ಮಡಿಕೇರಿ, ಆ. ೩೦ : ಆಗಸ್ಟ್ ೨೭ ರಿಂದ ೨೯ ರವರೆಗೆ ಉಡುಪಿಯ ಮಹಾತ್ಮಾ ಗಾಂಧಿ ಕ್ರೀಡಾಂಗಣದಲ್ಲಿ ಜರುಗಿದ ೧೩ನೇ ಆವೃತ್ತಿಯ ಕರ್ನಾಟಕ ರಾಜ್ಯ ಕಿವುಡರ ಕ್ರೀಡಾಕೂಟದಲ್ಲಿ ವಾಲಿಬಾಲ್ ಪಂದ್ಯದಲ್ಲಿ ಕೊಡಗು ಜಿಲ್ಲಾ ತಂಡ ೩ನೇ ಸ್ಥಾನ ಪಡೆದಿದೆ. ತಂಡದ ನಾಯಕರಾಗಿ ರಮ್‌ಶದ್ ಎಮ.ಎ ಕಾರ್ಯನಿರ್ವಹಿಸಿದ್ದು, ನದೀರ್ ಎಮ್.ಎನ್, ಗಣೇಶ್ ಹೆಚ್.ಡಿ, ಸುನಿಲ್ ಎಸ್.ಟಿ, ನಾಗೇಶ, ಧೀರಜ್ ಪಿ.ಎಲ್, ರಮನ್ ಕುಮಾರ್ ಎ.ಆರ್ ಹಾಗೂ ಅಭಿಷೇಕ್ ಪಿ.ಜೆ ಅವರುಗಳು ತಂಡದಲ್ಲಿ ಪಾಲ್ಗೊಂಡಿದ್ದರು ಎಂಬುದಾಗಿ ಕೊಡಗು ಜಿಲ್ಲಾ ಕಿವುಡರ ಸಂಘದ ಅಧ್ಯಕ್ಷ ಗೌರೂ ಎಮ್ ಸೋಮಣ್ಣ ಅವರು ತಿಳಿಸಿದ್ದಾರೆ. ಕ್ರೀಡಾಕೂಟದಲ್ಲಿ ರಾಜ್ಯಾದ್ಯಂತದಿAದ ಒಟ್ಟು ೧೮ ತಂಡಗಳು ಭಾಗವಹಿಸಿದ್ದು, ಕೊಡಗು ಜಿಲ್ಲಾ ತಂಡ ೩ನೆ ಸ್ಥಾನ ಗಳಿಸಿದೆ.