ರಾಜ್ಯ ಬಿಜೆಪಿ ಮುಕ್ತವಾಗಲಿದೆ-ರೇಣುಕಾಚಾರ್ಯ

ದಾವಣಗೆರೆ, ಆ. ೨೯: ಕರ್ನಾಟಕ ಭಾರತೀಯ ಜನತಾ ಪಕ್ಷದಲ್ಲಿ ಆಂತರಿಕ ಕಲಹ ಮುಂದುವರಿದಿದ್ದು, ಬಿಜೆಪಿ ನಾಯಕ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರು, ಶೀಘ್ರದಲ್ಲೇ ರಾಜ್ಯ ಬಿಜೆಪಿ ಮುಕ್ತವಾಗಲಿದೆ ಎಂದು ಮಂಗಳವಾರ ಹೇಳಿದ್ದಾರೆ. ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಆಪ್ತ ರೇಣುಕಾಚಾರ್ಯ ಅವರು, ಯಡಿಯೂರಪ್ಪ ಅವರನ್ನು ಪಕ್ಷದಲ್ಲಿ ಕಡೆಗಣಿಸಿದ್ದೇ ಬಿಜೆಪಿಗೆ ಶಾಪವಾಗಿ ಪರಿಣಮಿಸಿದೆ. ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಬಲವಂತವಾಗಿ ಕೆಳಗಿಳಿಸಲಾಯಿತು. ಇದರ ಪರಿಣಾಮ ಪಕ್ಷಕ್ಕೆ ಭಾರೀ ಹಾನಿಯಾಗಿದೆ. ಕರ್ನಾಟಕದಲ್ಲಿ ನಾವು ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡುತ್ತೇವೆ ಎಂದು ಹೇಳಿದ್ದೆವು. ಆದರೆ, ಇಂದು ನಮ್ಮ ಪಕ್ಷಕ್ಕೆ ಅದೇ ಪರಿಸ್ಥಿತಿ ಬಂದಿದೆ. ರಾಜ್ಯ ಬಿಜೆಪಿ ಮುಖ್ಯವಾಗಲಿದೆ ಎಂದು ಸ್ವಪಕ್ಷೀಯರ ವಿರುದ್ಧವೇ ವಾಗ್ದಾಳಿ ನಡೆಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದ ಬಗ್ಗೆ ಪ್ರತಿಕ್ರಿಯಿಸಿದ ರೇಣುಕಾಚಾರ್ಯ, ತಮ್ಮ ಕ್ಷೇತ್ರಕ್ಕೆ ಯೋಜನೆಗಳನ್ನು ಪಡೆಯಲು ಅವರನ್ನು ಭೇಟಿ ಮಾಡಿರುವುದಾಗಿ ತಿಳಿಸಿದರು.

ಪಟಾಕಿ ಗೋದಾಮಿಗೆ ಬೆಂಕಿ-ಮೂವರು ಸಜೀವ ದಹನ

ಹಾವೇರಿ, ಆ. ೨೯: ತಾಲೂಕಿನ ಅಲದಕಟ್ಟಿಯ ಹೊರವಲಯದ ಹಾವೇರಿ ಹಾನಗಲ್ ಮುಖ್ಯರಸ್ತೆಯ ಪಕ್ಕದ ಪಟಾಕಿ ಗೋದಾಮಿಗೆ ಬೆಂಕಿ ತಗುಲಿದ ಪರಿಣಾಮ ಮೂವರು ಸಜೀವ ದಹನಗೊಂಡಿರುವ ದುರ್ಘಟನೆ ಮಂಗಳವಾರ ಸಂಭವಿಸಿದೆ. ಗೋದಾಮಿನಲ್ಲಿ ಕೆಲಸ ಮಾಡುತ್ತಿದ್ದ ಹಾವೇರಿ ತಾಲೂಕಿನ ಕಾಟೇನಹಳ್ಳಿ ಗ್ರಾಮದ ದ್ಯಾಮಪ್ಪ ಓಲೇಕಾರ (೪೫), ರಮೇಶ ಬಾರ್ಕಿ (೨೮), ಶಿವಲಿಂಗ ಅಕ್ಕಿ (೨೮) ಮೃತಪಟ್ಟವರು. ಮೂವರ ದೇಹ ಬೆಂಕಿಯಿAದ ಸುಟ್ಟು ಕರಕಲಾಗಿವೆ. ವೆಲ್ಡಿಂಗ್ ಕೆಲಸಕ್ಕೆ ಬಂದಿದ್ದ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ತಗ್ಗಿನಕೆರೆ ನಿವಾಸಿ ವಾಸಿಂ ಶಫಿ ಅಹಮದ್ (೩೨) ಬೆಂಕಿಯ ಕೆನ್ನಾಲಿಗೆಯಿಂದ ತಪ್ಪಿಸಿಕೊಳ್ಳಲು ಗೋದಾಮಿನ ಮೊದಲ ಮಹಡಿಯಿಂದ ಕೆಳಕ್ಕೆ ಜಿಗಿದ ಪರಿಣಾಮ ಬೆನ್ನು ಮೂಳೆ ಮುರಿದುಕೊಂಡು ಪ್ರಜ್ಞೆ ತಪ್ಪಿ ಬಿದ್ದಿದ್ದರು. ಗಾಯಗೊಂಡಿದ್ದ ವಾಸಿಂ ಮತ್ತು ಶೇರು ಮಾಳಪ್ಪ ಕಟ್ಟಿಮನಿ ಈ ಇಬ್ಬರನ್ನೂ ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಗೋದಾಮಿನ ಸಮೀಪದಲ್ಲಿದ್ದ ಮನೆಯ ನಿವಾಸಿ ಕಲಾವತಿ ಕೆ.ಎಸ್. ಎಂಬುವವರು ವಾತಾವರಣದಲ್ಲಿ ಹರಡಿದ ಹೊಗೆಯಿಂದ ಅಸ್ವಸ್ಥರಾಗಿ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕದ್ದು ಮುಚ್ಚಿ ನೀರು ಹರಿಸಿದರೆ ಹೋರಾಟ

