(ಹೆಚ್.ಕೆ. ಜಗದೀಶ್)

ಗೋಣಿಕೊಪ್ಪಲು, ಆ. ೩೦ : ಕೊಡಗಿನ ರೈತರು, ಕಾರ್ಮಿಕರು ಒಂದಲ್ಲಾ ಒಂದು ಸಮಸ್ಯೆಗೆ ನಿರಂತರವಾಗಿ ಒಳಗಾಗುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಕೊಡಗಿನಲ್ಲಿ ಹೆಚ್ಚಾಗಿರುವ ವನ್ಯಜೀವಿ ಮಾನವ ಸಂಘರ್ಷ ತಾರಕಕ್ಕೆ ಏರಿದೆ. ಕೊಡಗಿನ ಪ್ರಮುಖ ಪ್ರದೇಶÀಗಳಲ್ಲಿ, ದೊಡ್ಡ, ದೊಡ್ಡ ಕಾಫಿ ಎಸ್ಟೇಟ್‌ನ ಸಮೀಪದಲ್ಲಿರುವ ಕಾರ್ಮಿಕರ ಲೈನ್ ಮನೆಗಳಲ್ಲಿ, ಕಾಲೋನಿ ಮನೆಗಳಲ್ಲಿ ವಾಸವಿರುವ ಕಾರ್ಮಿಕ ಕುಟುಂಬವು ಆಗಿಂದಾಗ್ಗೆ ನಡೆಯುತ್ತಿರುವ ಅನೆ ಮಾನವ ಸಂಘರ್ಷದಿAದಾಗಿ ತಮ್ಮ ಜೀವವನ್ನು ಕಳೆದುಕೊಳ್ಳುತ್ತಿದ್ದಾರೆ.

ಇಂತಹ ಘಟನೆಗಳಿಂದ ಆ ವ್ಯಕ್ತಿಯನ್ನು ನಂಬಿಕೊAಡು ಜೀವನ ಸಾಗಿಸುತ್ತಿರುವ ಕುಟುಂಬ ಬೀದಿಗೆ ಬರುವ ಆತಂಕ ಎದುರಾಗುತ್ತಿವೆ. ಕಾರ್ಮಿಕ ತನ್ನ ದೈನಂದಿನ ಜೀವನಕ್ಕಾಗಿ ಪ್ರತಿನಿತ್ಯ ಕಾಯಕವನ್ನು ಮಾಡಲೇ ಬೇಕಾದ ಪರಿಸ್ಥಿತಿಯಲ್ಲಿ ದ್ದಾನೆ. ಆದರೆ ತನ್ನ ಕೂಲಿಗಾಗಿ ಮನೆಯಿಂದ ಮುಂಜಾನೆ ಹೊರಡುವ ಕಾರ್ಮಿಕ ಸಂಜೆ ಕೆಲಸ ಮುಗಿಸಿ ಮನೆಗೆ ಬರುವ ಖಾತರಿ ಇಲ್ಲದಂತಾಗಿದೆ. ಅಂತಹ ಪರಿಸ್ಥಿತಿಗೆ ಕಾಡಾನೆಗಳ ಉಪಟಳಗಳು ಕಾರಣವಾಗುತ್ತಿವೆ.

ಇತ್ತೀಚೆಗೆ ನಡೆದ ಆನೆ ದಾಳಿಯಿಂದ ಮೃತಪಟ್ಟ ಕಾರ್ಮಿಕ ಸಿದ್ದಾಪುರ ಬಳಿಯ ಅರೆಕಾಡು ನಿವಾಸಿ ಟ್ರಾö್ಯಕ್ಟರ್ ಚಾಲಕ ದೇವಪ್ಪ ನಮ್ಮ ಮುಂದಿರುವ ಉದಾಹರಣೆ. ಮನೆಯಿಂದ ಅನತಿ ದೂರದಲ್ಲಿ ಬೆಳಗಿನ ೮.೧೫ರ ವೇಳೆ ವಾಕಿಂಗ್ ತೆರಳುತ್ತಿದ್ದ ಸಿದ್ದಾಪುರ ಸಮೀಪದ ಬಾಡಗ ಬಾಣಂಗಾಲ ನಿವಾಸಿ ಆಯಿಷಾ ಎಂಬ ಮಹಿಳೆ ಸಾವಿಗೀಡಾಗಿರುವುದು ನಮ್ಮ ಮುಂದಿರುವ ಮತ್ತೊಂದು ನಿದರ್ಶನ.

