ಮಡಿಕೇರಿ, ಆ. ೨೬: ನಗರದ ಆಶೋಕಪುರದ ಶ್ರೀ ಅನ್ನಪೂರ್ಣೇಶ್ವರಿ ದೇವಾಲಯ ಸಮಿತಿ ಮಹಾಸಭೆ ಇತ್ತೀಚೆಗೆ ದೇವಾಲಯ ಆವರಣದಲ್ಲಿ ನಡೆಯಿತು.

ಅಧ್ಯಕ್ಷ ಹೆಚ್.ಎಂ. ಜಯರಾಂ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ದೇವಾಲಯ ಅಭಿವೃದ್ಧಿ, ನೂತನ ಸಮುದಾಯ ಭವನ ನಿರ್ಮಾಣ ಸಂಬAಧ ಚರ್ಚೆಗಳು ನಡೆದವು. ನೀಲ ನಕ್ಷೆ ತಯಾರಿಸಿ ದೇವಾಲಯ ಅಭಿವೃದ್ಧಿ ಮುಂದಾಗಲು ನಿರ್ಣಯ ಕೈಗೊಳ್ಳಲಾಯಿತು. ಇದಕ್ಕೆ ಪೂರಕವಾಗಿ ನಗರಸಭೆ ಸೇರಿದಂತೆ ಜನಪ್ರತಿನಿಧಿಗಳಿಂದ ಸರಕಾರದ ಅನುದಾನ ಪಡೆಯುವ ನಿಟ್ಟಿನಲ್ಲಿ ಗಮನ ಸೆಳೆಯುವಂತೆ ನಿರ್ಧರಿಸಲಾಯಿತು.

ಸಮಿತಿಯ ಪದಾಧಿಕಾರಿಗಳು ಮುಂದುವರಿಯುವAತೆ ಸಭೆಯಲ್ಲಿ ಕೇಳಿ ಬಂದ ಹಿನ್ನೆಲೆ ಸಮಿತಿಯನ್ನು ಮುಂದುವರೆಸಲು ಸಭೆ ಒಪ್ಪಿಗೆ ನೀಡಿತು. ಸಮಿತಿಗೆ ನೂತನವಾಗಿ ಸಲಹೆಗಾರರಾಗಿ ಹೆಚ್.ಟಿ. ಶ್ಯಾಂ, ಹೆಚ್.ಆರ್. ಮುತ್ತಪ್ಪ, ಹೆಚ್.ಕೆ. ಜಗದೀಶ್, ನಿರ್ದೇಶಕರಾಗಿ ಎಂ.ಸಿ. ಪ್ರದೀಪ್, ಎಂ.ಎನ್ ನಿರಂಜನ್, ಟಿ.ಪಿ. ಶ್ರೀನಿವಾಸ್, ಹೆಚ್.ಜಿ. ಅನಂತಕುಮಾರ್, ಹೆಚ್.ಪಿ. ಅವಿನ್ ಕುಮಾರ್, ಎಂ.ಕೆ. ವಿದ್ಯಾದರ್ ಅವರುಗಳನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಉಪಾಧ್ಯಕ್ಷ ಹೆಚ್.ಕೆ. ಧರ್ಮೇಂದ್ರ, ಕಾರ್ಯದರ್ಶಿ ಹೆಚ್.ಕೆ. ವೆಂಕಪ್ಪ, ಸಹಕಾರ್ಯದರ್ಶಿ ಜಯಪ್ರಕಾಶ್ ಹಾಜರಿದ್ದರು.