ಸೋಮವಾರಪೇಟೆ, ಆ. ೨೯: ಮಡಿಕೇರಿ ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಶುಕೃತ ಇಂದೂಧರ್ ಅವರು ಮಿಸ್ಸಸ್ ಇಂಡಿಯಾ ಕರ್ನಾಟಕ ೨೦೨೩ ಕ್ವೀನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಹಾಗೆಯೇ ಮಿಸ್ಸೆಸ್ ಕೊಡಗು, ಮಿಸ್ಸೆಸ್ ಇಂಡಿಯಾ ಕರ್ನಾಟಕ ರೀಮಾರ್ಕ್ಯಬಲ್ ಕ್ವೀನ್ ಪಟ್ಟವನ್ನು ತನ್ನದಾಗಿಸಿಕೊಂಡಿದ್ದಾರೆ. ಬೆಂಗಳೂರಿನ ಕೋಣನಕುಂಟೆ ಶ್ರೀಹರಿ ಖೋಡೆ ಆಡಿಟೋರಿಯಮ್ನಲ್ಲಿ ನಡೆದ ಪ್ರತಿಭಾಸೌಶಿಮಠ್ ಆಹ್ವಾನಿತ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ಪಡೆದರು. ಸ್ಪರ್ಧೆಯಲ್ಲಿ ೩೫ ಮಂದಿ ಭಾಗವಹಿಸಿದ್ದರು. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ೧೯೯೩ ಮಿಸ್ಇಂಡಿಯಾ ರೇಖಾ ಹಂಡೆ, ೨೦೧೮ ಮಿಸ್ ಇಂಡಿಯಾ ಉಜಾಲ ಸಾಬರವಲ್, ಕಲಾವಿದರಾದ ಸಿಲ್ಲಿಲಲ್ಲಿ ಖ್ಯಾತಿಯ ಸುನೇತ್ರ ಪಂಡಿತ್, ಪೋಷಕ ನಟ ಸುರೇಶ್ ಹಾಗೂ ಆಯೋಜಕರಾದ ಪ್ರತಿಭಾ ಸೌಶಿಮಠ್ ಇದ್ದರು. ಡಾ. ಶುಕೃತ ಅವರು ಸೋಮವಾರಪೇಟೆ ತಾಲೂಕಿನ ಗೌಡಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಇಂದೂಧರ್ ಅವರ ಪತ್ನಿಯಾಗಿದ್ದು, ಕುಶಾಲನಗರದಲ್ಲಿ ನೆಲೆಸಿದ್ದಾರೆ.