ಅರೆಕಾಡು ನಿವಾಸಿ ದೇವಪ್ಪ ನಿಧನ ನಂತರ ಆತನನ್ನು ನಂಬಿ ಬದುಕು ಸಾಗಿಸುತ್ತಿದ್ದ ಕುಟುಂಬ ಕಷ್ಟಕ್ಕೆ ಸಿಲುಕಿದೆ. ತನ್ನ ಜೀವನ ನಿರ್ವಹಣೆಗೆ ಸಾಲದ ರೂಪದಲ್ಲಿ ಟ್ರಾö್ಯಕ್ಟರ್ ಖರೀದಿಸಿದ್ದ ದೇವಪ್ಪ ಅವರ ಸಾಲ ಮನೆಯವರಿಗೆ ಹೊರೆಯಾಗಿದೆ. ಮಾಡಿದ ಸಾಲವನ್ನು ತೀರಿಸುವುದು ಹೇಗೆಂಬ ಚಿಂತನೆಯಲ್ಲಿ ಕುಟುಂಬ ದಿನ ಕಳೆಯುತ್ತಿದೆ.

ಇತ್ತೀಚಿನ ದಿನಗಳಲ್ಲಿ ಸಿದ್ದಾಪುರ ಸುತ್ತಮುತ್ತಲಿನ ಪ್ರದೇಶಗಳಾದ ಅರೆಕಾಡು, ಬಾಡಗ ಬಾಣಂಗಾಲ, ಅಮ್ಮತ್ತಿ, ಕಣ್ಣಂಗಾಲ, ಹಾಲುಗುಂದ, ಅಚ್ಚಿನಾಡು, ಮೈತಾಡಿ, ಭಾಗದಲ್ಲಿ ಕಾಡಾನೆಗಳ ದಾಳಿಗೆ ಎರಡು ಮಂದಿ ಜೀವವನ್ನು ಕಳೆದುಕೊಂಡಿದ್ದಾರೆ. ಉಳಿದಂತೆ ಹಲವು ಮಂದಿ ಕಾಡಾನೆಗೆ ಸಿಲುಕಿ ಗಂಭೀರ ಗಾಯಗೊಂಡು ಕೈ ಕಾಲುಗಳನ್ನು ಕಳೆದುಕೊಂಡು ಅಂಗವೈಫಲ್ಯರಾಗಿದ್ದಾರೆ. ತಿಂಗಳು ಗಟ್ಟಲೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ತೆರಳುವ ಅದೆಷ್ಟೋ ಮಂದಿಗೆ ಜೀವನ ನಿರ್ವಹಣೆ ಸಾಧ್ಯವಾಗುತ್ತಿಲ್ಲ.

ಇಲಾಖೆಯು ನೀಡುವ ಮಾಸಿಕ ವೇತನಕ್ಕಾಗಿ ಎದುರು ನೋಡಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣ ವಾಗಿದೆ.

(ಮೊದಲ ಪುಟದಿಂದ) ಅರಣ್ಯ ಇಲಾಖೆಯು ಅಂಗವೈಫಲ್ಯಕ್ಕೆ ತುತ್ತಾಗಿರುವ ವ್ಯಕ್ತಿಗಳಿಗೆ ತಮ್ಮ ಜೀವನ ನಿರ್ವಹಣೆಗೆ ಬೇಕಾದ ಅಗತ್ಯ ಸೌಲಭ್ಯಗಳನ್ನು ನೀಡಬೇಕಾಗಿದೆ. ಕಾಡಾನೆ ಉಪಟಳದಿಂದ ಪ್ರಾಣ ಹಾನಿ ಹಾಗೂ ಅಂಗವೈಫಲ್ಯಗಳು ಒಂದೆಡೆ ನಡೆಯುತ್ತಿದ್ದರೆ ಇನ್ನೊಂದೆಡೆ ಹುಲಿದಾಳಿಯಿಂದ ರೈತರ ಜಾನುವಾರುಗಳು ಹುಲಿಯ ಬಾಯಿಗೆ ಆಹಾರವಾಗುತ್ತಿದೆ.

