ಮಡಿಕೇರಿ, ಆ. ೨೭: ನಗರದ ಸ್ವಸ್ತಿಕ್ ಯುವ ವೇದಿಕೆ ಬನ್ನಿಮಂಟಪ ಗಣೇಶೋತ್ಸವ ಸಮಿತಿಯ ೨೨ನೇ ವರ್ಷದ ಆಚರಣಾ ಸಮಿತಿಯ ಅಧ್ಯಕ್ಷರಾಗಿ ಪುನೀತ್ ಭೀಮಯ್ಯ, ಪ್ರಧಾನ ಕಾರ್ಯದರ್ಶಿಯಾಗಿ ಗಣೇಶ್ ಆಯ್ಕೆಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ಸಿ.ಯು. ವಿಘ್ನೇಶ್, ಸಹ ಕಾರ್ಯದರ್ಶಿ ರಮೇಶ್, ಜಂಟಿ ಕಾರ್ಯದರ್ಶಿ ಹೊಯ್ಸಳ, ಮನೋಹರ್, ಖಜಾಂಚಿ ವಿನಯ್, ಸಹ ಖಜಾಂಚಿ ಸಂದೇಶ್, ಜಂಟಿ ಖಜಾಂಚಿ ಕವನ್, ನಿಖಿಲ್, ನಿರ್ದೇಶಕರುಗಳಾಗಿ ಮಂಜು, ಮೋನಿಷ್, ಮಿಥುನ್, ಗೌರವಾಧ್ಯಕ್ಷರಾಗಿ ಎ.ಕೆ. ಸತೀಶ್, ಸಂದೇಶ್, ಶಿವರಾಜ್, ಹೇಮಂತ್ ಕುಮಾರ್ ಸಲಹೆಗಾರರಾಗಿ ಪ್ರೇಮ ರಾಮಯ್ಯ , ರಶ್ಮಿ ಪ್ರವೀಣ್, ಸವಿತಾ ರಾಕೇಶ್, ಮಂಜುನಾಥ್, ಎ.ಎಂ. ನಿತಿನ್, ಕಾರ್ತಿಕ್, ಶ್ರೀನಿಧಿ ರಾಜ್, ಅಲಂಕಾರ ಸಮಿತಿಗೆ ಸಿ.ವಿ. ವಿಕ್ರಂ, ಭರತ್, ಲಿಖಿತ್, ಪೂಜಾ ಸಮಿತಿಗೆ ವರ್ಷಿತ್, ಪೋಪಿನ್, ಧ್ವನಿವರ್ಧಕ ಸಮಿತಿಗೆ ಗಣೇಶ್, ಮೆರವಣಿಗೆ ಸಮಿತಿಗೆ ಸೋನಾಲ್ ಪೂಜಾರಿ, ಆಹಾರ ಸಮಿತಿಗೆ ಪ್ರಶಾಂತ್, ಜಯಣ್ಣ, ಪ್ರಸಾದ್ ನೇಮಕಗೊಂಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.