ಮತ್ತಷ್ಟು ಹೀನಾಯ ಸ್ಥಿತಿಗೆ ತಲುಪಲಿದೆ: ಜಗದೀಶ್ ಶೆಟ್ಟರ್
ಉಡುಪಿ, ಆ. ೨೭: ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯಾಗಿ ಬರೋಬ್ಬರಿ ಮೂರು ತಿಂಗಳು ಕಳೆದಿದ್ದರೂ ರಾಜ್ಯ ಬಿಜೆಪಿಗೆ ಮಾತ್ರ ಇಂದಿಗೂ ವಿಪಕ್ಷ ನಾಯಕನ ಆಯ್ಕೆ ಕಗ್ಗಂಟಾಗಿಯೇ ಉಳಿದಿದೆ. ವಿಪಕ್ಷ ನಾಯಕನಿಲ್ಲದೆ ಬಜೆಟ್ ಅಧಿವೇಶನವೂ ಕೊನೆಗೊಂಡಿತು. ಇದೇ ವಿಚಾರವಾಗಿ ಬಿಜೆಪಿ ವಿರುದ್ಧ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಕಿಡಿಕಾರಿದ್ದು, ಸದ್ಯದ ಪರಿಸ್ಥಿತಿಯನ್ನು ನೋಡಿದರೆ ಬಿಜೆಪಿಯಲ್ಲಿ ನಾಯಕರಿಲ್ಲದಂತಾಗಿದೆ ಎಂದಿದ್ದಾರೆ. ಕರ್ನಾಟಕ ಬಿಜೆಪಿಯಲ್ಲಿ ನಾಯಕರಿಲ್ಲದ ಕಾರಣದಿಂದ ಇಲ್ಲಿಯವರೆಗೆ ಹೊಸ ರಾಜ್ಯಾಧ್ಯಕ್ಷರನ್ನು ಆಯ್ಕೆ ಮಾಡಲು ಸಾಧ್ಯವಾಗಲಿಲ್ಲ. ರಾಜ್ಯದಲ್ಲಿ ಬಿಜೆಪಿ ಸ್ಥಿತಿ ಹದಗೆಟ್ಟಿದ್ದು, ಮತ್ತಷ್ಟು ಹೀನಾಯ ಸ್ಥಿತಿಗೆ ತಲುಪಲಿದೆ ಎಂದು ಭವಿಷ್ಯ ನುಡಿದರು. ಮಣಿಪಾಲದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶೆಟ್ಟರ್, ಬಿಜೆಪಿಯಲ್ಲಿ ಅನೇಕ ನಾಯಕರು ನೋವು ಅನುಭವಿಸಿದ್ದಾರೆ ಮತ್ತು ಅವರಲ್ಲಿ ಅನೇಕರು ಆ ಪಕ್ಷದಿಂದ ಹೊರಬರಲು ಬಯಸುತ್ತಾರೆ. ಬಿಜೆಪಿ ನಾಯಕರು ರಾಜ್ಯದ ವಿವಿಧೆಡೆ ಕಾಂಗ್ರೆಸ್ ಮುಖಂಡರನ್ನು ಸಂಪರ್ಕಿಸುತ್ತಿದ್ದಾರೆ ಎಂದು ಹೇಳಿದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ ಎಂಬ ಊಹಾಪೋಹಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಆ ಪಕ್ಷದ ಹೈಕಮಾಂಡ್ನಿAದ ಯಾರೂ ತಮ್ಮನ್ನು ಸಂಪರ್ಕಿಸಿಲ್ಲ ಎಂದು ಹೇಳಿದರು.
ಮೈಸೂರಿನಲ್ಲಿ ಒಂದೇ ಕುಟುಂಬದ ನಾಲ್ವರ ಮೃತದೇಹ ಪತ್ತೆ!
