ಮಡಿಕೇರಿ, ಆ. ೨೮: ಕೇಂದ್ರ ಮೌಲ್ಯ ಮಾಪನ ಸಮಿತಿಯ ನಿರ್ದೇಶನದನ್ವಯ ವೀರಾಜಪೇಟೆ ಉಪ ನೋಂದಣಿ ಕಚೇರಿ ವ್ಯಾಪ್ತಿಗೆ ಒಳಪಡುವ ಗ್ರಾಮಗಳ ಮಾರುಕಟ್ಟೆ ಬೆಲೆಯನ್ನು ೨೦೨೩-೨೪ ನೇ ಸಾಲಿಗೆ ತಿದ್ದುಪಡಿ ಮಾಡಲು ತಾಲೂಕು ಉಪ ಸಮಿತಿಯ ಅಧ್ಯಕ್ಷರಾದ ತಹಶೀಲ್ದಾರ್ ಅವರ ಅಧ್ಯಕ್ಷತೆಯಲ್ಲಿ ಆಗಸ್ಟ್, ೧೧ ರಂದು ವೀರಾಜಪೇಟೆ ತಹಶೀಲ್ದಾರ್ ಅವರ ಕಾರ್ಯಾಲಯದಲ್ಲಿ ಉಪ ಸಮಿತಿಯ ಸದಸ್ಯರು, ಕಾರ್ಯದರ್ಶಿಗಳು ಒಳಗೊಂಡAತೆ ಎಲ್ಲಾ ಸದಸ್ಯರು ಹಾಜರಾಗಿ ಚರ್ಚಿಸಿದ್ದು, ಮಾರುಕಟ್ಟೆ ಬೆಲೆಯಲ್ಲಿ ಕೆಲವೊಂದು ನ್ಯೂನತೆಗಳು ಕಂಡುಬAದಿದ್ದು ಮಾರಾಟ ಅಂಕಿ-ಅAಶಗಳ ಆಧಾರದ ಮೇಲೆ ಗ್ರಾಮವಾರು ಮಾರುಕಟ್ಟೆ ಬೆಲೆಯನ್ನು ತಿದ್ದುಪಡಿ ಮಾಡಲು ತೀರ್ಮಾನಿಸಿದ್ದು, ಈ ವಿಷಯದ ಕುರಿತು ಸಾರ್ವಜನಿಕರಿಂದ ಏನಾದರೂ ಆಕ್ಷೇಪಣೆ ಇದ್ದಲ್ಲಿ ೧೫ ದಿವಸದೊಳಗೆ ಉಪ ನೋಂದಣಿ ಕಚೇರಿಗೆ ಲಿಖಿತ ಆಕ್ಷೇಪಣೆಯನ್ನು ಸಲ್ಲಿಸಬಹುದು ಎಂದು ವೀರಾಜಪೇಟೆ ಉಪ ನೋಂದಣಾಧಿಕಾರಿ ಅವರು ತಿಳಿಸಿದ್ದಾರೆ.