ಗೋಣಿಕೊಪ್ಪಲು, ಆ. ೩೦ : ರಾಜಕೀಯ ಕ್ಷೇತ್ರದಲ್ಲಿ ಇರುವವ ರೆಗೂ ಆದಿವಾಸಿಗಳೊಂದಿಗೆ ನಿಮ್ಮವ ನಾಗಿರುವೆ ಎಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಗಿರಿಜನರಿಗೆ ಭರವಸೆಯ ಮಾತುಗಳನ್ನಾಡಿದರು.
ವೀರಾಜಪೇಟೆ ತಾಲೂಕು ತಿತಿಮತಿಯಲ್ಲಿರುವ ಗಿರಿಜನ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘದ ವಾಣಿಜ್ಯ ಮಳಿಗೆಯನ್ನು ಉದ್ಘಾಟಿಸಿ, ಗಿರಿಜನರ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಇವರು, ಮಹಿಳೆಯರು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಧಿಕಾರ ಪಡೆಯಲು ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿಯವರು ಕಾರಣರಾಗಿದ್ದಾರೆ. ಇದೀಗ ಕಾನೂನುಗಳಿಂದ ಮಹಿಳೆ ಯರು ಅದರಲ್ಲೂ ವಿಶೇಷವಾಗಿ ಪರಿಶಿಷ್ಟ ಜಾತಿ ಹಾಗೂ ಪಂಗಡ ಮಹಿಳೆಯರು ಅಧಿಕಾರವನ್ನು ಪಡೆದಿದ್ದಾರೆ. ಸಹಕಾರಿ ಸಂಘದಲ್ಲಿ ಬಹಳಷ್ಟು ಪ್ರೋತ್ಸಾಹ ನೀಡುವಂತ ಹಲವಾರು ನೀತಿಗಳನ್ನು ರೂಪಿಸಲಾ ಗಿದೆ. ಸರಕಾರ ಅಧಿಕಾರಕ್ಕೆ ಬಂದು ನೂರು ದಿನದೊಳಗೆ ೫ ಗ್ಯಾರೆಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಲ್ಯಾಂಪ್ಸ್ ಸೊಸೈಟಿಯ ಅಧ್ಯಕ್ಷ ಮಣಿಕುಂಞ ಮಾತನಾಡಿ, ಗಿರಿಜನರ ಅಭ್ಯುದಯ ಕ್ಕಾಗಿ ಇರುವ ಸಂಘದಲ್ಲಿ ಗಿರಿಜನರು ಅರಣ್ಯದಲ್ಲಿ ಸಿಗುವ ಮರಪಾಚಿ, ಅಂಟುವಾಳಕಾಯಿ ಹಾಗೂ ಜೇನನ್ನು ಸಂಗ್ರಹಿಸಿ ಅದನ್ನು ಸಂಘದ ವತಿ ಯಿಂದ ಮಾರಾಟ ಮಾಡಲಾಗುತ್ತಿದೆ. ಇದನ್ನು ಹೊರತು ಪಡಿಸಿ ಬೇರೆ ಯಾವುದೇ ಆದಾಯವು ಸಂಘಕ್ಕೆ ಬರುತ್ತಿಲ್ಲ. ಸಂಘದ ಅಭಿವೃದ್ಧಿಗೆ ಸರ್ಕಾ ರದ ವತಿಯಿಂದ ಅನುದಾನವನ್ನು ಕೊಡಿಸಬೇಕು. ಸಂಘದ ಕಟ್ಟಡ ನಿರ್ಮಾಣಕ್ಕೆ ಕೈ ಜೋಡಿಸಬೇಕೆಂದು ಶಾಸಕರಲ್ಲಿ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಇತ್ತೀಚೆಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಆಯ್ಕೆಯಾದ ನಾಲ್ಕೇರಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಜೆ.ಕೆ. ಸೋಮಯ್ಯ, ದೇವರಪುರ ಗ್ರಾ.ಪಂ. ಅಧ್ಯಕ್ಷೆ ಶಶಿಕಲಾರವರನ್ನು ಹಾಗೂ ಲ್ಯಾಂಪ್ಸ್ನ ಮಾಜಿ ಅಧ್ಯಕ್ಷ ಪಿ.ಎಂ. ಸುಬ್ರುರವರನ್ನು ಶಾಸಕರು ಸನ್ಮಾನಿಸಿ ಗೌರವಿಸಿದರು. ವೇದಿಕೆಯಲ್ಲಿ ಲ್ಯಾಂಪ್ಸ್ ಸೊಸೈಟಿಯ ಉಪಾಧ್ಯಕ್ಷೆ ಜೆ.ಆರ್.ಪುಷ್ಪ, ನಿರ್ದೇಶಕರುಗಳಾದ ಪಿ.ಎಂ.ಸುಬ್ರು, ಜೆ.ಕೆ.ರಾಜು, ಪಿ.ಸಿ. ಬೋಜಪ್ಪ, ಪಿ.ಕೆ.ಸಿದ್ದಪ್ಪ, ಜೆ.ಕೆ. ಅಣ್ಣಯ್ಯ, ಜೆ.ಸಿ. ಶಾಂತಮ್ಮ, ವೈ.ಎಂ. ಪ್ರಕಾಶ್, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಿದೇರಿರ ನವೀನ್ ಮಾಯ ಮುಡಿ ಗ್ರಾ.ಪಂ. ಅಧ್ಯಕ್ಷ ಆಪಟ್ಟೀರ ಟಾಟುಮೊಣ್ಣಪ್ಪ, ಮಾಜಿ ಜಿ.ಪಂ. ಸದಸ್ಯರಾದ ಪಿ.ಆರ್. ಪಂಕಜ, ತಿತಿ ಮತಿ ಜೋನಲ್ ಅಧ್ಯಕ್ಷ ನವೀನ್, ಕಾಂಗ್ರೆಸ್ ಪಕ್ಷದ ಪ್ರಮುಖರಾದ ಕೋಳೆರ ಭಾರತಿ, ತೆರೆಸ ವಿಕ್ಟರ್ ಸೇರಿದಂತೆ ಇನ್ನಿ ತರ ಪ್ರಮುಖರು ಉಪಸ್ಥಿತರಿದ್ದರು.
ತಿತಿಮತಿ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘದ ಕಾರ್ಯದರ್ಶಿ ಎಸ್.ಕುಮಾರ್ ಸ್ವಾಗತಿಸಿ ನಿರ್ದೇಶಕ ಪಿ.ಕೆ.ಸಿದ್ದಪ್ಪ ವಂದಿಸಿದರು. ವಿವಿಧ ಭಾಗದಿಂದ ಆದಿವಾಸಿ ಮುಖಂಡರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.