ದ. ಕೊಡಗಿನ ಬೆಸಗೂರು, ಕೋತೂರು, ತೂಚಮಕೇರಿ ಸೇರಿದಂತೆ ಹಲವು ಗ್ರಾಮಗಳಲ್ಲಿ ರೈತರಿಗೆ ಸೇರಿರುವ ಹಸು, ಕರು ಹಾಗೂ ಹೋರಿಗಳು, ಹುಲಿಯ ಬಾಯಿಗೆ ಸೇರುತ್ತಿವೆ. ಇತ್ತೀಚೆಗೆ ಕೋತೂರು ಭಾಗದ ರೈತರಾದ ಗಣೇಶ್(ಗಿಣಿ) ಎಂಬವರು ಮೇಯಲು ಬಿಟ್ಟಿದ್ದ ಕರುವನ್ನು ಕಾರ್ಮಿಕನ ಅನತಿ ದೂರದಲ್ಲಿಯೇ ಹುಲಿಯು ಆಗಮಿಸಿ ಕರುವನ್ನು ಕೊಂದು ಹಾಕಿದೆ. ಸ್ವಲ್ಪದರಲ್ಲಿಯೇ ಕಾರ್ಮಿಕ ಹುಲಿಯಿಂದ ಬಚಾವಾಗಿದ್ದಾನೆ.

ಕೆಲವು ತಿಂಗಳ ಹಿಂದೆ ಕೆ.ಬಾಡಗ ಬಳಿ ಕಾಫಿ ತೋಟವೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಹುಲಿಯು ಹಗಲಿನ ವೇಳೆಯೇ ಓರ್ವ ಕಾರ್ಮಿಕನನ್ನು ಎಳೆದೊಯ್ದು ತಿಂದು ಹಾಕಿತ್ತು. ಮಾರನೆಯ ದಿನ ಮನೆಯ ಸಮೀಪವೇ ಹುಲಿ ದಾಳಿ ನಡೆಸಿ ಮತ್ತೋರ್ವ ಕಾರ್ಮಿಕರನ್ನು ಕೊಂದು ಹಾಕಿತ್ತು. ಈ ವೇಳೆ ನಾಗರಿಕರು, ಸಂಘ ಸಂಸ್ಥೆಯ ಪದಾಧಿಕಾರಿಗಳು ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಆಕ್ರೋಶಗೊಂಡು ಪ್ರತಿಭಟನೆ ನಡೆಸಿದ್ದರು.

ವ್ಯಾಘ್ರ ಉಪಟಳ

ಹಲವು ಸಣ್ಣ ರೈತರು ಹಸು ಕರುಗಳನ್ನು ನಂಬಿ ಜೀವನ ಸಾಗಿಸುತ್ತಿದ್ದಾರೆ. ಮನೆಯಲ್ಲಿರುವ ಹಸುಗಳು ರೈತನ ಅಚ್ಚುಮೆಚ್ಚಿನ ಪ್ರಾಣಿಯಾಗಿದೆ. ತಮ್ಮ ಮನೆಯ ಸಮೀಪದ ಕೊಟ್ಟಿಗೆಯಲ್ಲಿ ಹಾಗೂ ಭತ್ತದ ಗದ್ದೆಗಳಲ್ಲಿ ಮೇಯಲು ಬಿಟ್ಟಿರುವ ಹಸು ಕರುಗಳ ಮೇಲೆ ದಾಳಿ ನಡೆಸುವ ಹುಲಿಗಳು ಇವುಗಳನ್ನು ಕೊಂದು ಹಾಕುತ್ತಿವೆ. ಈ ಘಟನೆಯಿಂದ ಹೈನುಗಾರಿಕೆಯನ್ನು ನಂಬಿರುವ ರೈತನಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಸರ್ಕಾರದ ವತಿಯಿಂದ ಬಿಡುಗಡೆಯಾಗುವ ಪರಿಹಾರ ಧನವು ನಿಗದಿತ ಸಮಯದಲ್ಲಿ ರೈತನ ಕೈ ಸೇರುತ್ತಿಲ್ಲ. ಹೊಸದಾಗಿ ಹಸುಗಳನ್ನು ಖರೀದಿಸಲು ಪರಿಹಾರ ಧನದಲ್ಲಿ ಸಿಗುವ ಹಣದಿಂದ ಸಾಧ್ಯವಾಗುತ್ತಿಲ್ಲ. ಹೀಗಾಗಿ ತನ್ನ ಮನೆಗೆ ಹಸುಗಳನ್ನು ಖರೀದಿಸುವುದನ್ನೇ ಅನೇಕ ರೈತರು ನಿಲ್ಲಿಸಿದ್ದಾರೆ. ಇದರಿಂದ ಜಾನುವಾರುಗಳ ಸಂಖ್ಯೆಯು ಕಡಿಮೆಯಾಗುತ್ತಿದೆ. ರೈತನಿಗೆ ಜಾನುವಾರುಗಳು ಅನೇಕ ರೀತಿಯಲ್ಲಿ ಸಹಾಯಕವಾಗುತ್ತಿವೆ. ಅತೀ ಸಣ್ಣ ರೈತರು ತಮ್ಮ ಭೂಮಿ, ಗದ್ದೆ ಹಾಗೂ ಕಾಫಿ ತೋಟಕ್ಕೆ ಜಾನುವಾರುಗಳ ಕೊಟ್ಟಿಗೆ ಗೊಬ್ಬರಗಳನ್ನು ಬಳಸುತ್ತಿದ್ದಾರೆ. ಇದೀಗ ಹುಲಿಯ ಭಯದಿಂದ ಜಾನುವಾರುಗಳ ಸಾಕಾಣಿಕೆಗೆ ರೈತ ಮನಸ್ಸು ಮಾಡುತ್ತಿಲ್ಲ. ಇದರಿಂದಾಗಿ ತನ್ನ ತೋಟ ಹಾಗೂ ಗದ್ದೆಗಳಿಗೆ ಬೇಕಾದ ರಸಗೊಬ್ಬರಗಳನ್ನು ಖರೀದಿಸುವ ನಿಟ್ಟಿನಲ್ಲಿ ಮುಂದೆ ಸಾಗಿದ್ದಾನೆ.

