ವರದಿ - ಚಂದ್ರಮೋಹನ್
ಕುಶಾಲನಗರ, ಆ. ೨೭ : ಕಳೆದ ಐದು ವರ್ಷಗಳಿಂದ ನಿರಂತರ ಪ್ರವಾಹಕ್ಕೆ ತುತ್ತಾಗಿದ್ದ ಕುಶಾಲನಗರ ತಗ್ಗು ಪ್ರದೇಶದ ಬಡಾವಣೆಗಳ ನಾಗರಿಕರು ಈ ಬಾರಿ ಮಳೆಯ ಕೊರತೆಯೊಂದಿಗೆ ಪ್ರವಾಹದ ಆತಂಕದಿAದ ಹೊರ ಬಂದಿದ್ದು ವರುಣನ ಅವಕೃಪೆಗೆ ಒಳಗಾಗದೆ ನಿಟ್ಟುಸಿರು ಬಿಡುವಂತಾಗಿದೆ.
ಕಳೆದ ೨೦೧೮ ರಿಂದ ಸತತ ೫ ವರ್ಷಗಳ ಕಾಲ ಆಗಸ್ಟ್ ತಿಂಗಳು ಬಂತೆAದರೆ ಸಾಕು. ಕುಶಾಲನಗರ ಮತ್ತು ಸುತ್ತಮುತ್ತಲ ವ್ಯಾಪ್ತಿಯ ಕಾವೇರಿ ನದಿ ತಟದ ನಾಗರಿಕರು ತಮ್ಮ ಮನೆಗಳಿಗೆ ನೀರು ನುಗ್ಗುವ ಭಯದಿಂದ ದಿನ ಕಳೆಯುವಂತಾಗಿತ್ತು. ಮಳೆಗಾಲಕ್ಕೆ ಮುನ್ನವೇ ಮನೆ ತೆರವು ಮಾಡುವ ಬಗ್ಗೆ ಸ್ಥಳೀಯ ಆಡಳಿತದಿಂದ ನೋಟೀಸ್ ಜಾರಿ ಗೊಳಿಸುವುದು ಒಂದೆಡೆಯಾದರೆ, ಇತ್ತ ಕಾವೇರಿ ಮತ್ತು ಹಾರಂಗಿ ನದಿಗಳ ನೀರಿನ ಪ್ರವಾಹಕ್ಕೆ ತುತ್ತಾಗಿ ಕಷ್ಟ ನಷ್ಟಕ್ಕೆ ಒಳಗಾಗುವುದರೊಂದಿಗೆ ವರ್ಷದ ಜುಲೈ ಆಗಸ್ಟ್ ತಿಂಗಳನ್ನು ಕಳೆಯುವ ದಿನಗಳು ಅದಾಗಿದ್ದವು. ೩ಏಳನೇ ಪುಟಕ್ಕೆ
(ಮೊದಲ ಪುಟದಿಂದ) ಮನೆಯೊಳಗೆ ನೀರು ನುಗ್ಗಿ ವಸ್ತುಗಳೆಲ್ಲ ನೀರು ಪಾಲಾಗಿ ಮತ್ತೆ ಸರಿಪಡಿಸುವ ಕಾಯಕ ಈ ಭಾಗದ ಜನರದ್ದಾಗಿತ್ತು.
ಇದೀಗ ಈ ಬಾರಿಯ ಜುಲೈ ತಿಂಗಳಲ್ಲಿ ಸತತ ಒಂದು ವಾರಗಳ ಕಾಲ ಮಳೆ ಬಂದ ಹಿನ್ನೆಲೆಯಲ್ಲಿ ಈ ಭಾಗದ ಬಡಾವಣೆಗಳ ಜನರು ಆತಂಕಕ್ಕೆ ಒಳಗಾದರೂ ಹಾರಂಗಿ ಜಲಾಶಯದಿಂದ ಅಧಿಕಾರಿಗಳು ಸಮರ್ಪಕವಾಗಿ ನೀರು ಬಿಡುಗಡೆಗೊಳಿಸಿದ ಕಾರಣ ಯಾವುದೇ ರೀತಿಯ ಪ್ರವಾಹ ಸ್ಥಿತಿ ಎದುರಾಗಲಿಲ್ಲ.
ವರ್ಷಂಪ್ರತಿಯAತೆ ಆಗಸ್ಟ್ ಮೊದಲ ವಾರದಲ್ಲಿ ಎದುರಾಗಲಿರುವ ಸಂಭಾವ್ಯ ಪ್ರವಾಹದ ಬಗ್ಗೆ ಚಿಂತೆಯಲ್ಲಿ ಇದ್ದ ನಿವಾಸಿಗಳು ಇದೀಗ ಆಶ್ಲೇಷ ಮಳೆಯಿಂದ ಪಾರಾದ ಸಂತಸದಲ್ಲಿ ಇರುವುದು ಕಂಡು ಬಂದಿದೆ. ಬಿಸಿಲಿನ ವಾತಾವರಣ ಗೋಚರಿಸಿದೆ.
ಕಳೆದ ಎರಡು ವರ್ಷಗಳ ಅವಧಿಯಲ್ಲಿ ಕುಶಾಲನಗರ ಭಾಗದಲ್ಲಿ ನದಿ ನಿರ್ವಹಣೆ ಮತ್ತು ಹೂಳೆತ್ತಿದ ಕಾರಣ ಕಾವೇರಿ ಪ್ರವಾಹವನ್ನು ತಪ್ಪಿಸುವಲ್ಲಿ ಅಂದಿನ ಶಾಸಕರಾಗಿದ್ದ ಎಂ.ಪಿ. ಅಪ್ಪಚ್ಚು ರಂಜನ್ ಹಾಗೂ ಅಣೆಕಟ್ಟು ಅಧಿಕಾರಿಗಳು ಯಶಸ್ವಿಯಾಗಿದ್ದರು.
ಹಾರಂಗಿ ಅಣೆಕಟ್ಟೆಯಿಂದ ಹಂತ ಹಂತವಾಗಿ ನದಿಗೆ ನೀರು ಬಿಟ್ಟಿರುವ ಕಾರಣ ಈ ಸಾಲಿನ ಜುಲೈ ತಿಂಗಳಲ್ಲಿ ಉಂಟಾಗಲಿದ್ದ ಸಂಭಾವ್ಯ ಪ್ರವಾಹವನ್ನು ತಪ್ಪಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಹಾರಂಗಿ ಅಣೆಕಟ್ಟು ವಿಭಾಗದ ಕಾರ್ಯಪಾಲಕ ಅಭಿಯಂತರ ಬಿ.ಜೆ. ಪುಟ್ಟಸ್ವಾಮಿ ಶಕ್ತಿಯೊಂದಿಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಕ್ಷೇತ್ರ ಶಾಸಕ ಡಾ. ಮಂಥರ್ ಗೌಡ ಅವರ ಸಲಹೆ, ಸೂಚನೆಯಂತೆ ಕಾವೇರಿ ನದಿ ಪ್ರವಾಹ ಸಂದರ್ಭ ಹಾರಂಗಿ ಜಲಾಶಯದಿಂದ ನೀರಿನ ಮಟ್ಟ ಕಾಯ್ದುಕೊಂಡು ಕುಶಾಲನಗರ ವ್ಯಾಪ್ತಿಯ ತಗ್ಗು ಪ್ರದೇಶದ ಬಡಾವಣೆಗಳಿಗೆ ನೀರು ನುಗ್ಗದಂತೆ ನದಿಗೆ ಹರಿಸಲಾಯಿತು ಎಂದು ಅವರು ಹೇಳಿದ್ದಾರೆ.