ಐಗೂರು, ಆ. ೨೫: ಐಗೂರು ವ್ಯಾಪ್ತಿಯ ಯಡವಾರೆ, ಕಾಜೂರು, ಹಾರಂಗಿ ಹಿನ್ನೀರಿನ ಪ್ರದೇಶಗಳಲ್ಲಿ ಈ ಬಾರಿ ಜೂನ್ ತಿಂಗಳಿAದ ಆಗಸ್ಟ್ ತಿಂಗಳವರೆಗೆ ಕಳೆದ ಸಾಲಿಗಿಂತ ೨೦ ಇಂಚು ಕಡಿಮೆ ಮಳೆ ಆಗಿದ್ದು, ಐಗೂರಿನ ಚೋರನ ಹೊಳೆಯಲ್ಲಿ ನೀರಿನ ಹರಿವು ತೀರಾ ಕಡಿಮೆ ಆಗಿದೆ. ಜಲಮೂಲಗಳು ಕೂಡ ಬತ್ತಿ ಹೋಗಿದ್ದು, ಬಿಸಿಲಿನ ತಾಪಕ್ಕೆ ಗದ್ದೆಗಳು ಮತ್ತು ಕಾಳುಮೆಣಸಿನ ಬಳ್ಳಿಗಳು ಒಣಗಿ ಹೋಗುವುದರೊಂದಿಗೆ ಕುಡಿಯುವ ನೀರಿಗೂ ಬರ ಉಂಟಾಗುವ ಲಕ್ಷಣ ಕಂಡುಬರುತ್ತಿದೆ.

ಯಡವಾರೆ ಭಾಗದಲ್ಲಿ ಕಾಳುಮೆಣಸಿನ ಫಸಲುಗಳು ಬೆಳವಣಿಗೆ ಕಾಣದೆ ಮೆಣಸಿಗೆ ರೋಗ ಬರುವ ಲಕ್ಷಣಗಳಿವೆ ಎಂದು ಈ ಭಾಗದ ಬೆಳೆಗಾರರಾದ ಬಾರನ ಮಂಜು ತಿಳಿಸಿದ್ದಾರೆ.

- ಎಂ.ಎ. ಸುಕುಮಾರ