ಮಡಿಕೇರಿ, ಆ. ೨೯: ವೀರಾಜಪೇಟೆ ವಿಭಾಗದ, ವೀರಾಜಪೇಟೆ ವಲಯದ, ವೀರಾಜಪೇಟೆ, ಅಮ್ಮತ್ತಿ ಶಾಖೆಗೆ ಒಳಪಡುವ ಗ್ರಾಮಗಳಾದ ದೇವಣಗೇರಿ, ಮೈತಾಡಿ, ಚೆಂಬೆಬೆಳ್ಳೂರು, ಹಾಲುಗುಂದ, ಬೈರಂಬಾಡಿ, ಕಣ್ಣಂಗಾಲ, ಹಚ್ಚಿನಾಡಿ, ಇಂಜಿಲಗೆರೆ, ಪುಲಿಯೇರಿ, ಸಿದ್ದಾಪುರ ಗ್ರಾಮಗಳಲ್ಲಿ ಸಾರ್ವಜನಿಕ ಉಪಟಳ ನೀಡುತ್ತಿರುವ ಕಾಡಾನೆಗಳನ್ನು ತಾ. ೩೦ ಮತ್ತು ೩೧ ರಂದು ಮರಳಿ ಕಾಡಿಗೆ ಓಡಿಸುವ ಕಾರ್ಯಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ. ತೋಟದ ಕಾರ್ಮಿಕರು ತಮ್ಮ ಕೆಲಸ ಕಾರ್ಯಗಳನ್ನು ನಿಲ್ಲಿಸುವಂತೆ ಹಾಗೂ ಗ್ರಾಮಸ್ಥರು, ಶಾಲಾ ಮಕ್ಕಳು ಎಚ್ಚರಿಕೆಯಿಂದ ಇದ್ದು, ಕಾಡಾನೆ ಕಾರ್ಯಾಚರಣೆಗೆ ಇಲಾಖೆಯೊಂದಿಗೆ ಸಹಕರಿಸಬೇಕಾಗಿ ಹಾಗೂ ಸದರಿ ಸಮಯದಲ್ಲಿ ಸಾರ್ವಜನಿಕರು ಪಟಾಕಿಗಳನ್ನು ಸಿಡಿಸಬಾರದೆಂದು ವಲಯ ಅರಣ್ಯಾಧಿಕಾರಿಯವರು ಪ್ರಕಟಣೆಯಲ್ಲಿ ಕೋರಿದ್ದಾರೆ.