ಕುಶಾಲನಗರ, ಆ.೨೫: ಕುಶಾಲನಗರ ಬಡಾವಣೆ ಯೊಂದರ ಕಸದ ಬುಟ್ಟಿಯಲ್ಲಿ ಅನಾಥ ಮಗುವಿನ ಮೃತ ದೇಹ ವೊಂದು ಪತ್ತೆಯಾಗಿದೆ.
ಶುಕ್ರವಾರ ಬೆಳಗ್ಗೆ ಪೌರಕಾರ್ಮಿಕರು ಎಂದಿನAತೆ ಕುಶಾಲನಗರದ ಪ್ರತಿ ಬಡಾವಣೆಗಳಿಂದ ತ್ಯಾಜ್ಯಗಳನ್ನು ವಾಹನಗಳಲ್ಲಿ ತುಂಬಿ ಹಳೆ ಮಾರುಕಟ್ಟೆ ಆವರಣದಲ್ಲಿ ಕಸ ವಿಂಗಡಣೆ ಮಾಡುವ ಸಂದರ್ಭ ಹೆಣ್ಣು ಮಗುವೊಂದರ ಮೃತದೇಹ ಕಂಡು ಬಂದಿದೆ.
ಕುಶಾಲನಗರದ ಯೋಗಾನಂದ ಬಡಾವಣೆ, ನಿಂಗೇಗೌಡ ಬಡಾವಣೆ ಮತ್ತು ಕಾವೇರಿ ಬಡಾವಣೆ ಭಾಗದಿಂದ ಸಂಗ್ರಹಿಸಿದ ತ್ಯಾಜ್ಯ ಸಂಗ್ರಹ ವಾಹನದಲ್ಲಿ ಈ ಮೃತದೇಹ ಕಂಡು ಬಂದಿದೆ. ವಿಷಯ ತಿಳಿದ ತಕ್ಷಣ ಕುಶಾಲನಗರ ಪುರಸಭೆ ಆರೋಗ್ಯಾಧಿಕಾರಿ ಉದಯಕುಮಾರ್ ಅವರು ಕುಶಾಲನಗರ ಪಟ್ಟಣ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.