ಐನಂಡ ಪ್ರಕಾಶ್
ವೀರಾಜಪೇಟೆ, ಆ. ೨೭: ಬ್ಯಾಂಕ್, ಸಹಕಾರಿ, ಇತರ ಸಂಘ ಸಂಸ್ಥೆಗಳಾಗಲಿ ಸಾರ್ವಜನಿಕರು ವ್ಯವಹಾರ ನಡೆಸಿದರೆ ಮಾತ್ರ ಸಂಸ್ಥೆಗಳು ಉತ್ತುಂಗಕ್ಕೆ ಏರಲು ಸಾಧ್ಯ ಎಂದು ಅಮ್ಮತ್ತಿ ಕೊಡವ ಸಮಾಜ ಅಧ್ಯಕ್ಷ ಐನಂಡ ಪ್ರಕಾಶ್ ಅಭಿಪ್ರಾಯ ವ್ಯಕ್ತಪಡಿಸಿದರು.
ವೀರಾಜಪೇಟೆ ಕೊಡವ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಲಿಮಿಟೆಡ್ನ ನೂತನ ಅಮ್ಮತ್ತಿ ಶಾಖೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಇಂದಿನ ಆಧುನಿಕ ಯುಗದಲ್ಲಿ ಮಾಹಿತಿ ಹಾಗೂ ತಂತ್ರಜ್ಞಾನದಿAದ ಮಧ್ಯವರ್ತಿಗಳ ಸಹಾಯ ಇಲ್ಲದೆ ನಮಗೆ ಕೈಗೆಟುಕುವ ರೀತಿಯಲ್ಲಿ ಕುಳಿತ ಜಾಗದಿಂದಲೇ ಆನ್ಲೈನ್ ಮೂಲಕ ವ್ಯವಹಾರಗಳನ್ನು ನಡೆಸಬಹುದಾಗಿದೆ. ಪಾರದರ್ಶಕ ಹಾಗೂ ಪ್ರಾಮಾಣಿಕ ಸೇವೆ ಒದಗಿಸುವ ನಿಟ್ಟಿನಲ್ಲಿ ಕಡಿಮೆ ಅವಧಿಯಲ್ಲಿ ಕೊಡವ ಸೌಹಾರ್ದ ಬ್ಯಾಂಕ್ ಮತ್ತೊಂದು ಶಾಖೆಯನ್ನು ಪ್ರಾರಂಭಿಸಿರುವುದು ಶ್ಲಾಘನೀಯ ಎಂದು ಹೇಳಿದರು.
ಕೊಡವ ಸೌಹಾರ್ದ ಬ್ಯಾಂಕ್ ಅಧ್ಯಕ್ಷ ನೆಲ್ಲಮಕ್ಕಡ ಉಮೇಶ್ ಮುತ್ತಣ್ಣ ಮಾತನಾಡಿ, ಕೊಡವರ ಆಶೋತ್ತರಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕಳೆದ ನಾಲ್ಕು ವರ್ಷಗಳ ಹಿಂದೆ ಈ ಸಂಸ್ಥೆಯನ್ನು ಪ್ರಾರಂಭಿಸ ಲಾಯಿತು. ವೀರಾಜಪೇಟೆ, ಮಡಿಕೇರಿ, ಪೊನ್ನಂಪೇಟೆ ಮೂರು ತಾಲೂಕು ಗಳನ್ನು ಒಳಗೊಂಡು ೧೨೩೫ ಸದಸ್ಯರುಗಳನ್ನು ಹೊಂದಿದೆ. ಸಂಸ್ಥೆ ಪ್ರಾರಂಭಗೊAಡ ಮೂರನೇ ವರ್ಷದಲ್ಲಿ ಬಂದ ಲಾಭಾಂಶದಲ್ಲಿ ಸದಸ್ಯರಿಗೆ ಶೇ. ೮ ರಷ್ಟು ಡಿವಿಡೆಂಡ್ ಹಂಚಲಾಗಿದೆ. ಸೌಹಾರ್ದ ಸಹಕಾರಿ ಸಂಸ್ಥೆ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತಿದೆ. ಇತರ ಜಿಲ್ಲೆಗೆ ಹೋಲಿಸಿದರೆ ಕೊಡಗು ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರ ಉತ್ತಮವಾಗಿ ಬೆಳೆೆಯುತ್ತಿದೆ. ನಮ್ಮ ಸಂಸ್ಥೆಯಲ್ಲಿ ಸಾಲ ಪಡೆದುಕೊಂಡು ಮರುಪಾವತಿ ಮಾಡಲು ಒಂದು ವರ್ಷ ಕಾಲಾವಕಾಶ ಇದೆ. ಮರುಪಾವತಿ ಮಾಡಿದ ಮರುದಿನವೇ ಹೊಸ ಸಾಲವನ್ನು ಪಡೆದುಕೊಳ್ಳಬಹುದು. ಸಂಸ್ಥೆಯು ಸಂಪೂರ್ಣ ಗಣಕೀಕೃತ ವಾಗಿದ್ದು ಗ್ರಾಹಕರ ಅನುಕೂಲಕ್ಕಾಗಿ ಸೇಫ್ ಡಿಪಾಸೆಟ್ ಲಾಕರ್, ಕ್ಯಾಶ್ಲೆಸ್ ಸೇವೆಗಳಾದ ನೆಷ್ಟ್, ಆರ್.ಟಿ.ಜಿ.ಎಸ್., ಮೊಬೈಲ್ ಬ್ಯಾಂಕಿAಗ್ ಮತ್ತು ಇ-ಸ್ಟಾಂಪಿAಗ್ ಸೌಲಭ್ಯವನ್ನು ನೀಡಲಾಗುತ್ತಿದೆ. ಸಹಕಾರಿಯಲ್ಲಿ ಪಿಗ್ಮಿ ಸಾಲ ಸೇರಿದಂತೆ ಎಲ್ಲಾ ವಿದಧ ಸಾಲ ಸೌಲಭ್ಯಗಳನ್ನು ಆಧಾರ ದಾಖಲಾತಿಗಳೊಂದಿಗೆ ಸದಸ್ಯರಿಗೆ ವಿತರಿಸಲಾಗುತ್ತಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಅಮ್ಮತ್ತಿ ವಿ.ಎಸ್.ಎಸ್.ಎನ್. ಅಧ್ಯಕ್ಷ ಕುಟ್ಟಂಡ ವಿನು ಪೂವಯ್ಯ, ಸಾರ್ವಜನಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಕೇಚಂಡ ಕುಶಾಲಪ್ಪ, ಕೊಡವ ಸೌಹಾರ್ದ ಬ್ಯಾಂಕ್ನ ಉಪಾಧ್ಯಕ್ಷ ಚೇಂದAಡ ವಸಂತ್ ಕುಮಾರ್, ನಿರ್ದೇಶಕರುಗಳಾದ ಕಾಂಡAಡ ಚರ್ಮಣ, ನೆಲ್ಲಚಂಡ ಭೀಮಯ್ಯ, ವಾಂಚಿರ ನಾಣಯ್ಯ, ವಾಟೇರಿರ ಪೂವಯ್ಯ, ಚೇಂದ್ರಿಮಾಡ ಕೆ. ನಂಜಪ್ಪ, ಕೊಂಗಾAಡ ಟಾಟ ನಾಣಯ್ಯ, ಕಾಳೇಂಗಡ ತಿಮ್ಮಯ್ಯ, ನೆಲ್ಲಮಕ್ಕಡ ಬೆಳ್ಯಪ್ಪ, ಮೇಕೇರಿರ ಪಾಲಿ ಸುಬ್ರಮಣಿ, ಪಟ್ಟಡ ದಿವ್ಯ, ಬೊಳ್ಳೆಪಂಡ ಸುರೇಶ್, ಕಾರ್ಯನಿರ್ವಹಣಾಧಿಕಾರಿ ಅಕ್ಕಮ್ಮ ಉಪಸ್ಥಿತರಿದ್ದರು.