ಗ್ರಾಮದಲ್ಲಿ ಹುಲಿಗಳ ಸಂಚಾರ ಇದ್ದ ಸಂದರ್ಭ ಕಾರ್ಮಿಕರು ಸಹಜವಾಗಿ ಕಾಫಿ ತೋಟಗಳ ಕೆಲಸಕ್ಕೆ ಮುಂದೆ ಬರುತ್ತಿಲ್ಲ. ಇದರಿಂದ ರೈತ ಹಾಗೂ ಬೆಳೆಗಾರನಿಗೆ ನಿಗದಿತ ಸಮಯದಲ್ಲಿ ಕೆಲಸ ಕಾರ್ಯಗಳು ಪೂರ್ಣಗೊಳ್ಳದೆ ಇರುವುದರಿಂದ ಇಲ್ಲಿಯೂ ಕೂಡ ನಷ್ಟ ಅನುಭವಿಸುವ ಪರಿಸ್ಥಿತಿ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಸಾಗುತ್ತಿವೆ. ಕಾಫಿ ತೋಟದಲ್ಲಿ ಕಾಡಾನೆಗಳು, ಹುಲಿಯ ಸಂಚಾರವು ಹೆಚ್ಚಾಗಿರುವುದರಿಂದ ರೈತನ ತೋಟದಲ್ಲಿ ಬೆಳೆ ಹಾನಿಯೂ ನಿರಂತರವಾಗಿ ಇವುಗಳಿಂದ ನಡೆಯುತ್ತಿದೆ. ಫಸಲುಭರಿತ ಕಾಫಿ, ಕರಿಮೆಣಸು, ಅಡಿಕೆ, ಬಾಳೆ ಸೇರಿದಂತೆ ಇನ್ನಿತರ ಗಿಡಗಳನ್ನು ಕಾಡಾನೆಗಳು ಮುರಿದು ಹಾಕುತ್ತಿವೆ. ಇದನ್ನು ಸರಿಪಡಿಸಲು ರೈತನಿಗೆ ಸಾಧ್ಯವಾಗುತ್ತಿಲ್ಲ. ಒಂದಲ್ಲ ಒಂದು ರೀತಿಯಲ್ಲಿ ವನ್ಯಜೀವಿ ಹಾಗೂ ಮಾನವ ಸಂಘರ್ಷ ಹೆಚ್ಚಾಗುತ್ತಲೇ ಸಾಗುತ್ತಿವೆ.

