ಸೋಮವಾರಪೇಟೆ, ಆ. ೨೮: ಜನವಸತಿ ಹಾಗೂ ಅರಣ್ಯದಂಚಿ ನಲ್ಲಿ ಮಾನವರ ಮೇಲೆ ಧಾಳಿ ನಡೆಸು ತ್ತಿರುವ ಪುಂಡಾನೆಗಳನ್ನು ಸ್ಥಳಾಂತರ ಮಾಡಲು ತ್ವರಿತ ಕ್ರಮಕೈಗೊಳ್ಳಬೇಕು. ಇಲಾಖೆಯ ಮೇಲಧಿಕಾರಿಗಳ ಆದೇಶಕ್ಕೆ ಕಾಯಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೋಸ ರಾಜು ಅವರು ಅರಣ್ಯ ಇಲಾಖಾ ಧಿಕಾರಿಗಳಿಗೆ ಸೂಚನೆ ನೀಡಿದರು.

ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭವೇ ಇಲಾಖೆಯ ಉನ್ನತಾ ಧಿಕಾರಿಗಳ ಉಪಸ್ಥಿತಿಯಲ್ಲಿ ಈ ಬಗ್ಗೆ ಸೂಚನೆ ನೀಡಿದ್ದಾರೆ. ಮಾನವರ ಮೇಲೆ ಧಾಳಿ ನಡೆಸಿ ಪ್ರಾಣ ಹಾನಿಗೆ ಕಾರಣವಾಗುತ್ತಿರುವ ಪುಂಡಾನೆ ಗಳನ್ನು ಪತ್ತೆ ಹಚ್ಚಿ, ತ್ವರಿತವಾಗಿ ಸ್ಥಳಾಂತರ ಮಾಡಬೇಕು. ಇದಕ್ಕಾಗಿ ಇಲಾಖೆಯ ಮೇಲಧಿಕಾರಿಗಳ ಆದೇಶಕ್ಕಾಗಿ ಕಾಯಬಾರದು. ಜನರ ಜೀವ ಮುಖ್ಯ ಎಂಬುದನ್ನು ಮನಗಾಣಬೇಕೆಂದು ಉಸ್ತವಾರಿ ಸಚಿವರು ತಿಳಿಸಿದರು.

ಕಳೆದ ತಾ. ೨೫ರಂದು ಕಾಡಾನೆ ಧಾಳಿಗೆ ಸಿಲುಕಿ ಮೃತಪಟ್ಟ ಆಡಿನಾ ಡೂರು ಗ್ರಾಮದ ಬಾಣಗೇರಿ ಈರಪ್ಪ ಅವರ ಮನೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಸರ್ಕಾರದಿಂದ ಬಿಡುಗಡೆಯಾದ ರೂ. ೧೫ ಲಕ್ಷ ಪರಿಹಾರದ ಚೆಕ್ ವಿತರಿಸಿದ ಸಚಿವರು, ನಂತರ ಅಧಿಕಾರಿಗಳಿಗೆ ಈ ನಿರ್ದೇಶನ ನೀಡಿದರು.

ಅರಣ್ಯದಿಂದ ಕಾಡಾನೆಗಳು ನಾಡಿಗೆ ಬಾರದಂತೆ ವೈಜ್ಞಾನಿಕ ಕ್ರಮಗಳನ್ನು ಕೈಗೊಳ್ಳಬೇಕು. ಸೋಲಾರ್ ಬೇಲಿ, ರೈಲ್ವೇ ಬ್ಯಾರಿ ಕೇಡ್, ಆನೆ ಕಂದಕ ನಿರ್ಮಾಣ ಕಾರ್ಯವನ್ನು ಆದ್ಯತೆಯ ಮೇಲೆ ಕೈಗೊಳ್ಳಬೇಕು. ಇಲಾಖೆಯಿಂದ ವಿಸ್ತೃತ ಯೋಜನಾ ವರದಿ ಸಲ್ಲಿಸಿದರೆ, ಸಂಬAಧಿಸಿದ ಸಚಿವ ರೊಂದಿಗೆ ಮಾತನಾಡಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಬೋಸರಾಜು ಅವರು ಭರವಸೆ ನೀಡಿದರು.

ಕಾಡಾನೆಗಳು ಮನುಷ್ಯರಿ ಗಿಂತಲೂ ಹೆಚ್ಚಿನ ಬುದ್ದಿ ಶಕ್ತಿ ಹೊಂದಿದೆ. ಸೋಲಾರ್ ಬೇಲಿ ಅಳವಡಿಸಿದರೆ ಒಣಗಿದ ಮರವನ್ನು ಹಾಕಿ ವಿದ್ಯುತ್ ಪ್ರವಹಿಸುವಿಕೆ ಕಡಿಮೆಯಾದಂತೆ ದಾಟಿ ಬರುತ್ತಿವೆ. ಕೆಲವೆಡೆ ಕಂದಕಗಳನ್ನೂ ದಾಟುತ್ತಿವೆ ಎಂದು ಡಿ.ಎಫ್.ಓ. ಎ.ಟಿ. ಪೂವಯ್ಯ ಸಚಿವರ ಗಮನ ಸೆಳೆದರು.