ಮೈಸೂರು, ಆ. ೨೭: ಮೈಸೂರಿನ ಚಾಮುಂಡಿಪುರA ಬಡಾವಣೆಯಲ್ಲಿ ಒಂದೇ ಕುಟುಂಬದ ನಾಲ್ವರ ಶವ ಪತ್ತೆ ಆಗಿರುವ ಘಟನೆ ನಡೆದಿದೆ. ಮೃತರು ೪೮ ವರ್ಷದ ಮಹದೇವಸ್ವಾಮಿ, ೩೫ ವರ್ಷದ ಅನಿತಾ, ಪುತ್ರಿಯರಾದ ೧೭ ವರ್ಷದ ಚಂದ್ರಕಲಾ ಮತ್ತು ೧೫ ವರ್ಷದ ಧನಲಕ್ಷ್ಮೀ ಎಂದು ತಿಳಿದುಬಂದಿದೆ. ಮಹದೇವ ಸ್ವಾಮಿ ಶವ ಹಾಲ್ನಲ್ಲಿ ಪತ್ತೆಯಾಗಿದ್ದರೆ, ಅನಿತ ಮೃತದೇಹ ಕುರ್ಚಿ ಮೇಲಿದ್ದು, ದೊಡ್ಡ ಮಗಳು ಚಂದ್ರಕಲಾ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರೆ, ಚಿಕ್ಕ ಮಗಳು ಧನಲಕ್ಷ್ಮಿ ಮೃತದೇಹ ರೂಂನಲ್ಲಿ ಪತ್ತೆಯಾಗಿದೆ. ಮೈಸೂರು ತಾಲೂಕಿನ ಬರಡನಪುರ ಗ್ರಾಮದವರಾಗಿದ್ದ ಮಹದೇವಸ್ವಾಮಿ ಅವರು ಎರಡು ತಿಂಗಳ ಹಿಂದೆ ಚಾಮುಂಡಿಪುರA ಬಡಾವಣೆಯಲ್ಲಿ ಬಾಡಿಗೆ ಮನೆ ಪಡೆದು ಕುಟುಂಬ ಸಹಿತ ವಾಸವಾಗಿದ್ದರು. ಮಹದೇವಸ್ವಾಮಿ ಅವರು ಬಂಡಿಪಾಳ್ಯದಲ್ಲಿ ಮಳಿಗೆ ಹೊಂದಿದ್ದರು. ಘಟನಾ ಸ್ಥಳಕ್ಕೆ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬAಧ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಂಬೈನ ಗ್ಯಾಲಕ್ಸಿ ಹೊಟೇಲ್ನಲ್ಲಿ ಅಗ್ನಿ ಅವಘಡ: ಮೂವರು ಸಾವು
ಮುಂಬೈ, ಆ. ೨೭: ದೇಶದ ಆರ್ಥಿಕ ರಾಜಧಾನಿ ಮುಂಬೈನ ಸಾಂತಾಕ್ರೂಜ್ ಪ್ರದೇಶದಲ್ಲಿರುವ ಗ್ಯಾಲಕ್ಸಿ ಹೊಟೇಲ್ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಅವಘಡದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಬೆಂಕಿಯಿAದಾಗಿ ಹಲವರಿಗೆ ಗಾಯಗಳಾಗಿದ್ದು, ಅಗ್ನಿ ಅವಘಡದ ಕುರಿತು ಮಾಹಿತಿ ಪಡೆದ ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ಆಗಮಿಸಿ ಸಾಕಷ್ಟು ಪ್ರಯತ್ನದ ನಂತರ ಬೆಂಕಿಯನ್ನು ನಂದಿಸಿವೆ. ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಅವಘಡದ ಮಾಹಿತಿ ಬಂದ ತಕ್ಷಣ ಹೊಟೇಲ್ನಲ್ಲಿ ಕಾಲ್ತುಳಿತ ಉಂಟಾಗಿತ್ತು. ಹೊಟೇಲ್ ಸಿಬ್ಬಂದಿ ತರಾತುರಿಯಲ್ಲಿ ಹೊಟೇಲ್ ಖಾಲಿ ಮಾಡಿದರು. ಬೆಂಕಿ ಅವಘಡದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಉತ್ತಮ ಚಿಕಿತ್ಸೆಗಾಗಿ ವಿ.ಎನ್. ದೇಸಾಯಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೋಲಾರದಲ್ಲಿ : ಮಗಳನ್ನೇ ಹೊಡೆದು ಕೊಂದ ತಂದೆ!
ಕೋಲಾರ, ಆ. ೨೭: ಅನ್ಯ ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದ ಮಗಳನ್ನು ತಂದೆಯು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕೋಲಾರದ ತೊಟ್ಲಿ ಗ್ರಾಮದಲ್ಲಿ ನಡೆದಿದೆ. ಕೊಲೆಯಾದ ಯುವತಿಯನ್ನು ೧೯ ವರ್ಷದ ರಮ್ಯಾ ಎಂದು ಗುರುತಿಸಲಾಗಿದೆ. ಅನ್ಯ ಜಾತಿಯ ಯುವಕನನ್ನು ಪ್ರೀತಿಸದಂತೆ ಎಷ್ಟು ಹೇಳಿದರೂ ಮಗಳು ಕೇಳಲಿಲ್ಲ ಎಂದು ತಂದೆ ವೆಂಕಟೇಶಗೌಡ ಮಗಳ ಮೇಲೆ ಹಲ್ಲೆ ನಡೆಸಿದ್ದ. