ಪೊನ್ನಂಪೇಟೆ, ಆ. ೨೬: ದೇವನೂರು, ಬಾಳೆಲೆ ಫಾರ್ಮರ್ಸ್ ಅಸೋಸಿಯೇಷನ್ ವತಿಯಿಂದ ನಿಟ್ಟೂರು ಗ್ರಾಮದಲ್ಲಿ ಮಾಪಂಗಡ ಡಾ. ಪ್ರತಾಪ್ ಬೆಳ್ಯಪ್ಪ ಅವರ ಗದ್ದೆಯಲ್ಲಿ ಆಯೋಜಿಸಲಾಗಿದ್ದ ಪೊನ್ನಂಪೇಟೆ ತಾಲೂಕು ಮಟ್ಟದ ಕೆಸರು ಗದ್ದೆ ಕ್ರೀಡಾಕೂಟದಲ್ಲಿ ತಾಲೂಕಿನ ಸಾರ್ವಜನಿಕರು ಕೆಸರಿನಲ್ಲಿ ಮಿಂದೆದ್ದು ಸಂಭ್ರಮಿಸಿದರು.
ಬಾಳೆಲೆ ಫಾರ್ಮರ್ಸ್ ಅಸೋಸಿಯೇಷನ್ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಕೆಸರುಗದ್ದೆ ಕ್ರೀಡಾಕೂಟವನ್ನು ಫಾರ್ಮರ್ಸ್ ಅಸೋಸಿಯೇಷನ್ ಸದಸ್ಯರಾದ ಮಾಪಂಗಡ ಪ್ರತಾಪ್ ಬೆಳ್ಳಿಯಪ್ಪ ಭೂಮಿ ಪೂಜೆ ಸಲ್ಲಿಸುವ ಮೂಲಕ ಉದ್ಘಾಟಿಸಿದರು.
ಫಲಿತಾಂಶ : ವಾಲಿಬಾಲ್ನಲ್ಲಿ ಕಿರುಗೂರು ಎ ತಂಡ ವಿನ್ನರ್, ಕಿರುಗೂರು ಬಿ ತಂಡದ ರನ್ನರ್ ಸ್ಥಾನ ಪಡೆದುಕೊಂಡಿತು. ಹಗ್ಗ ಜಗ್ಗಾಟ ಸ್ಪರ್ಧೆ ಪುರುಷರ ವಿಭಾಗದಲ್ಲಿ ಮಲ್ಲಂಗೆರೆ ಫಾರೆಸ್ಟ್ ರೈಡರ್ಸ್ ತಂಡ ಪ್ರಥಮ, ಸುಳುಗೋಡು ಫ್ರೆಂಡ್ಸ್ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು. ತೀವ್ರ ರೋಚಕತೆಯಿಂದ ಕೂಡಿದ್ದ ಮಹಿಳೆಯರ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಕೋತೂರು ಮಾರಮ್ಮ ತಂಡ ಪ್ರಥಮ, ಹಾತೂರು ಗೌಡಾಸ್ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು.
ಓಟದ ಸ್ಪರ್ಧೆ: ೫ ರಿಂದ ೧೦ ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಅಪ್ಪಣ್ಣ ಪ್ರಥಮ, ಕೃತಿಕ್ ದ್ವಿತೀಯ, ಕವಿನ್ ತೃತೀಯ, ಬಾಲಕಿಯರ ವಿಭಾಗದಲ್ಲಿ ಪ್ರತೀಕ್ಷಾ ಪೂವಣ್ಣ ಪ್ರಥಮ, ಆದ್ಯ ದೇಚಮ್ಮ ದ್ವಿತೀಯ, ಶಾಂದಿ ಗೌರಮ್ಮ ತೃತೀಯ ಸ್ಥಾನ ಪಡೆದುಕೊಂಡರು.
