ಬೆಂಗಳೂರು, ಆ. ೨೭: ಚಂದ್ರನ ಮೇಲ್ಮೆöÊ ಅಲ್ಲಿ ಸುರಕ್ಷಿತವಾಗಿ ಇಳಿದಿರುವ ವಿಕ್ರಂ ಲ್ಯಾಂಡರ್‌ನಲ್ಲಿ ಅಳವಡಿಸಿರುವ ಅhಚಿSಖಿಇ (ಅhಚಿಟಿಜಡಿಚಿ's Suಡಿಜಿಚಿಛಿe ಖಿheಡಿmoಠಿhಥಿsiಛಿಚಿಟ ಇxಠಿeಡಿimeಟಿಣ) ಪರಿಕರವು ಯಾವುದೇ ತೊಂದರೆಗಳು ಇಲ್ಲದೆ ಕಾರ್ಯಚರಿಸುತ್ತಿರುವುದಾಗಿ ಇಸ್ರೋ ಮಾಹಿತಿ ನೀಡಿದೆ. ಈ ಪರಿಕರವು ಚಂದ್ರನ ಮೇಲ್ಮೈಯಲ್ಲಿರುವ ಮಣ್ಣಿನ ತಾಪಮಾನದ ಬಗ್ಗೆ ತಿಳಿದುಕೊಳ್ಳಲು ಪ್ರಾರಂಭಿಸಿದ್ದು ಮಾಹಿತಿಯನ್ನು ಇಸ್ರೋದ ಬೆಂಗಳೂರು ಕೇಂದ್ರಕ್ಕೆ ರವಾನಿಸಿದೆ. ಇದಲ್ಲದೆ ಸುಮಾರು ೧೦ ಸೆಂಟಿಮೀಟರ್ ಒಳಪದರದವರೆಗೂ ಮಣ್ಣು ಅಗೆಯುವ ಸಾಮರ್ಥ್ಯವು ಈ ಪರಿಕರಕ್ಕೆ ಇದ್ದು ಸುಮಾರು ೧೦ ಸೆನ್ಸರ್‌ಗಳು ಇರುವುದಾಗಿ ಇಸ್ರೋ ಮಾಹಿತಿ ಇತ್ತಿದೆ. ದಕ್ಷಿಣ ಧ್ರುವದ ಪದರದ ತಾಪಮಾನವು ೫೦ ಡಿಗ್ರಿ ಸೆಲ್ಶಿಯಸ್ ಹಾಗೂ ಸುಮಾರು ೮ ಸೆಂಟಿಮೀಟರ್ ಕೆಳಗೆ -೧೦ ಡಿಗ್ರಿ ಸೆಲ್ಶಿಯಸ್ ಇರುವುದಾಗಿ ಮಾಹಿತಿ ನೀಡಿದೆ.

ಪ್ರಗ್ಯಾನ್ ರೋವರ್ ಕೂಡ ಸರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ವಿಕ್ರಂ ಲ್ಯಾಂಡರ್‌ನ ಚಿತ್ರ ಸೆರೆಹಿಡಿದಿರುವುದಾಗಿ ಇಸ್ರೋ ಮಾಹಿತಿ ನೀಡಿದೆ. ಇದರ ಚಿತ್ರ ಇನ್ನಷ್ಟೇ ಬಿಡುಗಡೆಗೊಳ್ಳಬೇಕಿದೆ.