ಮಡಿಕೇರಿ, ಆ. ೨೭: ಸಾರ್ವಜನಿಕರೊಂದಿಗೆ ಹಾಗೂ ಶಾಲಾ ವಿದ್ಯಾರ್ಥಿ- ವಿದ್ಯಾರ್ಥಿನಿಯರೊಂದಿಗೆ ಆಟೋ ಚಾಲಕರುಗಳು ಅಸಭ್ಯವಾಗಿ ವರ್ತಿಸಿದರೆ ನಮ್ಮ ಗಮನಕ್ಕೆ ತನ್ನಿ ಎಂದು ಆಟೋ ಮಾಲೀಕರ ಹಾಗೂ ಚಾಲಕರ ಸಂಘ ಮನವಿ ಮಾಡಿದೆ.
ನಗರದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಮೇದಪ್ಪ ಹಾಗೂ ಪದಾಧಿಕಾರಿಗಳು ಮಾತನಾಡಿದರು.
ನಗರದಲ್ಲಿ ಹೆಚ್ಚಿನ ಆಟೋ ಚಾಲಕರು ಸಂಘದಲ್ಲಿ ಸದಸ್ಯತ್ವ ಹೊಂದದೇ ಕರ್ತವ್ಯ ನಿರತರಾಗಿದ್ದಾರೆ. ಸಂಘದಿAದ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಹೆಚ್ಚಿನ ಚಾಲಕರಿಗೆ ಆಟೋ ರಿಕ್ಷಾದ ಚಾಲನಾ ಪರವಾನಗಿಯೇ ಇಲ್ಲದಿರುವುದು ಕಂಡುಬAದಿದೆ. ನಾಲ್ಕು ಚಕ್ರ ವಾಹನದ ಪರವಾನಗಿಯಲ್ಲಿ ಆಟೋ ಚಲಾಯಿಸುತ್ತಿದ್ದಾರೆ. ಇದನ್ನು ಇತ್ತೀಚಿನ ದಿನಗಳಲ್ಲಿ ಸಾರಿಗೆ ಇಲಾಖೆ ಕೂಡಾ ಸಮ್ಮತಿಸುತ್ತಿದೆ. ಇತ್ತೀಚೆಗೆ ವೈದ್ಯಕೀಯ ಕಾಲೇಜಿನಲ್ಲಿ ಮಹಿಳೆಯರ ಹಾಸ್ಟೆಲ್ ಬಳಿ ಅನುಚಿತ ಕೃತ್ಯ ಎಸಗಿದ ವ್ಯಕ್ತಿಗೆ ಸಂಬAಧಪಟ್ಟ ಇಲಾಖೆ ಚಾಲನಾ ಪರವಾನಗಿ ರದ್ದುಗೊಳಿಸಬೇಕು. ಕೆಲವರು ಆಟೋಗಳನ್ನು ಬಳಸಿ ಮಾದಕ ವಸ್ತುಗಳ ದಂಧೆಯಲ್ಲಿ ತೊಡಗಿದ್ದಾರೆ. ಇಂತಹ ಕೃತ್ಯ ಎಸಗುವ ಯಾವುದೇ ಚಾಲಕ ಆಗಿದ್ದರೂ, ಅಂತಹವರ ಚಾಲನಾ ಪರವಾನಗಿ ರದ್ದುಗೊಳಿಸಬೇಕೆಂದು ಅವರುಗಳು ಒತ್ತಾಯಿಸಿದರು.
