ಕೂಡಿಗೆ, ಆ. ೨೭: ಇಲ್ಲಿಗೆ ಸಮೀಪದ ತೊರೆನೂರು ಗ್ರಾಮ ಪಂಚಾಯಿತಿಯ ಮಾಸಿಕ ಸಭೆ ಅಧ್ಯಕ್ಷೆ ಶೋಭಾ ಪ್ರಕಾಶ್ ಅವರ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ಹಾಜರಿದ್ದ ಎಲ್ಲಾ ಸದಸ್ಯರು ಈ ಸಾಲಿನಲ್ಲಿ ಮುಂಗಾರು ಮಳೆಯು ತೀರಾ ಕಡಿಮೆ ಆಗಿರುವ ಹಿನ್ನೆಲೆಯಲ್ಲಿ ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಚಿಕ್ಕಅಳುವಾರ ಬೈರಪ್ಪನಗುಡಿ ವ್ಯಾಪ್ತಿಯ ರೈತರಿಗೆ ಅನುಕೂಲವಾಗುವಂತೆ ಮತ್ತು ಕೆರೆ ಕಟ್ಟೆಗಳಿಗೆ ನೀರು ಹರಿಸುವ ಯೋಜನೆ ಇರುವ ಹಾರಂಗಿ ಎಡದಂಡೆ ನಾಲೆಯಲ್ಲಿ ಅಳವಡಿಸಿರುವ ಏತ ನೀರಾವರಿ ಯೋಜನೆಗೆ ಸಂಬAಧಿಸಿದ ಕಾಲುವೆಗಳ ದುರಸ್ತಿ ಮತ್ತು ಕಾಲುವೆಯಲ್ಲಿರುವ ಹೂಳನ್ನು ತಗೆಯುವಂತೆ ಸಂಬAಧಿಸಿದ ನೀರಾವರಿ ಇಲಾಖೆಗೆ ಪ್ರಮುಖವಾಗಿ ಪತ್ರ ವ್ಯವಹಾರವನ್ನು ಕೈಗೊಳ್ಳುವಂತೆ ತೀರ್ಮಾನವನ್ನು ಕೈಗೊಂಡರು.
ಗ್ರಾಮದ ಅಭಿವೃದ್ಧಿಗೆ ಪೂರಕವಾದ ವಿವಿಧ ಕ್ರಿಯಾ ಯೋಜನೆ ಮೂಲಕ ಕಾಮಗಾರಿಗಳನ್ನು ತೆಗೆದುಕೊಳ್ಳುವ ಬಗ್ಗೆ ಸಭೆಯಲ್ಲಿ ಹಾಜರಿದ್ದ ಸದಸ್ಯರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಅಧ್ಯಕ್ಷತೆ ವಹಿಸಿದ್ದ ಶೋಭಾ ಪ್ರಕಾಶ್ ಮಾತನಾಡಿ, ಸದಸ್ಯರ ಸಲಹೆಯಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಉಪ ಗ್ರಾಮಗಳ ಅಭಿವೃದ್ಧಿಗೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕ್ರಿಯಾ ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಈ ಸಂದರ್ಭ ಅಭಿವೃದ್ಧಿ ಅಧಿಕಾರಿ ವೀಣಾ ಸರಕಾರದ ಯೋಜನೆಗಳ ಬಗ್ಗೆ ಮತ್ತು ರಾಷ್ಟಿçÃಯ ಉದ್ಯೋಗ ಖಾತರಿ ಯೋಜನೆಯ ಬಗ್ಗೆ ಸಮರ್ಪಕವಾದ ಮಾಹಿತಿಯನ್ನು ಸಭೆಗೆ ತಿಳಿದರು. ಈ ಸಂದರ್ಭ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ರೂಪ ಮಹೇಶ್, ಸದಸ್ಯರಾದ ಬೇಬಿಯಣ್ಣ, ಶಿವಕುಮಾರ್, ದೇವರಾಜ್, ಯಶೋದಮ್ಮ ಲಿಂಗರಾಜಮ್ಮ ಹಾಜರಿದ್ದರು.