ಅರಣ್ಯ ಇಲಾಖೆಯಿಂದ ಕಾಡಾನೆಗಳಿಗೆ ಕಡಿವಾಣ ಹಾಕಲು ಎಲ್ಲಾ ರೀತಿಯ ಪ್ರಯತ್ನ ನಡೆಸ ಲಾಗುತ್ತಿದೆ. ಆರ್‌ಆರ್‌ಟಿ, ಅರಣ್ಯ ಇಲಾಖಾ ಸಿಬ್ಬಂದಿಗಳು ಕಾಡಾನೆಗಳ ಚಲನ ವಲನ ಗಮನಿಸುತ್ತಿದ್ದಾರೆ. ಆನೆಗಳು ಕಂಡುಬAದರೆ ಸ್ಥಳೀಯ ರಿಗೆ ಮಾಹಿತಿ ರವಾನಿಸಿ, ಎಚ್ಚರಿಕೆ ಯಿಂದಿರಲು ತಿಳಿಸಲಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಈ ಭಾಗ ದಲ್ಲಿ ಇದೇ ಮೊದಲ ಬಾರಿಗೆ ಕಾಡಾನೆ ಧಾಳಿ ಸಂಭವಿಸಿದೆ ಎಂದರು.

ಆನೆ-ಮಾನವ ಸಂಘರ್ಷಕ್ಕೆ ಇತಿಶ್ರೀ ಹಾಡಬೇಕಾದರೆ ಅರಣ್ಯ ಇಲಾಖೆ ಹೆಚ್ಚು ಕ್ರಿಯಾ ಶೀಲವಾಗಿರಬೇಕು. ಆನೆ ಹಾವಳಿ ತಡೆಗೆ ಯಾವೆಲ್ಲಾ ಪರಿಹಾರ ಕ್ರಮಗಳು ಆಗಬೇಕಿದೆಯೋ ಅವುಗಳ ಬಗ್ಗೆ ವರದಿ ನೀಡಿದರೆ ಸರ್ಕಾರದ ಮಟ್ಟದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

ಕೆಲವು ಕಡೆಗಳಲ್ಲಿ ಅವೈ ಜ್ಞಾನಿಕವಾಗಿ ಆನೆ ಕಂದಕ, ಸೋಲಾರ್ ಬೇಲಿ ನಿರ್ಮಿ ಸಿರುವುದರಿಂದ ಆನೆಗಳು ನಾಡಿಗೆ ಲಗ್ಗೆಯಿಡುತ್ತಿವೆ. ಕೃಷಿ ಫಸಲು ಸೇರಿದಂತೆ ಮನುಷ್ಯರ ಮೇಲೂ ಧಾಳಿ ನಡೆಸುತ್ತಿವೆ ಎಂದು ಸ್ಥಳದಲ್ಲಿದ್ದ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ಅವರು ಸಚಿವರ ಗಮನಕ್ಕೆ ತಂದರು.

ಅವೈಜ್ಞಾನಿಕ ಸೋಲಾರ್ ಬೇಲಿ, ಕಂದಕ ನಿರ್ಮಾಣವಾಗಿದ್ದರೆ ತಕ್ಷಣ ಸರಿಪಡಿಸಬೇಕೆಂದು ಸಂಬAಧಿಸಿದ ಅಧಿಕಾರಿಗಳಿಗೆ ಸಚಿವರು ನಿರ್ದೇಶನ ನೀಡಿದರು. ಈ ಸಂದರ್ಭ ಎಸಿಎಫ್ ಗೋಪಾಲ್, ವಲಯ ಅರಣ್ಯಾ ಧಿಕಾರಿ ಚೇತನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್, ಡಿವೈಎಸ್‌ಪಿ ಗಂಗಾಧರಪ್ಪ, ಪೊಲೀಸ್ ಇನ್ಸ್ಪೆಕ್ಟರ್ ರಾಮಚಂದ್ರ ನಾಯಕ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಸತೀಶ್, ಖಜಾಂಚಿ ಚೇತನ್, ಪ್ರಮುಖರಾದ ಎಸ್.ಎಂ. ಡಿಸಿಲ್ವಾ, ಬಿ.ಈ. ಜಯೇಂದ್ರ, ಕೆ.ಎ. ಯಾಕೂಬ್ ಸೇರಿದಂತೆ ಇತರರು ಉಪಸ್ಥಿತರಿದ್ದರು.