ನಮ್ಮ ಸಂಘದ ಕೆಲ ಪದಾಧಿಕಾರಿಗಳ ಸಂಪರ್ಕ ಸಂಖ್ಯೆಯನ್ನು ನಿಲ್ದಾಣದ ಮುಂಭಾಗದಲ್ಲಿ ನಾಮಫಲಕದೊಂದಿಗೆ ಅಳವಡಿಸಲಾಗುತ್ತದೆ. ಚಾಲಕರ ಕೆಟ್ಟ ನಡವಳಿಕೆಗಳು ಕಂಡುಬAದಲ್ಲಿ ಸಾರ್ವಜನಿಕರು, ವಿದ್ಯಾರ್ಥಿ - ವಿದ್ಯಾರ್ಥಿನಿಯರು ಸಂಘದ ಗಮನಕ್ಕೆ ತಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಚಾಲಕರಿಗೂ ಯಾವುದೇ ಸಾರ್ವಜನಿಕರು ಕಿರುಕುಳ ನೀಡಲು ಮುಂದಾದಲ್ಲಿ ಸಂಘ ಮಧ್ಯಸ್ಥಿಕೆ ವಹಿಸುತ್ತದೆ. ಪ್ರಯಾಣಿಕರು ಕಳೆದುಕೊಂಡ ವಸ್ತುಗಳಿಗೆ ಚಾಲಕರು ಜವಾಬ್ಧಾರರಾಗುವುದಿಲ್ಲ. ಆದರೂ ನಮ್ಮಲ್ಲಿನ ಪ್ರಾಮಾಣಿಕ ಚಾಲಕರು ಈ ಹಿಂದೆಯೂ ಪ್ರಯಾಣಿಕರು ಕಳೆದುಕೊಂಡ ಅಮೂಲ್ಯ ವಸ್ತುಗಳನ್ನು ಹಿಂತಿರುಗಿಸಿ ಮಾನವೀಯತೆ ಮೆರೆದಿದ್ದಾರೆ. ನಗರದಲ್ಲಿ ಚಾಲಕರು ಎಂದು ಗುರುತಿಸಬೇಕಾದರೆ, ಆಟೋ ಮಾಲೀಕ - ಚಾಲಕರ ಸಂಘ ಅಥವಾ ಕೊಡಗು ರಕ್ಷಣಾ ವೇದಿಕೆ ಆಟೋ ಘಟಕ ಈ ಎರಡು ಸಂಘಗಳ ಪೈಕಿ ಒಂದು ಸಂಘಕ್ಕೆ ಸದಸ್ಯರಾದಲ್ಲಿ ಮಾತ್ರ ಅಂತಹವರಿಗೆ ಆಟೋ ಚಾಲನೆಗೆ ಅವಕಾಶ ನೀಡಲು ಸಂಘ ನಿರ್ಧರಿಸಿದ್ದು, ಇದಕ್ಕೆ ಪೊಲೀಸ್ ಇಲಾಖೆಯ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಆಟೋ ಚಾಲಕರು ತಮ್ಮ ಆಟೋಗಳನ್ನು ಇತರರಿಗೆ ಓಡಿಸಲು ಕೊಟ್ಟು ಯಾವುದೇ ತೊಂದರೆಗಳಾದರೂ ಅದರ ಸಂಪೂರ್ಣ ಜವಾಬ್ದಾರಿಯನ್ನು ಮಾಲೀಕರೇ ಹೊರಬೇಕಾಗುತ್ತದೆ. ಇದಕ್ಕೆ ಸಂಘದ ಸಹಕಾರವೂ ಸಿಗುವುದಿಲ್ಲ ಎಂದು ನುಡಿದರು.
ಗೋಷ್ಠಿಯಲ್ಲಿ ಆಟೋ ಮಾಲೀಕ- ಚಾಲಕರ ಸಂಘದ ನಗರ ಅಧ್ಯಕ್ಷ ಅರುಣ್ ಕುಮಾರ್, ಉಪಾಧ್ಯಕ್ಷ ಸಮ್ಮದ್, ಕೊರವೇ ಆಟೋ ಘಟಕದ ಅಧ್ಯಕ್ಷ ಸುಲೈಮಾನ್, ಕಾರ್ಯದರ್ಶಿ ರಫೀಕ್, ಬಾಲಕೃಷ್ಣ ಉಪಸ್ಥಿತರಿದ್ದರು.