ಶನಿವಾರಸಂತೆ, ಆ. ೨೭: ಅರಕಲಗೂಡು ವ್ಯಾಪ್ತಿಗೆ ಬರುವ ೬೬ ಕೆವಿ ಮಾರ್ಗದ ೪ ಗೋಪುರಗಳಲ್ಲಿ ಡಿಸ್ಕ್ ಇನ್ಸುಲೇಟರ್ ಬದಲಾಯಿಸುವ ಕೆಲಸಕ್ಕೆ ಮಾರ್ಗ ಮುಕ್ತತೆ ಇರುವುದರಿಂದ ತಾ.೨೮ ರಂದು ಬೆಳಿಗ್ಗೆ ೬ ಗಂಟೆಯಿAದ ೧೦ ಗಂಟೆಯವರೆಗೆ ಶನಿವಾರಸಂತೆ ವಿದ್ಯುತ್ ಉಪಕೇಂದ್ರಕ್ಕೆ ಒಳಪಡುವ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಶನಿವಾರಸಂತೆ, ಗೋಪಾಲಪುರ, ಗುಡುಗಳಲೆ, ಮುಳ್ಳೂರು, ಹಂಡ್ಲಿ, ಗೌಡಳ್ಳಿ, ಬೀಟೆಕಟ್ಟೆ, ಮಾದ್ರೆ, ಕೊಡ್ಲಿಪೇಟೆ, ಬೆಸೂರು, ಕಟ್ಟೆಪುರ ಸುತ್ತಮುತ್ತಲ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಸೆಸ್ಕ್ ಪ್ರಕಟಣೆ ತಿಳಿಸಿದೆ.