ಪೊನ್ನಂಪೇಟೆ, ಆ. ೨೯: ಆಗಸ್ಟ್ ತಿಂಗಳು ಮುಗಿಯುತ್ತಾ ಬರುತ್ತಿದ್ದರೂ ಈ ಬಾರಿ ಉತ್ತಮ ಮಳೆಯಾಗದಿರುವ ಕಾರಣ ಭತ್ತದ ಗದ್ದೆಗಳು ಬಿಸಿಲಿನ ತಾಪಕ್ಕೆ ಬಿರುಕು ಬಿಡುತ್ತಿದ್ದು, ನಾಟಿ ಮಾಡಿದ್ದ ಪೈರು ಒಣಗಲು ಪ್ರಾರಂಭಿಸಿವೆ. ಮಳೆಗಾಗಿ ಆಕಾಶ ದಿಟ್ಟಿಸುತ್ತಾ ಕುಳಿತಿರುವ ಕೃಷಿಕರು, ಮಳೆಗಾಲ ಮುಗಿಯುತ್ತಾ ಬರುತ್ತಿದ್ದರೂ ಇನ್ನೂ ಉತ್ತಮ ಮಳೆ ಬಾರದೆ ಇರುವ ಕಾರಣ ಕಂಗಾಲಾಗಿದ್ದಾರೆ.

ದಕ್ಷಿಣ ಕೊಡಗಿನ ಟಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೋಕಳತೋಡು ಗ್ರಾಮದ ರೈತ ಕೊಂಡಿಜಮ್ಮನ ಮುರುಗೇಶ್ ಎಂಬವರ ತೋಟದಲ್ಲಿ ಕಳೆದ ಕೆಲವು ತಿಂಗಳ ಹಿಂದೆ ನೆಟ್ಟಿದ್ದ ಅಡಿಕೆ ಗಿಡಗಳು ಬಿಸಿಲಿಗೆ ಒಣಗುತ್ತಿರುವ ಕಾರಣ ಗಿಡಗಳನ್ನು ಉಳಿಸಿಕೊಳ್ಳಲು ಸ್ಪಿçಂಕ್ಲರ್ ಮೂಲಕ ನೀರು ಹಾಯಿಸುತ್ತಿದ್ದ ದೃಶ್ಯ ಕಂಡು ಬಂತು. ಈ ಸಂದರ್ಭ ‘ಶಕ್ತಿ’ ಯೊಂದಿಗೆ ಮಾತನಾಡಿದ ರೈತ ಮುರುಗೇಶ್ ನಾನು ಹಲವು ವರ್ಷದಿಂದ ಕೃಷಿಯಲ್ಲಿ ತೊಡಗಿಸಿಕೊಂಡಿದ್ದೇನೆ. ಕೆಲವೊಮ್ಮೆ ಮಳೆಗಾಲದಲ್ಲಿ ಮಳೆ ಬರುವ ಅವಧಿಯಲ್ಲಿ ವ್ಯತ್ಯಾಸ ವಾದರೂ, ನಮ್ಮ ಭಾಗಕ್ಕೆ ಒಟ್ಟಾರೆ ಯಾಗಿ ಉತ್ತಮ ಮಳೆಯಾಗುತಿತ್ತು, ಆದರೆ ಈ ಬಾರಿ ಮಳೆ ಬಾರದೆ ಬರಗಾಲದ ಪರಿಸ್ಥಿತಿ ನಿರ್ಮಾಣ ವಾಗಿದೆ. ನಾನು ಭತ್ತದ ಕೃಷಿ ಮೇಲಿನ ಪ್ರೀತಿಯಿಂದ ಪ್ರತಿ ವರ್ಷ ಭತ್ತ ನಾಟಿ ಮಾಡುತ್ತಾ ಬರುತ್ತಿದ್ದೇನೆ. ಈ ಬಾರಿಯೂ ಕೂಡ ೨ ಎಕರೆಯಷ್ಟು ನಾಟಿ ಮಾಡಿದ್ದೆ. ಸಕಾಲಕ್ಕೆ ಮಳೆ ಬಾರದೆ ಇರುವ ೩ಐದನೇ ಪುಟಕ್ಕೆ

(ಮೊದಲ ಪುಟದಿಂದ) ಕಾರಣ ಗದ್ದೆಗಳು ಒಣಗಳು ಪ್ರಾರಂಭಿಸಿವೆ. ಮುಂದಿನ ಕೆಲವು ದಿನಗಳ ಒಳಗೆ ಮಳೆ ಬಾರದೆ ಇದ್ದರೆ ರೈತರಾದ ನಾವು ತೀವ್ರ ಸಂಕಷ್ಟ ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ತಮ್ಮ ಅಳಲು ತೋಡಿಕೊಂಡರು. ಕೊಡಗಿನ ರೈತರು ಮಳೆಯನ್ನೇ ನಂಬಿಕೊAಡು ಕೃಷಿ ಮಾಡುತ್ತಾರೆ. ಅನೇಕ ಬಾರಿ ಅತಿವೃಷ್ಟಿಯಿಂದ ನಷ್ಟ ಅನುಭವಿಸಿದ್ದಾರೆ. ಈ ಬಾರಿ ಅನಾವೃಷ್ಟಿಯಿಂದ ಸಂಕಷ್ಟ ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಒಟ್ಟಿನಲ್ಲಿ ಕೊಡಗಿನ ಕೃಷಿಯು ಮಳೆಯೊಡನೆ ಆಡುವ ಜೂಜಾಟವಾಗಿದ್ದು, ಕೃಷಿಯಿಂದ ನಷ್ಟ ಅನುಭವಿಸುವ ರೈತರಿಗೆ ಸೂಕ್ತ ಪರಿಹಾರ ನೀಡುವ ಮೂಲಕ ಸರ್ಕಾರ ಅನ್ನದಾತನ ಕೈ ಹಿಡಿಯುವ ಕೆಲಸವನ್ನು ಮಾಡಬೇಕಿದೆ. ಸರ್ಕಾರ ಭತ್ತದ ಕೃಷಿ ಮಾಡುವ ರೈತರಿಗೆ ವಿಶೇಷ ಪರಿಹಾರ ಒದಗಿಸಿ ಪ್ರೋತ್ಸಾಹ ನೀಡಬೇಕಾದ ಅನಿವಾರ್ಯತೆ ಇದೆ. -ಚಿತ್ರ , ವರದಿ: ಚನ್ನನಾಯಕ