ನಾಪೋಕ್ಲು, ಆ. ೨೭: ಸಮೀಪದ ಕಕ್ಕಬ್ಬೆಯ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ವಿಧಾನ ಪರಿಷತ್ ಸದಸ್ಯರು, ಕೊಡಗು ಜಿಲ್ಲೆಯ ಮಾಜಿ ಉಸ್ತುವಾರಿ ಸಚಿವರಾದ ಎಂ.ಆರ್.ಸೀತಾರಾಮ್ ಮತ್ತು ಅವರ ಕುಟುಂಬಸ್ಥರು ೧೨ ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಹೆಬ್ಬಾಗಿಲನ್ನು ಭಾನುವಾರ ಎಂ.ಆರ್. ಸೀತಾರಾಮ್ ಅವರು ಲೋಕಾರ್ಪಣೆ ಮಾಡಿದರು. ಈ ಸಂದರ್ಭ ಮಾತನಾಡಿದ ಅವರು, ದೇವಾಲಯಕ್ಕಾಗಿ ಹೆಬ್ಬಾಗಿಲನ್ನು ಸಮರ್ಪಿಸಲಾಗಿದೆ. ಭಕ್ತರ ಅನುಕೂಲಕ್ಕಾಗಿ ದೇವಾಲಯಕ್ಕೆ ತೆರಳಲು ಕಾಂಕ್ರೀಟ್ ರಸ್ತೆಯನ್ನು ಈ ಹಿಂದೆ ನಿರ್ಮಿಸಲಾಗಿದ್ದು, ಮಧ್ಯಭಾಗದಲ್ಲಿ ರಸ್ತೆ ಕೆಲಸ ಬಾಕಿ ಇದ್ದು ಅದನ್ನು ಮುಂದಿನ ದಿನಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದರು.

ಈ ಸಂದರ್ಭ ಅಖಿಲ ಕೊಡವ ಸಮಾಜದ ಅಧ್ಯಕ್ಷರೂ, ದೇವತಕ್ಕರಾದ ಪರದಂಡ ಸುಬ್ರಮಣಿ ಕಾವೇರಪ್ಪ, ದೇವಾಲಯದ ಭಕ್ತ ಜನ ಸಂಘದ ಅಧ್ಯಕ್ಷ ಕಾಂಡAಡ ಜೋಯಪ್ಪ, ಸಮಾಜ ಸೇವಕರಾದ ಕದ್ದಣಿಯಂಡ ಹರೀಶ್ ಬೋಪಣ್ಣ, ಪತ್ನಿ ಪ್ರತಿಮಾ, ಸೀತಾರಾಮ್ ಪತ್ನಿ ಶೃತಿ ಸೀತಾರಾಮ್, ಮಕ್ಕಳಾದ ರಕ್ಷಾ ರಾಮಯ್ಯ, ಸುಂದರ್ ರಾಮ್, ಭಕ್ತ ಜನ ಸಂಘದ ಕಾರ್ಯದರ್ಶಿ ಲಲಿತಾ ನಂದಕುಮಾರ್, ಭಕ್ತ ಜನ ಸಂಘದ ನಿರ್ದೇಶಕರಾದ ಕಲಿಯಂಡ ಹ್ಯಾರಿ ಮಂದಣ್ಣ, ಪರದಂಡ ಡಾಲಿ, ಬಾಚಮಂಡ ಪೂವಣ್ಣ, ಲವ ಚಿಣ್ಣಪ್ಪ. ಕಲಿಯಂಡ ಸಂಪನ್ ಅಯ್ಯಪ್ಪ, ಪಾಂಡAಡ ನರೇಶ್, ೩ಏಳನೇ ಪುಟಕ್ಕೆ

(ಮೊದಲ ಪುಟದಿಂದ) ಬಿದ್ದಾಟಂಡ ತಮ್ಮಯ್ಯ. ದೇವಾಲಯದ ಪಾರುಪತ್ತೆಗಾರ ಪರದಂಡ ಪ್ರಿನ್ಸ್ ತಮ್ಮಯ್ಯ. ಕಂದಾಯ ಪರಿವೀಕ್ಷಕ ರವಿಕುಮಾರ್ ಮತ್ತಿತರರು ಹಾಜರಿದ್ದರು. ಇದೇ ವೇಳೆ ಸೀತಾರಾಮ್ ಅವರು ತುಲಾಭಾರ ಸೇವೆ ಸಲ್ಲಿಸಿದರು. ಪೂಜಾ ವಿಧಿ ವಿಧಾನವನ್ನು ದೇವಾಲಯದ ಅರ್ಚಕರಾದ ಕುಶಭಟ್, ಜಗದೀಶ್ ಹಾಗೂ ಶ್ರೀಕಾಂತ್ ನೆರವೇರಿಸಿದರು. -ದುಗ್ಗಳ