ಮಡಿಕೇರಿ, ಆ. ೩೦: ಶ್ರೀ ಬೊಟ್ಲಪ್ಪ ಯುವ ಸಂಘ ಕಡಗದಾಳು ಇದರ ೨೦೨೩-೨೦೨೪ ನೇ ಸಾಲಿನ ವಾರ್ಷಿಕ ಮಹಾಸಭೆಯು ಯುವ ಸಂಘದ ಆವರಣದಲ್ಲಿ ಯುವ ಸಂಘದ ಅಧ್ಯಕ್ಷ ಪಿ.ಎಂ. ಸುರೇಶ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಂದರ್ಭ ನೂತನವಾಗಿ ಕಾರ್ಯಕಾರಿ ಸಮಿತಿ ರಚನೆ ಮಾಡಲಾಯಿತು . ಯುವ ಸಂಘದ ನೂತನ ಅಧ್ಯಕ್ಷರಾಗಿ ಕೆ.ಪಿ.ಬೆಳ್ಯಪ್ಪ ಅವರನ್ನು ಆಯ್ಕೆ ಮಾಡಲಾಯಿತು ಉಪಾಧ್ಯಕ್ಷರಾಗಿ ಎಂ.ಎನ್. ಹರೀಶ್ ಕುಮಾರ್, ಮಹಿಳಾ ಉಪಾಧ್ಯಕ್ಷರಾಗಿ ಟಿ.ಯು ದೀಪ ಕಾರ್ಯದರ್ಶಿಯಾಗಿ ಬಿ.ಎಂ ಶಿವಕಾಂತ್, ಸಹ ಕಾರ್ಯದರ್ಶಿಯಾಗಿ ಪ್ರತೀಕ್ಷ. ಕೆ.ಬಿ ಖಜಾಂಚಿಯಾಗಿ ಅವಿನಾಶ್ ಬೊಟ್ಲಪ್ಪ, ಸಹ ಖಜಾಂಚಿಯಾಗಿ ಕುಮಾರ ದರ್ಶನ್.ಪಿ ಜಿ. ಕ್ರೀಡಾ ಕಾರ್ಯದರ್ಶಿಯಾಗಿ ಆದಿತ್ಯ ಕೆ.ಬಿ., ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಕೆ.ಟಿ. ತೀರ್ಥೇಶ್ ಅವರನ್ನು ಆಯ್ಕೆ ಮಾಡಲಾಯಿತು ಗೌರವ ಸಲಹೆಗಾರರಾಗಿ ಬಿ.ಎಸ್ ಜಯಪ್ಪ ಅವರನ್ನು ಮುಂದುವರಿಸಲಾಯಿತು. ಸಲಹೆಗಾರರಾಗಿ ಎಲ್ಲಾ ಮಾಜಿ ಅಧ್ಯಕ್ಷರುಗಳನ್ನು ಆಯ್ಕೆ ಮಾಡಲಾಯಿತು.
ಇದೇ ಸಂದರ್ಭ ೩೧ನೇ ವರ್ಷದ ಗೌರಿ- ಗಣೇಶೋತ್ಸವದ ಸಮಿತಿಯನ್ನು ರಚನೆ ಮಾಡಲಾಯಿತು ಗೌರಿ - ಗಣೇಶೋತ್ಸವದ ಅಧ್ಯಕ್ಷರಾಗಿ ಕೆ.ಬಿ ಆದಿತ್ಯ, ಉಪಾಧ್ಯಕ್ಷರಾಗಿ ಸಿ.ಕೆ. ಮಂಜು, ಕಾರ್ಯದರ್ಶಿಯಾಗಿ ಅವಿನಾಶ್ ಖಜಾಂಚಿಯಾಗಿ ಶಿವಕಾಂತ್ ಬಿ.ಎಂ. ಆಯ್ಕೆಯಾದರು.
ನಂತರ ದಲಿತ ಸಂಘರ್ಷ ಸಮಿತಿ ಮಡಿಕೇರಿ ಕೊಡಗು ಜಿಲ್ಲೆ ಇವರ ವತಿಯಿಂದ.. ೨೦೨೨-೨೩ನೇ ಸಾಲಿನ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದಿಸುವ ಮೂಲಕ ಸನ್ಮಾನ ಮಾಡುವ ಕಾರ್ಯಕ್ರಮ ನಡೆಯಿತು.. ಸನ್ಮಾನ ಪಡೆದ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಸಹ ವ್ಯಕ್ತಪಡಿಸಿದರು.
ದಲಿತ ಸಂಘರ್ಷ ಸಮಿತಿಯ ಪ್ರಮುಖರುಗಳಾದ ಶ್ರೀ ದಿವಾಕರ್ ಜಿಲ್ಲಾ ಸಂಚಾಲಕರು ದಲಿತ ಸಂಘರ್ಷ ಸಮಿತಿ, ದೀಪಕ್ ತಾಲೂಕು ಸಂಚಾಲಕರು, ದಲಿತ ಸಂಘರ್ಷ ಸಮಿತಿ ನಿವೃತ್ತ ಮುಖ್ಯ ಶಿಕ್ಷಕಿ ಪ್ರೇಮಾ ಕೃಷ್ಣಪ್ಪ, ಲೋಕನಾಥ ನಗರ ಸಂಚಾಲಕರು ದಲಿತ ಸಂಘರ್ಷ ಸಮಿತಿ ಹಾಗೂ ಬಿ.ಡಿ.ನಾರಾಯಣ ರೈ ಪಿಡಬ್ಲ್ಯುಡಿ ಗುತ್ತಿಗೆದಾರರು ಬಿ.ಎನ್.ಪುಷ್ಪಾವತಿ, ಸದಸ್ಯರು ಗ್ರಾಮ ಪಂಚಾಯಿತಿ ಕಡಗದಾಳು ಹಾಗೂ ಯುವ ಸಂಘದ ಸ್ಥಾಪಕ ಅಧ್ಯಕ್ಷ ಬಿ.ಎಸ್. ಜಯಪ್ಪ ಹಾಗೂ ನೂತನ ಅಧ್ಯಕ್ಷ ಕೆ.ಪಿ. ಬೆಳ್ಯಪ್ಪ ಹಾಗೂ ಮಾಜಿ ಅಧ್ಯಕ್ಷ ಪಿ.ಎಂ. ಸುರೇಶ್ ರವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಯುವ ಸಂಘದ ಎಲ್ಲಾ ಸದಸ್ಯರು, ಗ್ರಾಮಸ್ಥರು ವಿದ್ಯಾರ್ಥಿಗಳು ಭಾಗವಹಿಸಿದ್ದರು.