ಪೊನ್ನಂಪೇಟೆ, ಆ. ೩೦: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪೊನ್ನಂಪೇಟೆ ವಲಯದ ಟಿ. ಶೆಟ್ಟಿಗೇರಿ ಕಾರ್ಯಕ್ಷೇತ್ರದ ದಿವ್ಯಜ್ಯೋತಿ ಧರ್ಮಸ್ಥಳ ಸ್ವಸಹಾಯ ಸಂಘದ ಸದಸ್ಯೆ ಭಾರತಿ ಅವರ ತಾಯಿ ತಂಗಮ್ಮ ಎಂಬವರು ಬ್ರೆöÊನ್ ಟ್ಯೂಮರ್ ಕಾಯಿಲೆಯಿಂದ ನರಳುತ್ತಿದ್ದು, ಇವರಿಗೆ ಶಸ್ತç ಚಿಕಿತ್ಸೆ ಮಾಡಿಸಲು ಸುಮಾರು ರೂ. ೪ ಲಕ್ಷ ಖರ್ಚಾಗಿತ್ತು. ಧರ್ಮಸ್ಥಳ ಸಂಸ್ಥೆಯ ಕಾರ್ಯಕರ್ತರು ಧರ್ಮಸ್ಥಳ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರಿಗೆ ಮನವಿಯನ್ನು ಸಲ್ಲಿಸಿದ ಮೇರೆಗೆ ಮನವಿಯನ್ನು ಪರಿಗಣಿಸಿದ ಹೆಗ್ಗಡೆಯವರು ರೂ. ೨೫,೦೦೦ ಮಂಜೂರು ಮಾಡಿದ್ದರು.

ಮಂಜೂರಾತಿ ಪತ್ರವನ್ನು ಫಲಾನುಭವಿ ಕುಟುಂಬಕ್ಕೆ ತಾಲೂಕಿನ ಯೋಜನಾಧಿಕಾರಿಗಳಾದ ಬಿ. ದಿನೇಶ್ ಅವರು ವಿತರಿಸಿದರು. ಈ ಸಂದರ್ಭ ವಲಯ ಮೇಲ್ವಿಚಾರಕ ನರಸಿಂಹಮೂರ್ತಿ, ಟಿ. ಶೆಟ್ಟಿಗೇರಿ ಪದಾಧಿಕಾರಿ ಬೊಳ್ಳಮ್ಮ, ಶ್ರೀಮಂಗಲ ಪದಾಧಿಕಾರಿ ಮೀನಾಕ್ಷಿ, ಸೇವಾ ಪ್ರತಿನಿಧಿ ಸರಳ ಹಾಗೂ ಸಂಘದ ಸದಸ್ಯರು ಉಪಸಿತರಿದ್ದರು.