ಬೆಂಗಳೂರು, ಆ. ೨೯: ರಾಜ್ಯ ಸರ್ಕಾರ, ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯುಆರ್‌ಸಿ) ಶಿಫಾರಸ್ಸು ಪಾಲಿಸಬಾರದು. ರಾಜಕೀಯ ಲಾಭಕ್ಕಾಗಿ ಕೆಆರ್‌ಎಸ್ ಜಲಾಶಯದಿಂದ ತಮಿಳುನಾಡಿಗೆ ಕದ್ದು ಮುಚ್ಚಿ ನೀರು ಹರಿಸಿದರೆ ರಸ್ತೆಗೆ ಇಳಿದು ಹೋರಾಟ ನಡೆಸಲಾಗುವುದು ಎಂದು ರೈತ ಮುಖಂಡರು, ಕನ್ನಡ ಸಂಘಟನೆಗಳ ಹೋರಾಟಗಾರರು ಹಾಗೂ ಸಂಘ ಸಂಸ್ಥೆಗಳ ಮುಖಂಡರು ಎಚ್ಚರಿಕೆ ನೀಡಿದರು. ನಗರದಲ್ಲಿ ಮಂಗಳವಾರ ಕರ್ನಾಟಕ ಜಲ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ನಡೆದ ದುಂಡು ಮೇಜಿನ ಸಭೆಯಲ್ಲಿ ೨೮ ಸಂಘಟನೆಗಳ ಮುಖಂಡರು ಪಾಲ್ಗೊಂಡು, ಸರ್ಕಾರವು ಕನ್ನಡನಾಡಿನ ಹಿತ ಕಾಪಾಡಬೇಕು ಎಂದು ಆಗ್ರಹಿಸಿದರು. ಸಿಡಬ್ಲ್ಯುಆರ್‌ಸಿ ಶಿಫಾರಸ್ಸಿನ ಮೇರೆಗೆ ನೀರು ಹರಿಸಲಾಗುತ್ತಿದೆ ಎಂದು ಸರ್ಕಾರ ಹೇಳುತ್ತಿದೆ. ಇದು ಖಂಡನೀಯ. ಅಧಿಕಾರ ಉಳಿಸಿಕೊಳ್ಳಲು, ರಾಜಕೀಯ ಲಾಭಕ್ಕಾಗಿ ಕನ್ನಡಿಗರ ಹಿತ ಬಲಿ ಕೊಡಬಾರದು ಎಂದು ಅಮ್ ಆದ್ಮಿ ಪಕ್ಷದ ರಾಜ್ಯ ಅಧ್ಯಕ್ಷ ಮುಖ್ಯಮಂತ್ರಿ' ಚಂದ್ರು ಹೇಳಿದರು. ತಮಿಳುನಾಡು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ ತಕ್ಷಣವೇ ಸರ್ಕಾರವು ನೀರು ಹರಿಸುವ ನಿರ್ಧಾರ ಕೈಗೊಂಡಿದ್ದು ತಪ್ಪು' ಎಂದು ಹೇಳಿದರು.

