ಮಡಿಕೇರಿ, ಆ. ೨೮ : ಸಾಂಸಾ ರಿಕ ಭಿನ್ನಭಿಪ್ರಾಯಗಳು, ಯುವ ಜನತೆಯಲ್ಲಿ ನಡೆಯುವ ಸಂದಿಗ್ಧ ಪರಿಸ್ಥಿತಿಗಳು ಸೇರಿದಂತೆ ಸರ್ವ ಸಮಸ್ಯೆಗಳನ್ನು ಅಧ್ಯಾತ್ಮದ ಜಾಗೃತಿ ಮತ್ತು ಯೋಗದಿಂದ ಮಾತ್ರ ಉಪ ಶಮನ ಮಾಡಲು ಸಾಧ್ಯ ಎಂದು ಸರ್ವಕ್ಷೇಮ ಆಸ್ಪತ್ರೆ ಮತ್ತು ಸಂಶೋ ಧನಾ ಮತ್ತು ಪ್ರಕೃತಿ ಚಿಕಿತ್ಸೆ ಆಯು ರ್ವೇದ ಆಸ್ಪತ್ರೆಯ ಮುಖ್ಯಸ್ಥ ಡಾ. ವಿವೇಕ ಉಡುಪ ಹೇಳಿದರು.
ಡಿವೈನ್ ಪಾರ್ಕ್ ಟ್ರಸ್ಟ್ನ ಅಂಗ ಸಂಸ್ಥೆಯಾದ ವಿವೇಕ ಜಾಗೃತ ಬಳ ಗದ ವತಿಯಿಂದ ಮೂರ್ನಾಡುವಿನ ಗೌಡ ಸಮಾಜದಲ್ಲಿ ನಡೆದ ೧೯ನೇ ಯೋಗ ಪರ್ಯಟನ ಕಾರ್ಯಕ್ರಮ ವನ್ನು ಉದ್ಘಾಟಿಸಿ ಅವರು, ಮಾತನಾಡಿದರು.
ಹೃದಯ ವೈಶಾಲ್ಯತೆ ನಿಜವಾದ ಆರೋಗ್ಯದ ಗುಟ್ಟಾಗಿದೆ. ಅಧ್ಯಾತ್ಮಿಕ ತಳಹದಿಯ ಮೇಲೆ ಜೀವನ ನಡೆಯ ಬೇಕಿದೆ. ಪ್ರಸ್ತುತ ದಿನಗಳಲ್ಲಿ ವಿದೇಶಿ ಸಂಸ್ಕೃತಿ ನಮ್ಮನ್ನು ಆವರಿಸಿ ಕೊಂಡಿದ್ದು, ಯುವ ಸಮೂಹ ವಿದೇಶಿ ಸಂಸ್ಕೃತಿಯತ್ತ ವಾಲುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ ಡಾ.ವಿವೇಕ ಉಡುಪ, ಯುವ ಸಮೂಹ ಹೆಚ್ಚಿನ ಸಮಯ ಮೊಬೈಲ್ನಲ್ಲಿ ಕಳೆಯುತ್ತಿದ್ದಾರೆ. ಸೆಲ್ಫಿ ಹುಚ್ಚಿಗೆ ಅನೇಕರು ಜೀವ ಕಳೆದು ಕೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಸಂಚಾಲಕ ಡಿ.ಎಸ್.ಯಶವಂತ್ ಪ್ರಾಸ್ತಾವಿಕವಾಗಿ ಮಾತನಾಡಿ, ವ್ಯಕ್ತಿತ್ವ ನಿರ್ಮಾಣ ಹಾಗೂ ಲೋಕೋದ್ಧಾರದ ಪವಿತ್ರ ಗುರಿಯನ್ನು ಡಿವೈನ್ ಪಾರ್ಕ್ ಹೊಂದಿದೆ. ಜಗತ್ತಿಗೆ ಸಾಮರಸ್ಯ ಜೀವನದ ಮಹತ್ವ, ಶಾಂತಿ, ಆತ್ಮಶಕ್ತಿ, ಜಾಗೃತಿಯನ್ನು ನೀಡುವ ಸೇವಾ ಯೋಜನೆಯೇ ಯೋಗ ಪರ್ಯಟನ ಎಂದರು.
ಕಾರ್ಯಕ್ರಮದಲ್ಲಿ ಮೂರ್ನಾಡು ವಿವೇಕ ಜಾಗೃತ ಬಳಗದ ಅಧ್ಯಕ್ಷರಾದ ದಿವ್ಯ ತೇಜಕುಮಾರ್, ಮಡಿಕೇರಿ ಅಧ್ಯಕ್ಷೆ ಟಿ.ಎಂ.ಪದ್ಮವೇಣಿ, ಕುಶಾಲನಗರ ಅಧ್ಯಕ್ಷ ಜಿ.ಎಸ್.ಹೆಗಡೆ, ಹಿರಿಯರಾದ ಮುತ್ತಣ್ಣ ಮೂರ್ನಾಡು ಸೇರಿದಂತೆ ವಿವೇಕ ಜಾಗೃತ ಬಳಗದ ಅಧಿಕಾರಿಗಳು, ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಹಾಜ ರಿದ್ದರು. ಸಭಾ ಕಾರ್ಯ ಕ್ರಮಕ್ಕೂ ಮುನ್ನ ಸರ್ವಕ್ಷೇಮ ಆಸ್ಪತ್ರೆ ಮತ್ತು ಸಂಶೋಧನಾ ಮತ್ತು ಪ್ರಕೃತಿ ಚಿಕಿತ್ಸೆ ಆಯುರ್ವೇದ ಆಸ್ಪತ್ರೆಯ ಮುಖ್ಯಸ್ಥ ಡಾ.ವಿವೇಕ ಉಡುಪ ಅವರನ್ನು ಕಳಸ ಹಾಗೂ ವಾಲಗದೊಂದಿಗೆ ಬರ ಮಾಡಿಕೊಳ್ಳಲಾಯಿತು.