ಅಮ್ಮತ್ತಿ, ಆ. ೨೬: ಅಮ್ಮತ್ತಿ ಕಾರ್ಮಾಡ್ ಗ್ರಾಮದ ನೆಲ್ಲಮಕ್ಕಡ ಟಿ. ಅಪ್ಪಯ್ಯ ಅವರ ಮನೆಯ ಅಡುಗೆಕೋಣೆಯಲ್ಲಿ ಹಾವು ಇರುವುದು ಕಂಡು ಭಯಭೀತರಾದ ಅವರು ಕೂಡಲೇ ಅಮ್ಮತ್ತಿ ಗ್ರಾಮದ ಉರಗ ಪ್ರೇಮಿ ಬೊಪ್ಪಂಡ ಸ್ನೇಕ್ ರೋಶನ್ ಅವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದರು. ಕೂಡಲೇ ಉರಗ ಪ್ರೇಮಿ ಸ್ನೇಕ್ ರೋಶನ್ ಅವರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದಾಗ ಅಡುಗೆ ಕೋಣೆಯ ಬಾಕ್ಸ್ ಒಳಗೆ ನಾಗರಹಾವು ಇರುವುದು ಕಂಡುಬAತು. ರೋಶನ್ ಅವರು ಹಾವನ್ನು ಸುರಕ್ಷಿತವಾಗಿ ರಕ್ಷಿಸುವಲ್ಲ್ಲಿ ಯಶಸ್ವಿಯಾದರು. ರಕ್ಷಣೆ ಮಾಡಿದ ಹಾವನ್ನು ಮಾಲ್ದಾರೆ ಅರಣ್ಯಕ್ಕೆ ಬಿಡಲಾಗುವುದು ಎಂದು ಸ್ನೇಕ್ ರೋಷನ್ ಅವರು ಮಾಹಿತಿ ನೀಡಿದ್ದಾರೆ.

ಯಾರು ಕೂಡ ಹಾವನ್ನು ಕೊಲ್ಲಬೇಡಿ, ಅವು ನೀರು ಕುಡಿಯಲು, ಆಹಾರವನ್ನು ಅರಸಿಕೊಂಡು ಮನೆಯ ಹತ್ತಿರ ಬರುತ್ತವೆ. ಹಾವುಗಳನ್ನು ಕಂಡಲ್ಲಿ ಈ ದೂರವಾಣಿ ಸಂಖ್ಯೆಗೆ ೭೦೨೨೩೭೩೯೨೧ ಕರೆ ಮಾಡುವಂತೆ ರೋಶನ್ ಅವರು ಮನವಿ ಮಾಡಿದ್ದಾರೆ.