೧೧ರಿAದ ೧೫ ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಸಿದ್ದಾರ್ಥ್ ಪೂವಣ್ಣ ಪ್ರಥಮ, ಚಿರಾಗ್ ಪೊನ್ನಣ್ಣ ದ್ವಿತೀಯ, ಕಾಡೆಮಾಡ ಪೊನ್ನಣ್ಣ ತೃತೀಯ, ಬಾಲಕಿಯರ ವಿಭಾಗದಲ್ಲಿ ಗಿಯಾನ್ ಬೋಜಕ್ಕ ಪ್ರಥಮ, ಓಮಿಶ ಪೊನ್ನಕ್ಕ ದ್ವಿತೀಯ, ಟಿಯಾನ ಕಾವೇರಮ್ಮ ತೃತೀಯ ಸ್ಥಾನ ಪಡೆದುಕೊಂಡರು. ೧೬ ರಿಂದ ೧೮ ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ರೋಮಿತ್ ತಿಮ್ಮಯ್ಯ ಪ್ರಥಮ, ನಾಗರಾಜು ದ್ವಿತೀಯ, ಅಭಿಷೇಕ್ ತೃತೀಯ, ಬಾಲಕಿಯರ ವಿಭಾಗದಲ್ಲಿ ನೀಲ ಪ್ರಥಮ, ಸುಮಿತ್ರ ದ್ವಿತೀಯ, ಬೃಂಧ ತೃತೀಯ ಸ್ಥಾನ ಪಡೆದುಕೊಂಡರು. ೧೮ ರಿಂದ ೨೫ ವರ್ಷದೊಳಗಿನ ವಿಭಾಗದಲ್ಲಿ ಎ.ಬಿ. ಸೋಮಣ್ಣ ಪ್ರಥಮ, ನಿತೀಶ್ ದ್ವಿತೀಯ, ಚೇತನ್ ತೃತೀಯ ಸ್ಥಾನ ಪಡೆದುಕೊಂಡರು.
೨೬ ರಿಂದ ೪೦ ವರ್ಷದೊಳಗಿನ ಪುರುಷರ ವಿಭಾಗದಲ್ಲಿ ಅಯ್ಯಪ್ಪ ಪ್ರಥಮ, ವಿನೋದ್ ದ್ವಿತೀಯ, ಭರತ್ ತೃತೀಯ, ಮಹಿಳೆಯರ ವಿಭಾಗದಲ್ಲಿ ಕೃತಿಕ ಪ್ರಥಮ, ನೀತುಕೇಶು ದ್ವಿತೀಯ, ಸೀಮಾ ಮಂಜು ತೃತೀಯ, ೪೧ ರಿಂದ ೫೦ ವರ್ಷದೊಳಗಿನ ವಿಭಾಗದಲ್ಲಿ ಕೊಟ್ಟಂಗಡ ಬೋಪಣ್ಣ ಪ್ರಥಮ, ಅರಮಣಮಾಡ ವಿಶು ದ್ವಿತೀಯ, ತೀತಿರ ಕಿರಣ್ ತೃತೀಯ, ಮಹಿಳೆಯರ ವಿಭಾಗದಲ್ಲಿ ಅಜ್ಜಮಾಡ ಕಾವ್ಯ ಪ್ರಥಮ, ಚಿರಿಯಪಂಡ ನೀಮಾ ದ್ವಿತೀಯ, ಪಡಿಕಲ್ ಕುಸುಮವತಿ ತೃತೀಯ ಸ್ಥಾನ ಪಡೆದುಕೊಂಡರು.
