ವೀರಾಜಪೇಟೆ, ಆ. ೨೬: ಕಳಂಚೇರಿ ಮಠದ ಸಂಸ್ಥಾಪಕರಾದ ಶಾಂತಮಲ್ಲ ಸ್ವಾಮಿಗಳ ೨೬ನೇ ಪುಣ್ಯ ಸ್ಮರಣೆಯನ್ನು ಸಂಸ್ಥೆಯ ಆವರಣದಲ್ಲಿ ಆಚರಿಸಲಾಯಿತು.
ಸಂಸ್ಮರಣ ಕಾರ್ಯಕ್ರಮದಲ್ಲಿ ಸಾನಿಧ್ಯವನ್ನು ವಹಿಸಿದ್ದ ಕಳಂಚೇರಿ ಮಠದ ಪೀಠಾಧಿಪತಿಗಳಾದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿಗಳು ಮಾತನಾಡಿ, ಶ್ರೀ ಮಠದ ಹಿನ್ನೆಲೆ, ನಡೆದುಕೊಂಡು ಬಂದ ರೀತಿ, ಗುರುಗಳ ಕನಸನ್ನು ನನಸಾಗಿಸುವಲ್ಲಿ ತಮ್ಮ ಪ್ರಯತ್ನ ಇನ್ನೂ ಕೂಡ ಮುಂದುವರಿಯಲಿದೆ. ಸಮಾಜಕ್ಕೆ ವೈದ್ಯಕೀಯ ಸೇವೆಯನ್ನು ಕೊಡುವ ತಮ್ಮ ದೂರದೃಷ್ಟಿಯ ಚಿಂತನೆಯನ್ನು ವ್ಯಕ್ತಪಡಿಸಿದರು.
ಈ ಸಂದರ್ಭ ಎಸ್ಎಮ್ಎಸ್ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ನಿರ್ದೇಶಕರುಗಳಾದ ಎನ್.ಸಿ ಚನ್ನಬಸವಯ್ಯ ಮಾತನಾಡಿ, ತಮ್ಮ ಪೂರ್ವಾಶ್ರಮದ ಸಹೋದರ ರಾಗಿದ್ದ ಲಿಂಗೈಕ್ಯ ಶಾಂತಮಲ್ಲ ಸ್ವಾಮಿಗಳನ್ನು ಸ್ಮರಿಸಿಕೊಳ್ಳುತ್ತಾ ಅವರ ಕನಸಿನ ಈ ವಿದ್ಯಾದೇಗುಲವು ವಿದ್ಯಾರ್ಥಿಗಳಿಗೆ ಬದುಕನ್ನು ಕಟ್ಟಿಕೊಳ್ಳಲು ಉತ್ತಮ ಅವಕಾಶವನ್ನು ಒದಗಿಸುತ್ತಿದ್ದು, ಇನ್ನಷ್ಟು ಇದರ ಕೀರ್ತಿ ಬೆಳಗಲಿ ಎಂದು ಹಾರೈಸಿದರು.
ಪ್ರಕಾಶ್ ಅವರು ಮಾತನಾಡಿ ಶ್ರೀ ಮಠದ ವಾತಾವರಣವು ವಿದ್ಯಾರ್ಥಿ ಗಳಲ್ಲಿ ಉತ್ತಮ ಸಂಸ್ಕöÈತಿಯನ್ನು, ಸಾತ್ವಿಕ ಮನೋಭಾವನೆಯನ್ನು ಬೆಳೆಸುವಲ್ಲಿ ಸಹಕಾರಿಯಾಗಲಿದೆ ಎಂದರು.
ಎಸ್ಎಮ್ಎಸ್ ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ಕುಸುಮ್ ಟಿಟೋ ಮಾತನಾಡಿ, ವ್ಯಕ್ತಿ ತಾನು ಬದುಕಿರುವಾಗ ಮಾಡಿದ ಸಾಧನೆಗಿಂತಲೂ ಮುಂದಿನ ಪೀಳಿಗೆಗಾಗಿ ದಾರಿ ತೋರುವಂತಹ ಶ್ರೇಷ್ಠ ಸಾಧನೆಗಳನ್ನು ನಾವು ಮಾಡಬೇಕಿದೆ. ಅಂತಹ ಕೆಲವೇ ಕೆಲವು ಶ್ರೇಷ್ಠರಲ್ಲಿ ಕಳಂಚೇರಿ ಮಠದ ಶಾಂತ ಮಲ್ಲ ಸ್ವಾಮಿಗಳು ಒಬ್ಬರು. ಅವರ ಹೆಸರಿನ ಈ ವಿದ್ಯಾ ಸಂಸ್ಥೆಯು ಇಂದು ದೇಶಿಯ ಮಟ್ಟದಲ್ಲೂ ಹೆಸರು ಗಳಿಸುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಸಂಸ್ಥೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಜಾನಕಿ ಕೆ.ಎ ಹಾಗೂ ಗೈಡ್ ವಿಭಾಗದ ಜಿಲ್ಲಾ ಆಯುಕ್ತರಾದ, ಸಂಸ್ಥೆಯ ಶಿಕ್ಷಕಿ ಮೈಥಿಲಿ ರಾವ್ ಹೆಚ್. ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಎಸ್ಎಂಎಸ್ ಆಡಳಿತ ಮಂಡಳಿಯ ಶಿವಕುಮಾರ್, ಉಮಾಪತಿ, ಕವಿತಾ ಉಮಾಪತಿ, ಎಸ್ಎಮ್ಎಸ್ ಪಿ.ಯು ಕಾಲೇಜಿನ ಆಡಳಿತ ಮಂಡಳಿ ನಿರ್ದೇಶಕರಾದ ಸಚಿನ್, ಕಾಲೇಜಿನ ಪ್ರಾಂಶುಪಾಲ ರಾದ ಸಪ್ನ ಸುಬ್ಬಯ್ಯ ಹಾಜರಿದ್ದರು. ಶಿಕ್ಷಕರಾಧ ಕೆ. ಭೀಮಯ್ಯ ಸ್ವಾಗತಿಸಿ ವಂದಿಸಿದರು. ರಿನಿ ನಿರೂಪಿಸಿದರು.