ಮಡಿಕೇರಿ, ಆ. ೨೮: ಮಡಿಕೇರಿ ರೋಟರಿ ವುಡ್ಸ್ ವತಿಯಿಂದ ನಗರದ ಆಂಜನೇಯ ದೇವಸ್ಥಾನದ ಸಮೀಪ ಓಂಕಾರ್ ಬಾಯ್ಸ್ ಆಟೋ ಚಾಲಕರ ಸಂಘದ ಸಹಯೋಗದಲ್ಲಿ ಸಂಭ್ರಮದ ಸ್ವಾತಂತ್ರö್ಯ ಉತ್ಸವವನ್ನು ಆಚರಿಸ ಲಾಯಿತು.
ಆರಂಭದಲ್ಲಿ ಧ್ವಜಾರೋಹಣ ಗೈದ ರೋಟರಿ ವುಡ್ಸ್ನ ಅಧ್ಯಕ್ಷ ಕೆ. ವಸಂತ್ ಕುಮಾರ್, ಪ್ರತಿಯೋರ್ವರೂ ಪ್ರೀತಿ, ಸಹಕಾರ, ಮಾನವೀಯತೆ ಯೊಂದಿಗೆ ದೇಶಭಕ್ತಿಯನ್ನು ಸಾರುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು. ಮಡಿಕೇರಿಯ ಹಿರಿಯ ಆಟೋ ಚಾಲಕರಾಗಿರುವ ಬಡೇಸಾಬ್ ಅವರನ್ನು ರೋಟರಿ ವುಡ್ಸ್ ವತಿಯಿಂದ ಸನ್ಮಾನಿಸ ಲಾಯಿತು.
ಸಮಾರಂಭದಲ್ಲಿ ರೋಟರಿ ವಲಯ ಸೇನಾನಿ ಸಂಪತ್ ಕುಮಾರ್, ರೋಟರಿ ಸದಸ್ಯರಾದ ರವಿ ಕುಮಾರ್, ಲೋಕೇಶ್, ರವೀಂದ್ರ, ಪ್ರವೀಣ್, ರಾಜೇಶ್ ಚೌದರಿ, ಧನಂಜಯ ಶಾಸ್ತಿç, ಲೀಲಾವತಿ, ಗೀತಾ ಸೂರ್ಯ, ಪ್ರಕೃತಿ ಸುರೇಶ್, ಕಶ್ಯಪ್, ಓಂಕಾರ್ ಬಾಯ್ಸ್ ಆಟೋ ಚಾಲಕರ ಸಂಘದ ಪ್ರಮುಖರಾದ ಹೇಮಂತ್, ಸುನಿಲ್, ಆದಿ, ಯತೀಶ್, ಉಮೇಶ್, ಲೋಕೇಶ್ ಮತ್ತು ಪದಾಧಿಕಾರಿಗಳು ಭಾಗವಹಿಸಿದ್ದರು.