ಕ್ರೀಡೆಯು ಮನುಷ್ಯನ ಜೀವನದ ಅವಿಭಾಜ್ಯ ಅಂಗವಾಗಿದೆ. ಪ್ರತಿಯೊಬ್ಬರೂ ಯಾವುದಾದರೊಂದು ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿ ಕೊಂಡರೆ ಉತ್ತಮ ಆರೋಗ್ಯವನ್ನು ಹೊಂದಬಹುದು. ಆಟವಾಡುವುದರಿಂದ ನಮ್ಮ ದೈಹಿಕ ಆರೋಗ್ಯ ಮಾತ್ರವಲ್ಲದೇ, ಮಾನಸಿಕ ಆರೋಗ್ಯ ಕಾಪಾಡುವಲ್ಲಿಯೂ ಸಹಕಾರಿಯಾಗಿದೆ.
ಒಂದು ಮಗು ಶಾಲೆಯ ಮೆಟ್ಟಿಲೇರಿದ ಮೊದಲ ದಿನದಿಂದಲೇ ತನ್ನ ಪಾಠವನ್ನು ಆಟದೊಂದಿಗೆ ಆರಂಭಿಸುತ್ತದೆ. ಮಗು ಮನೆಯಿಂದ ಶಾಲಾ ವಾತಾವರಣಕ್ಕೆ ಹೊಂದಿಕೊಳ್ಳಲು ಈ ಆಟವೇ ಸಹಕಾರಿಯಾಗಿರುತ್ತದೆ. ಮಕ್ಕಳನ್ನು ಆಕರ್ಷಿಸಲು ವಿಧ ವಿಧವಾದ ಆಕರ್ಷಕ ಬಣ್ಣದ ಆಟಿಕೆಗಳನ್ನು ಶಾಲೆಯಲ್ಲಿ ಇಟ್ಟಿರುತ್ತಾರೆ. ಶಾಲೆಯ ಹೊರಗೆ ಜಾರುಬಂಡಿ, ಜೋಕಾಲಿ, ತಿರುಗು ಬಂಡಿ ಮಕ್ಕಳನ್ನು ಸೆಳೆಯುತ್ತಿದ್ದರೆ ಶಾಲೆಯ ಒಳಗೆ ಬಿಲ್ಡಿಂಗ್ ಬ್ಲಾಕ್ಸ್, ಜೆಂಗಾ, ಪಝಲ್ ಮಕ್ಕಳನ್ನು ಆಕರ್ಷಿಸುತ್ತದೆ. ಮಕ್ಕಳು ಆಟವಾಡುತ್ತಾ ಖುಷಿಯಿಂದಲೇ ಪಾಠವನ್ನು ಕಲಿಯಲು ಆರಂಭಿಸುತ್ತಾರೆ.
ಹೀಗೆ ಮಕ್ಕಳು ಬೆಳೆಯುತ್ತಿದ್ದಂತೆ ಅವರ ಆಟ-ಪಾಠದಲ್ಲೂ ಬದಲಾವಣೆಯಾಗುತ್ತದೆ. ಶಾಲೆಯ ಹೊರಾಂಗಣ ಕ್ರೀಡೆಯಾಗಿ ಫುಟ್‌ಬಾಲ್, ಬಾಸ್ಕೆಟ್‌ಬಾಲ್, ಹ್ಯಾಂಡ್‌ಬಾಲ್, ವಾಲಿಬಾಲ್, ಹಾಕಿ, ಕಬಡ್ಡಿ, ಖೋಖೋ, ಬ್ಯಾಡ್ಮಿಂಟನ್, ಕ್ರಿಕೆಟ್, ಮುಂತಾದವು ಹಾಗೂ ಒಳಾಂಗಣ ಕ್ರೀಡೆಗಳಾದ ಕೇರಮ್, ಚೆಸ್, ಟೇಬಲ್ ಟೆನ್ನಿಸ್, ಮುಂತಾದವು ಮಕ್ಕಳ ಬೆಳವಣಿಗೆಯಲ್ಲಿ ಜೊತೆಗೂಡುತ್ತದೆ.
