ಪೊನ್ನಂಪೇಟೆ, ಆ. ೨೭: ಸಮೀಪದ ಬಲ್ಯಮೂಂಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೂಚಮಕೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ ಹಲವು ವರ್ಷಗಳಿಂದ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ಇದೀಗ ವರ್ಗಾವಣೆಗೊಂಡಿರುವ ಸಿ.ಎನ್. ಪದ್ಮ ಅವರಿಗೆ ಶಾಲೆಯ ವತಿಯಿಂದ ಬೀಳ್ಕೊಡುಗೆ ಸಮಾರಂಭ ಏರ್ಪಾಡಿಸಲಾಗಿತ್ತು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಜೆ.ಆರ್.ಗೀತಾ, ಗ್ರಾಮ ಪಂಚಾಯಿತಿ ಸದಸ್ಯ ಪೆಮ್ಮಂಡ ಭರತ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕಿ ಗಾಯತ್ರಿ, ಪೆಮ್ಮಂಡ ಅರುಣ್, ಪಿ.ಎಸ್.ಪದ್ಮ, ಪುಟ್ಟಂಗಡ ಗ್ರೇಸಿ, ಮೂಕಳಮಾಡ ಮುತ್ತಮ್ಮ, ಸಿ.ಆರ್.ಪಿ ಜೀವನ್, ಮುಖ್ಮ ಶಿಕ್ಷಕ ಹರೀಶ್, ಸಿಬ್ಬಂದಿಗಳು ಮತ್ತು ಪೋಷಕರು ಇದ್ದರು.