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಯುವತಿ ಮೃತಪಟ್ಟಿದ್ದಾಳೆ. ಕಳೆದ ಶುಕ್ರವಾರ ಈ ಘಟನೆ ನಡೆಸಿದ್ದು ನಂತರ ಸದ್ದಿಲ್ಲದೆ ಮಗಳ ಅಂತ್ಯ ಸಂಸ್ಕಾರವನ್ನು ಪೋಷಕರು ನೇರವೇರಿಸಿದ್ದರು. ಇದಾದ ಬಳಿಕ ಊರಿನಲ್ಲಿ ಯುವತಿಯ ಕೊಲೆಯಾಗಿದೆ ಎಂಬ ಸುದ್ದಿ ಹಬ್ಬಿದ್ದರಿಂದ ಈ ಬಗ್ಗೆ ಪೊಲೀಸರು ಯುವತಿಯ ತಂದೆಯನ್ನು ಕರೆಸಿ ವಿಚಾರಣೆ ನಡೆಸಿದಾಗ ಮರ್ಯಾದಾ ಹತ್ಯೆ ಬೆಳಕಿಗೆ ಬಂದಿದೆ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೌಜನ್ಯ ಕೊಲೆ ಪ್ರಕರಣ: ಅಣ್ಣಪ್ಪ ಸ್ವಾಮಿ ಮುಂದೆ ಆಣೆ
ಉತ್ತರ ಕನ್ನಡ, ಆ. ೨೭: ಸೌಜನ್ಯ ಕೊಲೆ ಪ್ರಕರಣಕ್ಕೆ ಸಂಬAಧಿಸಿದAತೆ ನಾವು ತಪ್ಪು ಮಾಡಿಲ್ಲ. ತಪ್ಪಿತಸ್ಥರನ್ನು ಶಿಕ್ಷಿಸು ಎಂದು ಧರ್ಮಸ್ಥಳದ ಅಣ್ಣಪ್ಪ ಸ್ವಾಮಿ ದೇಗುಲದ ಮುಂದೆ ನಿಂತು ಧೀರಜ್ ಕೆಲ್ಲಾ, ಮಲ್ಲಿಕ್ ಮತ್ತು ಉದಯ್ ಜೈನ್ ಪ್ರಮಾಣ ಮಾಡಿದ್ದಾರೆ. ೧೧ ವರ್ಷಗಳ ಬಳಿಕ ಮತ್ತೆ ಮುನ್ನೆಲೆಗೆ ಬಂದ ಧರ್ಮಸ್ಥಳದ ಸೌಜನ್ಯಾ ಅತ್ಯಾಚಾರ, ಕೊಲೆ ಪ್ರಕರಣ ಇದೀಗ ಮುಂಜುನಾಥನ ಸನ್ನಿಧಿ ಬಳಿಯಲ್ಲಿರುವ ಅಣ್ಣಪ್ಪನ ಬೆಟ್ಟದವರೆಗೂ ಹೋಗಿದ್ದು, ಪ್ರಕರಣದಲ್ಲಿ ಆರೋಪಿಗಳು ಎಂದು ಆರೋಪಿಸಲಾಗುತ್ತಿರುವ ಧೀರಜ್ ಕೆಲ್ಲಾ, ಮಲ್ಲಿಕ್ ಜೈನ್ ಮತ್ತು ಉದಯ್ ಜೈನ್ ಪ್ರಮಾಣ ಮಾಡಿ ತಾವು ಏನೂ ತಪ್ಪು ಮಾಡಿಲ್ಲ. ತಪ್ಪಿತಸ್ಥರನ್ನು ಶಿಕ್ಷಿಸುವಂತೆ ದೇವರ ಮುಂದೆ ಪ್ರಾರ್ಥನೆ ಮಾಡಿದ್ದಾರೆ. ಸೌಜನ್ಯ ತಾಯಿ ಕುಸುಮಾವತಿ ಹಾಗೂ ಇತರರು ಕೂಡ ಅಣ್ಣಪ್ಪನ ಬೆಟ್ಟಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ವಿದ್ಯಾರ್ಥಿಗಳ ಅಪಹರಣ, ಹಲ್ಲೆ : ಏಳು ಮಂದಿ ಬಂಧನ
ಮAಗಳೂರು, ಆ. ೨೭: ನಗರದ ಖಾಸಗಿ ಕಾಲೇಜೊಂದರ ಇಬ್ಬರು ವಿದ್ಯಾರ್ಥಿಗಳನ್ನು ಅಪಹರಿಸಿ ಹಲ್ಲೆ ನಡೆಸಿದ ಆರೋಪದ ಮೇಲೆ ಮಂಗಳೂರು ನಗರ ಪೊಲೀಸರು ಏಳು ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರನ್ನು ಪಾಣೆಮಂಗಳೂರಿನ ಇಬ್ರಾಹಿಂ ತಭಿಷ್ (೧೯) ಮತ್ತು ಮೊಹಮ್ಮದ್ ಶಕೀಫ್ (೧೯), ಬಂಟ್ವಾಳದ ಅಬ್ದುಲ್ಲ ಹನ್ನಾನ್ (೧೯), ಮೊಹಮ್ಮದ್ ಶಾಹಿಕ್ (೧೯) ಮತ್ತು ಮನ್ಸೂರ್ (೩೭) ಮತ್ತು ಯು.ಪಿ. ತನ್ವೀರ್ (೨೦) ಮತ್ತು ಬಜಾಲ್ನ ಅಬ್ದುಲ್ ರಶೀದ್ (೨೦) ಎಂದು ಗುರುತಿಸಲಾಗಿದೆ. ಆರೋಪಿಗಳ ವಿರುದ್ಧ ಆಗಸ್ಟ್ ೨೩ರಂದು ನಗರದ ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳಾದ ಶಮೀರ್ ಮತ್ತು ಇಬ್ರಾಹಿಂ ಫಹೀಂ ಎಂಬವರನ್ನು ಅಪಹರಿಸಿ ಹಲ್ಲೆ ಮಾಡಿದ ಆರೋಪವಿದೆ. ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.