ಯುವ ವಿಜ್ಞಾನಿ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ

ಬೆಂಗಳೂರು, ಆ. ೨೯: ಯುವ ವಿಜ್ಞಾನಿಯೊಬ್ಬರ ಮೇಲೆ ಬೆಂಗಳೂರಿನಲ್ಲಿ ದುಷ್ಕರ್ಮಿಗಳು ಹಲ್ಲೆ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೂಲಗಳ ಪ್ರಕಾರ ವಿಜ್ಞಾನಿ ಅಶುತೋಷ್ ಸಿಂಗ್ ಅವರ ಕಾರಿಗೆ ಕಲ್ಲೆಸೆದು ಹಲ್ಲೆಗೆ ಯತ್ನಿಸಲಾಗಿದ್ದು, ಈ ಸಂಬAಧ ಮಾದನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಶುತೋಷ್ ಸಿಂಗ್ ಅವರು ತಮ್ಮ ಕ್ವಿಡ್ ಕಾರಿನಲ್ಲಿ ರಾವತ್ತನಹಳ್ಳಿ ಮುಖ್ಯರಸ್ತೆಯಲ್ಲಿ ಹೊರಟಿದ್ದರು. ಇದೇ ವೇಳೆ ಅವರ ಕಾರಿಗೆ ಕಲ್ಲು ಎಸೆಯಲಾಗಿದೆ. ನಂತರ, ಕಾರು ಹಿಂಬಾಲಿಸಿದ್ದ ದುಷ್ಕರ್ಮಿಗಳು ಮಾರ್ಗಮಧ್ಯೆಯೇ ಹಲ್ಲೆಗೆ ಯತ್ನಿಸಿದ್ದರು. ಆದರೆ, ಯುವ ವಿಜ್ಞಾನಿ ಆರೋಪಿಗಳಿಂದ ತಪ್ಪಿಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸ್ವತಃ ಯುವ ವಿಜ್ಞಾನಿ ಆಶುತೋಷ್ ಸಿಂಗ್ ತಮ್ಮ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿ ಕೊಂಡಿದ್ದು, ಬೆಂಗಳೂರಿನ ರಾವತ್ತನಹಳ್ಳಿ ಮುಖ್ಯರಸ್ತೆಯಲ್ಲಿ ಆಗಸ್ಟ್ ೨೪ ರ ರಾತ್ರಿ ೧೨:೪೫ ಸುಮಾರಿನಲ್ಲಿ ಸ್ಥಳೀಯ ದುಷ್ಕರ್ಮಿಗಳು ತಮ್ಮ ಕಾರಿನ ಮೇಲೆ ಹಲ್ಲೆ ಮಾಡಿ ಕಲ್ಲು ಎಸೆದಿದ್ದಾರೆ. ಅವರು ನನ್ನ ಕಾರನ್ನು ನಿಲ್ಲಿಸಲು ಪ್ರಯತ್ನಿಸಿದರು. ಮಚ್ಚು ಲಾಂಗ್ ನಿಂದ ಬೆನ್ನಟ್ಟಿ ಹಲ್ಲೆಗೆ ಯತ್ನಿಸಿದರು. ನನ್ನ ಕಾರಿನ ಹಿಂಭಾಗದ ಗಾಜು ಒಡೆದು ಹಾಕಿದರು ಎಂದು ಹೇಳಿದ್ದಾರೆ.

‘ಸಿಡಬ್ಲುö್ಯಆರ್‌ಸಿ ಶಿಫಾರಸ್ಸು ಕಠೋರ ನಿರ್ಣಯ’

ಗದಗ, ಆ. ೨೯: ಕಾವೇರಿ ನದಿ ನೀರು ನಿಯಂತ್ರಣ ಸಮಿತಿ (ಸಿ.ಡಬ್ಲುö್ಯ.ಆರ್.ಸಿ.) ಪ್ರತಿ ದಿನ ೫ ಸಾವಿರ ಕ್ಯುಸೆಕ್‌ನಂತೆ ೧೫ ದಿನ ನೀರು ಹರಿಸುವಂತೆ ಶಿಫಾರಸ್ಸು ಮಾಡಿರುವುದು ಕಠೋರ ನಿರ್ಣಯ ಎಂದು ಕಾನೂನು ಸಚಿವ ಹೆಚ್.ಕೆ. ಪಾಟೀಲ ಅಸಮಾಧಾನ ವ್ಯಕ್ತಪಡಿಸಿದರು. ಕಾವೇರಿ ವಿಚಾರದಲ್ಲಿ ನಮ್ಮ ನಿಲುವು ೧೦ ಸಾವಿರ ಕ್ಯುಸೆಕ್ ನೀರು ಬಿಡಲು ಸಾಧ್ಯವಿಲ್ಲ ಎಂಬುದಾಗಿತ್ತು. ಈಗಿನ ಶಿಫಾರಸ್ಸು ನೋಡಿದಾಗ ನಮ್ಮ ನಿಲುವು ಸರಿಯಾಗಿದೆ ಎಂದು ಸಿಡಬ್ಲ್ಯುಆರ್‌ಸಿ ಒಪ್ಪಿಕೊಂಡAತಿದೆ. ಅಷ್ಟರ ಮಟ್ಟಿಗೆ ಸಮಾಧಾನ ಮೂಡಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.