ಆನೆ, ಮಾನವ ಸಂಘರ್ಷ ತಡೆಗಟ್ಟಲು ಅರಣ್ಯ ಇಲಾಖೆಯು ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದರೂ. ಇದರ ನಿರ್ವಹಣೆ ಇಲ್ಲದೆ ಆನೆ ಕಂದಕ, ಸೋಲಾರ್ ಬೇಲಿಗಳು ಹಾಗೂ ಹ್ಯಾಂಗಿAಗ್ ಸೋಲಾರ್ ಫೆನ್ಸ್ಗಳು ಹಾಳಾಗುತ್ತಿವೆ. ಸರ್ಕಾರ ಕೋಟ್ಯಂತರ ಹಣವನ್ನು ಆನೆ ಮಾನವ ಸಂಘರ್ಷದ ಹತೋಟಿಗೆ ಬಿಡುಗಡೆಗೊಳಿಸುತ್ತಿದ್ದರೂ ಕಾಮಗಾರಿಯ ಆರಂಭದಲ್ಲಿರುವ ಉತ್ಸಾಹ ಅಂತಿಮ ಹಂತದವರೆಗೆ ಕೆಲವು ಹಿರಿಯ ಅರಣ್ಯ ಅಧಿಕಾರಿಗಳಿಗೆ ಇಲ್ಲದಿರುವುದರಿಂದ ಹಾಗೂ ಇಚ್ಚಾಶಕ್ತಿ ಕೊರತೆಯಿಂದ ಅನೇಕ ರೀತಿಯ ಕಾರ್ಯಕ್ರಮದ ಅನುಷ್ಠಾನಗಳು ಅರ್ಧದಲ್ಲಿಯೇ ಮೊಟಕುಗೊಂಡಿವೆ.

ತಿತಿಮತಿ ಪಂಚಾಯಿತಿ ವ್ಯಾಪ್ತಿಯ ಆಯಿರಸುಳಿ ಎಂಬ ಗ್ರಾಮದಲ್ಲಿ ನೂರಾರು ಗಿರಿಜನ ಕುಟುಂಬಗಳು ವಾಸಿಸುತ್ತಿದ್ದಾರೆ. ಈ ಭಾಗದಲ್ಲಿ ಕೋಟ್ಯಂತರ ವೆಚ್ಚದಲ್ಲಿ ನಿರ್ಮಾಣವಾಗಿರುವ ರೈಲ್ವೆ ಬ್ಯಾರಿಕೇಡ್ ಕಾಮಗಾರಿ ಇನ್ನೂ ಕೂಡ ಪೂರ್ಣಗೊಂಡಿಲ್ಲ. ಸರ್ಕಾರ ಕೋಟ್ಯಂತರ ಹಣವನ್ನು ಈ ಯೋಜನೆಗೆ ಮಂಜೂರು ಮಾಡಿದ್ದರೂ ನಿಗದಿತ ಅವಧಿಯಲ್ಲಿ ಟೆಂಡರುದಾರರು ಕಾಮಗಾರಿಯನ್ನು ಪೂರ್ಣಗೊಳಿಸುವಲ್ಲಿ ವಿಫಲರಾಗಿದ್ದಾರೆ. ಇದರಿಂದ ಕಾಡಾನೆಗಳು ಗಿರಿಜನರು ವಾಸ ಮಾಡುವ ನಿವಾಸದ ಬಳಿ ತೆರಳುತ್ತಿವೆ. ಇಂತಹ ಸಂದರ್ಭದಲ್ಲಿ ಕಾಡಾನೆಯಿಂದ ಹಲವು ಅಪಾಯಗಳು ಸಂಭವಿಸಿವೆ.

ಇತ್ತೀಚೆಗೆ ಕೊಡಗಿಗೆ ಮೊದಲ ಬಾರಿಗೆ ಆಗಮಿಸಿರುವ ಕರ್ನಾಟಕ ರಾಜ್ಯದ ಅರಣ್ಯ ಸಚಿವರಾದ ಈಶ್ವರ್‌ಖಂಡ್ರೆ ಆನೆ ಮಾನವ ಸಂಘರ್ಷಕ್ಕೆ ಇತಿಶ್ರೀ ಹಾಡುವ ನಿಟ್ಟಿನಲ್ಲಿ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣನವರ ನಿರ್ದೇಶನದ ಮೇರೆ ಆಗಮಿಸಿದ್ದರು. ಈ ವೇಳೆ ಸಚಿವರೊಂದಿಗೆ ರಾಜ್ಯ ಮಟ್ಟದ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಇಲ್ಲಿನ ನೈಜ ಪರಿಸ್ಥಿತಿಯಲ್ಲಿ ಅರಿತಿದ್ದಾರೆ. ಸಚಿವರು ಸೂಚಿಸಿದ ರೀತಿಯಲ್ಲಿ ವನ್ಯ ಜೀವಿ ಮಾನವ ಸಂಘರ್ಷ ತಡೆಯುವಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳುತ್ತಾರೆಯೇ ಕಾದು ನೋಡಬೇಕು.