ಮಡಿಕೇರಿ, ಆ. ೨೯: ೨೦೨೩-೨೪ನೇ ಸಾಲಿನ ನಾಪೋಕ್ಲು ವಲಯ ಮಟ್ಟದ ಕ್ರೀಡಾಕೂಟದಲ್ಲಿ ಚೆಟ್ಟಿಮಾನಿ ಸಾಂದೀಪನಿ ವಿದ್ಯಾಪೀಠ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಪ್ರಶಸ್ತಿ ಗಳಿಸಿದ್ದಾರೆ.
ಚಶ್ಮಿತ ೨೦೦ ಮೀಟರ್ ಓಟದಲ್ಲಿ ಹಾಗೂ ದೃವಿ ಹೆಚ್.ಆರ್. ೧೦೦ ಮೀಟರ್ ಓಟದಲ್ಲಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕಬಡ್ಡಿ ಪಂದ್ಯದಲ್ಲಿ ಬಾಲಕ ಮತ್ತು ಬಾಲಕಿಯರ ತಂಡ ದ್ವಿತೀಯ ಸ್ಥಾನವನ್ನು ಗಳಿಸಿದೆ.