ಸಮಾರೋಪ ಸಮಾರಂಭ
ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವೀರಾಜಪೇಟೆ ಕ್ಷೇತ್ರದ ಶಾಶಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾಗಿರುವ ಎ.ಎಸ್. ಪೊನ್ನಣ್ಣ ಮಾತನಾಡಿ ಆಧುನಿಕತೆಯ ಭರಾಟೆಯ ನಡುವೆ ಗ್ರಾಮೀಣ ಕ್ರೀಡೆಗಳು, ಹಳೆಯ ಆಚಾರ, ಪದ್ಧತಿಗಳನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ಎಲ್ಲರ ಜವಾಬ್ದಾರಿ ಯಾಗಿದೆ. ಈ ನಿಟ್ಟಿನಲ್ಲಿ ಕೆಸರು ಗದ್ದೆ ಕ್ರೀಡಾಕೂಟವನ್ನು ಆಯೋಜಿಸುತ್ತಾ ಬರುತ್ತಿರುವುದು ಉತ್ತಮ ಬೆಳವಣಿಗೆ. ಇಂದಿನ ಯುವಸಮೂಹ ಹೊಸತನದ ಜೊತೆ ಜೊತೆಯಲ್ಲೇ, ಮಣ್ಣು ಹಾಗೂ ಪ್ರಕೃತಿಯನ್ನು ರಕ್ಷಣೆ ಮಾಡುತ್ತಾ, ಹಳೆಯ ಪದ್ಧತಿಗಳನ್ನು ಉಳಿಸಿ ಬೆಳೆಸಿದರೆ ಮಾತ್ರ ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಒಲಂಪಿಯನ್ ಡಾ. ಎಂ.ಪಿ. ಗಣೇಶ್ ಮತ್ತು ಶಾಸಕ ಎ.ಎಸ್. ಪೊನ್ನಣ್ಣ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಬಾಳೆಲೆ ಫಾರ್ಮರ್ಸ್ ಅಸೋಸಿಯೇಷನ್ ಅಧ್ಯಕ್ಷ ಅಳಮೆಂಗಡ ಬೋಸ್ ಮಂದಣ್ಣ, ಫಾರ್ಮರ್ಸ್ ಅಸೋಸಿಯೇಷನ್ ಸದಸ್ಯರಾದ ಮಾಪಂಗಡ ಪ್ರತಾಪ್ ಬೆಳ್ಯಪ್ಪ, ದಾನಿ ಅಳಮೇಂಗಡ ಮುರಳಿ ಮುತ್ತಣ್ಣ, ಅಂರ್ರಾಷ್ಟಿçÃಯ ಕರಾಟೆ ಪಟು ಚೆಪ್ಪುಡಿರ ಅರುಣ್ ಮಾಚಯ್ಯ, ಬಾಳೆಲೆ ಗ್ರಾ.ಪಂ. ಅಧ್ಯಕ್ಷೆ ಮುಕ್ಕಾಟಿರ ಜಾನಕಿ ಕಾವೇರಪ್ಪ, ಬಾಳೆಲೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿಮ್ಮಣಮಾಡ ಕೃಷ್ಣ ಗಣಪತಿ, ನಿಟ್ಟೂರು ಗ್ರಾ.ಪಂ. ಉಪಾಧ್ಯಕ್ಷ ಚಕ್ಕೇರ ಸೂರ್ಯ ಅಯ್ಯಪ್ಪ, ಬಾಳೆಲೆ ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಪೋಡಮಾಡ ಸುಕೇಶ್ ಭೀಮಯ್ಯ, ಕಾಟಿಮಾಡ ಶರೀನ್ ಮುತ್ತಣ್ಣ, ಫಾರ್ಮರ್ಸ್ ಅಸೋಸಿಯೇಷನ್ ಉಪಾಧ್ಯಕ್ಷ ಅಡ್ಡೇಂಗಡ ಎಸ್. ನವೀನ್, ಗೌರವ ಕಾರ್ಯದರ್ಶಿ ಆದೇಂಗಡ ಪುಟ್ಟು ಮಂದಣ್ಣ, ಬಾಳೆಲೆ ಗ್ರಾ.ಪಂ. ಉಪಾಧ್ಯಕ್ಷ ಕಳ್ಳಿಚಂಡ ರಕ್ಷಿತ್ ಕುಶಾಲಪ್ಪ, ಬಾಳೆಲೆ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷೆ ಮಾಚಂಗಡ ಸರಿತಾ ರೋಷನ್, ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ಇನ್ನಿತರರು ಉಪಸ್ಥಿತರಿದ್ದರು. ತೀರ್ಪುಗಾರರಾಗಿ ರಮಾನಂದ್, ಸೋಮಣ್ಣ, ಅಯ್ಯಪ್ಪ, ಮಹೇಶ್, ಸುಬ್ಬಯ್ಯ, ಪ್ರಭುಕುಮಾರ್ ಕಾರ್ಯನಿರ್ವಹಿಸಿದರು. ಕಳ್ಳಿಚಂಡ ಕವಿತ ಕಾವೇರಮ್ಮ ತಾಂತ್ರಿಕ ನಿರ್ವಹಣೆ, ಡಾನ್ ಕುಶಾಲಪ್ಪ ನಿರೂಪಣೆ ಮಾಡಿದರು.