ಚೆಯ್ಯಂಡಾಣೆ, ಆ. ೨೭: ಎಸ್.ಎಸ್.ಕಲಾ ಸಂಗಮದ ವತಿಯಿಂದ ಮಿಸ್, ಮಿಸೆಸ್ ಅಂಡ್ ಕಿಡ್ಸ್ ಸೀಸನ್ ಫೋರ್ ಕಾರ್ಯಕ್ರಮ ಮೈಸೂರಿನ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ನಡೆಯಿತು.

ರಾಜ್ಯದ ವಿವಿಧ ಜಿಲ್ಲೆ ಗಳಿಂದ ೬೦ ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು. ಇದರಲ್ಲಿ ಜಿಲ್ಲೆಯ ಚೆಯ್ಯಂಡಾಣೆಯ ಕೋಕೇರಿ ಗ್ರಾಮದ ನಿವೃತ್ತÀ ದೈಹಿಕ ಶಿಕ್ಷಕ ಬಿದ್ದಂಡ ರಾಜ ಉತ್ತಪ್ಪ ಹಾಗೂ ಸಿಂತಿಯ ಉತ್ತಪ್ಪ ಪುತ್ರಿ ಬಿದ್ದಂಡ ಸುರಕ್ಷಿತ ಮಿಸ್ ಮೈಸೂರ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ.

ಮಿಸ್ ಮೈಸೂರ್ ಫ್ಯಾಶನ್ ಕಾರ್ಯಕ್ರಮದಲ್ಲಿ ೨೦ ಸ್ಪರ್ಧಿðಗಳಲ್ಲಿ ವಿನ್ನರ್ ಆಗಿ ಸುರಕ್ಷಿತ ಆಯ್ಕೆಯಾಗಿ ದ್ದಾರೆ. ಇದಲ್ಲದೆ ಎರಡೇ ರೌಂಡ್‌ನಲ್ಲಿ ಟ್ರೆಡಿಷನಲ್ ಮತ್ತು ವೆಸ್ಟರ್ನ್ನಲ್ಲಿ ಕೊಡವ ಸ್ಯಾರಿ ಉಟ್ಟು ಕೂರ್ಗ್ ಕೊಡವತಿ ಆಗಿ ಭಾಗವಹಿಸಿದ್ದರು.

ಇವರು ಮೈಸೂರು ಮಹಾರಾಜ ಕಾಲೇಜಿನಲ್ಲಿ ಅಂತಿಮ ವರ್ಷದ ಎಂಸಿಎ ವ್ಯಾಸಂಗ ಮಾಡುತ್ತಿದ್ದಾರೆ. ತೀರ್ಪುಗಾರರಾಗಿ ಸತ್ಯವತಿ ಬಸವರಾಜ್, ಭುವನ ಸುಂದರಿ ೨೦೨೨ ವಿನ್ನರ್ ಜ್ಯೋತಿ ಬಿಹಲ್, ಖ್ಯಾತ ಡಿಸೈನರ್ ವರ್ಷ, ಮಿಸಸ್ ಇಂಡಿಯಾ ವಿನ್ನರ್ ಸುಪ್ರಜಾ, ಪೂರ್ಣಿಮಾ, ಗಂಡಸಿ ಸದಾನಂದ ಸ್ವಾಮಿ ಸಂಪಾದಕರು ಹಾಗೂ ಚಲನ ಚಿತ್ರ ನಟರು, ನಿರ್ಮಾಪಕರು ಮತ್ತಿತರರು ಇದ್ದರು. ಕಾರ್ಯಕ್ರಮವನ್ನು ಶಿವಕುಮಾರ್ ಬಿ.ಕೆ., ಶೋಭಾ ಪಿ. ಎನ್, ಶಿಲ್ಪ ಗಣೇಶ್ ಸೇರಿ ಆಯೋಜಿಸಿದ್ದರು.