ಪ್ರತಿದಿನ ನಿಯಮಿತ ಸಮಯದಲ್ಲಿ ಯಾರು ಕ್ರೀಡಾ ಚಟುವಟಿಕೆಯಲ್ಲಿ ನಿರತರಾಗಿರುತ್ತಾರೋ ಅಂತಹವರು ಉತ್ತಮ ಆರೋಗ್ಯ ಹೊಂದಿರುತ್ತಾರೆ.
ಧ್ಯಾನ್‌ಚಂದ್ ಕುಟುಂಬದ ೧೩ ಪದಕಗಳು
ಆಗಸ್ಟ್ ೨೯ ಧ್ಯಾನ್‌ಚಂದ್ ಅವರ ಹುಟ್ಟು ಹಬ್ಬ. ಸಿಪಾಯಿಯಾಗಿ ಸೈನ್ಯಕ್ಕೆ ಸೇರಿ, ಮೇಜರ್ ಆಗಿ ಬಡ್ತಿ ಹೊಂದಿದ ಏಕೈಕ ಹಾಕಿ ಆಟಗಾರ. ಆಗಸ್ಟ್ ೨೯ ಅವರ ಜನ್ಮದಿನವನ್ನು ರಾಷ್ಟಿçÃಯ ಕ್ರೀಡಾದಿನವನ್ನಾಗಿ ಆಚರಿಸಲಾಗುತ್ತದೆ. ಅಂದಿನ ಕ್ರೀಡಾ ಸಚಿವೆ ಸಾಧ್ವಿ ಉಮಾ ಭಾರತಿ ಹಾಗೂ ಪದ್ಮಶ್ರೀ ಎಂ.ಪಿ. ಗಣೇಶ್ ಅವರು ಇದಕ್ಕೆ ಪೂರಕ ಕೊಟ್ಟು ಅವರ ಜನ್ಮದಿನವನ್ನು ರಾಷ್ಟಿçÃಯ ಕ್ರೀಡಾ ದಿನವನ್ನಾಗಿ ಆಚರಿಸಬೇಕೆಂದು ನಿರ್ಧರಿಸಿದರು. ಹಿಟ್ಲರ್ ಹಾಗೂ ಕ್ರಿಕೆಟ್‌ನ ಮಾಂತ್ರಿಕ ಡಾನ್ ಬ್ರಾಡ್ಮನ್ ಅವರ ಕೈಯಲ್ಲಿ ಸಹಭಾಷ್ ಎನಿಸಿಕೊಂಡ ಏಕೈಕ ಆಟಗಾರ ಧ್ಯಾನ್‌ಚಂದ್.
ಭಾರತದ ಅತಿ ಉನ್ನತ ನಾಗರಿಕ ಪ್ರಶಸ್ತಿ ಪದ್ಮಭೂಷಣ ಪಡೆದಂತಹ ಮೇಲುಗೈ ಆಟಗಾರ. ೧೩ ಮೆಡಲನ್ನು ಒಂದೇ ಪರಿವಾರದಲ್ಲಿ ಸೇರಿಸಿದ ದಾಖಲೆ ಎಂದು ಕೂಡ ಇದನ್ನು ಬಿಂಬಿಸಲಾಗುತ್ತದೆ. ಧ್ಯಾನ್‌ಚಂದ್ ಅವರ ಒಲಂಪಿಕ್‌ನ ಮೂರು ಚಿನ್ನದ ಪದಕಗಳು, ಅವರ ತಮ್ಮ ಕ್ಯಾಪ್ಟನ್ ರೂಪ್‌ಸಿಂಗ್ ಅವರ ಎರಡು ಒಲಂಪಿಕ್ ಚಿನ್ನದ ಪದಕಗಳು, ಅವರ ಮಗ ಅಶೋಕ್ ಕುಮಾರ್ ಅವರು ಒಲಂಪಿಕ್‌ನಲ್ಲಿ ಒಂದು ಕಂಚಿನ ಪದಕ ಹಾಗೂ ವರ್ಲ್ಡ್ಕಪ್‌ನಲ್ಲಿ ಒಂದು ಚಿನ್ನ, ಒಂದು ಬೆಳ್ಳಿ , ಒಂದು ಕಂಚಿನ ಪದಕ ಹಾಗೂ ಏಷಿಯನ್ ಗೇಮ್ಸ್ನಲ್ಲಿ ಮೂರು ಬೆಳ್ಳಿಯ ಪದಕಗಳನ್ನು ಗೆದ್ದಿದ್ದಾರೆ. ಅವರ ಮೊಮ್ಮಗಳಾದ ನೇಹಾ ಸಿಂಗ್ ಅವರು ಒಂದು ಬೆಳ್ಳಿಯ ಪದಕವನ್ನು ಗೆದ್ದಿದ್ದಾರೆ. ಈ ೧೩ ಪದಕಗಳು ಒಂದೇ ಪರಿವಾರಕ್ಕೆ ಸೇರಿದ್ದು ಎಂಬುದು ಹೆಮ್ಮೆಯ ವಿಷಯ ಹಾಗೂ ದಾಖಲೆಯು ಹೌದು. ಧ್ಯಾನ್‌ಚಂದ್ ಅವರು ಹಾಕಿ ಮಾಂತ್ರಿಕ ಎಂದೇ ಪ್ರಸಿದ್ಧರಾಗಿದ್ದರು. ಇವರು ತಮ್ಮ ೨೨ ವರ್ಷದ ಆಟದ ಅವಧಿಯಲ್ಲಿ ೪೦೦ ಕ್ಕಿಂತ ಹೆಚ್ಚಿನ ಗೋಲ್‌ಗಳನ್ನು ಬಾರಿಸಿ ಭಾರತಕ್ಕೆ ೧೯೨೮, ೧೯೩೨ ಹಾಗೂ ೧೯೩೬ರಲ್ಲಿ ಒಲಂಪಿಕ್ಸ್ನಲ್ಲಿ ಚಿನ್ನದ ಪದಕದ ಗೆಲುವಿಗೆ ಕಾರಣೀಕರ್ತರಾದರು. ನೆದರ್ಲ್ಯಾಂಡ್‌ನಲ್ಲಿ ಅಧಿಕಾರಿಗಳು ಇವರ ಹಾಕಿ ಸ್ಟಿಕ್ ಒಳಗೆ ಅಯಸ್ಕಾಂತವಿದೆಯೇ ಎಂದು ಪರೀಕ್ಷಿಸಲು ಹಾಕಿ ಸ್ಟಿಕ್ಕನ್ನೇ ಮುರಿದಿದ್ದರು.
ದೆಹಲಿಯಲ್ಲಿದ್ದ ರಾಷ್ಟಿçÃಯ ಕ್ರೀಡಾಂಗಣಕ್ಕೆ ಧ್ಯಾನ್‌ಚಂದ್ ರಾಷ್ಟಿçÃಯ ಕ್ರೀಡಾಂಗಣ ಎಂದು ೨೦೦೨ರಲ್ಲಿ ಮರುನಾಮಕರಣ ಮಾಡಲಾಯಿತು. ಆಗಸ್ಟ್ ೨೯ ಅವರ ಹುಟ್ಟು ಹಬ್ಬದ ದಿನ. ಕ್ರೀಡಾ ಮಾಂತ್ರಿಕ ಧ್ಯಾನ್‌ಚಂದ್ ಅವರನ್ನು ನೆನೆಸಿಕೊಳ್ಳುತ್ತಾ, ಅವರ ಕುಟುಂಬಕ್ಕೆ ಒಳ್ಳೆಯದಾಗಲಿ ಎಂದು ಆಶಿಸೋಣ. -ಚೆಪ್ಪುಡೀರ ಕಾರ್ಯಪ್ಪ, ನೊಕ್ಯ
ಆದರೆ ಇಂದಿನ ಆಧುನಿಕ ಯುಗದಲ್ಲಿ ಮೊಬೈಲ್ ಬಳಕೆಯಿಂದಾಗಿ ಮಕ್ಕಳು ಕ್ರೀಡೆಯಿಂದ ವಂಚಿತರಾಗುವ ಪರಿಸ್ಥಿತಿ ಎದುರಾಗಿದೆ. ತಮ್ಮ ಹೆಚ್ಚಿನ ಸಮಯವನ್ನು ಟಿ.ವಿ. ನೋಡುತ್ತಾ, ಮೊಬೈಲ್‌ನಲ್ಲಿ ಗೇಮ್ಸ್ ಆಡುವುದರಲ್ಲಿ ಕಳೆಯುತ್ತಾರೆ. ಪರಿಣಾಮ ಚಿಕ್ಕ ವಯಸ್ಸಿನಲ್ಲಿಯೇ ಸ್ಥೂಲಕಾಯ, ಹೃದಯಕ್ಕೆ ಸಂಬAಧಿಸಿದ ಕಾಯಿಲೆಗಳು ಸಕ್ಕರೆ ಕಾಯಿಲೆ ಮಾತ್ರ ವಲ್ಲದೇ ಕ್ಯಾನ್ಸರ್ ನಂತಹ ಭಯಂಕರ ರೋಗಕ್ಕೆ ತುತ್ತಾಗುತ್ತಿದ್ದಾರೆ.
