ಮಡಿಕೇರಿ, ಆ. ೨೬: ಮಡಿಕೇರಿಯ ಎಫ್ಎಂಸಿ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಸಿಎ ಓದುತ್ತಿರುವ ತುಳಸಿ ಎಂಬ ವಿದ್ಯಾರ್ಥಿನಿಗೆ ವ್ಯಾಸಂಗಕ್ಕಾಗಿ ೨೫,೦೪೦ ರೂಪಾಯಿಗಳ ಚೆಕ್ಕನ್ನು ಮಡಿಕೇರಿ ಇನ್ನರ್ ವ್ಹೀಲ್ನಿಂದ ನೀಡಲಾಯಿತು. ಇನ್ನರ್ ವ್ಹೀಲ್ ಅಧ್ಯಕ್ಷೆ ಕನ್ನು ದೇವ್ರಾಜ್, ಸೆಕ್ರೆಟರಿ ದಿವ್ಯ ಮುತ್ತಣ್ಣ ಮತ್ತು ಖಜಾಂಜಿ ಲಕ್ಷಿö್ಮ ಭಟ್ ಮತ್ತು ಸಂಸ್ಥೆಯ ಇತರ ಸದಸ್ಯೆಯರು ಎಫ್ಎಂಸಿ ಕಾಲೇಜಿಗೆ ತೆರಳಿ ಕಾಲೇಜಿನ ಪ್ರಿನ್ಸಿಪಾಲ್. ಡಾ. ರಾಘವನ್, ಪ್ರೊಫೆಸರ್ ಡಾ. ಕೃಷ್ಣ ಮತ್ತು ಪ್ರಾಧ್ಯಾಪಕ ಹಾಗೂ ಸಿಬ್ಬಂದಿ ವರ್ಗದವರ ಸಮ್ಮುಖದಲ್ಲಿ ವಿದ್ಯಾರ್ಥಿನಿಗೆ ಚೆಕ್ಕು ಹಸ್ತಾಂತರಿಸಿದರು.