪ್ರಯುಕ್ತ ವಿದ್ಯಾರ್ಥಿಗಳು ಶಾಲೆಯ ಆವರಣದಲ್ಲಿ ರಂಗೋಲಿ ಹೂವಿನ ರಂಗೋಲಿ ರಚಿಸಿ ಓಣಂ ಹಬ್ಬ ಆಚರಿಸಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಶಾಲಾ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಹಾಜರಿದ್ದರು. ಕರಿಕೆ ಕೇರಳ ಗಡಿ ಭಾಗಕ್ಕೆ ಹೊಂದಿಕೊAಡ ಕಾರಣ ಈ ಭಾಗದಲ್ಲಿ ಕೇರಳದ ಹಬ್ಬಗಳನ್ನು ಕೂಡ ಎಲ್ಲರೂ ಕೂಡಿ ಆಚರಣೆ ಮಾಡುತ್ತಾರೆ.