ಕ್ರೀಡೆ ಕೇವಲ ದೈಹಿಕ ವ್ಯಾಯಾಮವಲ್ಲ, ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಕ್ರೀಡೆಯು ಪರೀಕ್ಷೆಯ ಒತ್ತಡವನ್ನು ಕಡಿಮೆ ಮಾಡಲು ಕೂಡ ಅನುವಾಗುತ್ತದೆ. ಆಟವು ಮನಸ್ಸಿಗೆ ಆಹ್ಲಾದವನ್ನು ಉಂಟು ಮಾಡುತ್ತದೆ. ಆಟವನ್ನು ಆಡುವುದರಿಂದ ಪರಸ್ಪರ ಸ್ನೇಹ, ಹೊಂದಾಣಿಕೆ ಹಾಗೂ ಸಹಾಯ ಮಾಡುವ ಗುಣ ಬೆಳೆಯುತ್ತದೆ. ಆಟದಲ್ಲಿ ಸೋತಾಗ ಧೈರ್ಯಗೆಡದೇ ಮತ್ತೆ ಮತ್ತೆ ಪ್ರಯತ್ನಿಸಿ ಗೆಲ್ಲುವ ಮನೋಭಾವ ಬೆಳೆಯುತ್ತದೆ.
ಕ್ರೀಡೆಗಳು ಉತ್ತಮ ದೈಹಿಕ ಚಟುವಟಿಕೆಯಾಗಿದ್ದು ಅದು ಒತ್ತಡ ಮತ್ತು ಚಿಂತೆಗಳಿAದ ಮುಕ್ತಿ ನೀಡುತ್ತದೆ. ಯಾರ ದೇಹವು ಆರೋಗ್ಯಕರ ವಾಗಿರುತ್ತದೆಯೋ ಅವರ ಮನಸ್ಸು ಕೂಡ ಆರೋಗ್ಯಕರವಾಗಿರುತ್ತದೆ. ಇಂದಿನ ದಿನಗಳಲ್ಲಿ ಕ್ರೀಡಾಕ್ಷೇತ್ರವು ಬಹಳ ವಿಶಾಲವಾಗಿ ಹಾಗೂ ವೇಗವಾಗಿ ವಿಸ್ತರಿಸುತ್ತಿದೆ. ಅದಕ್ಕೆ ಸರ್ಕಾರದಿಂದ ಸೂಕ್ತ ಪ್ರೋತ್ಸಾಹ ಹಾಗೂ ಮನ್ನಣೆ ದೊರಕುತ್ತಿದೆ. ಪ್ರತಿಯೊಬ್ಬರೂ ಕ್ರೀಡಾ ಮೌಲ್ಯವನ್ನು ಅರಿತು ಕ್ರೀಡಾಭಿಮಾನ ಹೆಚ್ಚಿಸಿಕೊಂಡು ಸ್ವಸ್ಥ ಸಮಾಜದ ನಿರ್ಮಾಣ ಹಾಗೂ ಏಳಿಗೆಗೆ ಕಾರಣರಾಗೋಣ.
-ರಕ್ಷಾ ಆರ್ ನಾಯ್ಕ, ವೀರಾಜಪೇಟೆ
ಮೊ. ೯೪೮೦೪೬೩೬೨೩